ಕರ್ನಾಟಕ

43 ಹೊಸ ತಾಲೂಕುಗಳ ರಚನೆ

Pinterest LinkedIn Tumblr

kar

ಬೆಂಗಳೂರು, ಜು.22: ರಾಜ್ಯದಲ್ಲಿ 43 ತಾಲೂಕುಗಳ ರಚನೆಗೆ ಸರ್ಕಾರ ಬದ್ಧವಿದೆ. ಯಾವುದೇ ಕಾರಣಕ್ಕೂ ಈ ಪ್ರಸ್ತಾವನೆಯನ್ನು ಕೈ ಬಿಡುವುದಿಲ್ಲ. ಒಂದೇ ಹಂತದಲ್ಲಿ ಈ ಎಲ್ಲಾ ತಾಲೂಕುಗಳನ್ನು ರಚನೆ ಮಾಡಲಾಗುವುದು ಎಂದು ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ಅವರು ವಿಧಾನಪರಿಷತ್ತಿನಲ್ಲಿ ಇಂದು ಸ್ಪಷ್ಟಪಡಿಸಿದ್ದಾರೆ.

ತಾಲೂಕುಗಳ ರಚನೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಹಂತ ಹಂತವಾಗಿ ತಾಲೂಕು ರಚಿಸುವ ಪ್ರಶ್ನೆಯೇ ಇಲ್ಲ. ಏಕಕಾಲದಲ್ಲಿ ತಾಲೂಕುಗಳನ್ನು ರಚಿಸಬೇಕೆಂದು ಚರ್ಚೆ ವೇಳೆ ಹೇಳಿದ್ದೇವೆ ಎಂದು ತಿಳಿಸಿದರು.

ಬಿಜೆಪಿಯ ಕೋಟಾ ಶ್ರೀನಿವಾಸ್ ಪೂಜಾರಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ರಾಜಕೀಯ ಕಾರಣಗಳಿಗಾಗಿ 43 ತಾಲ್ಲೂಕುಗಳ ರಚನೆಯನ್ನು ಘೋಷಣೆ ಮಾಡಿತ್ತು.

ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ ವರದಿಗಳನ್ನು ಹೊರತುಪಡಿಸಿ 5 ತಾಲ್ಲೂಕುಗಳನ್ನು ಸೇರ್ಪಡೆಗೊಳಿಸಿದ್ದರು ಎಂದು ಹೇಳಿದರು.

ಪ್ರತಿ ತಾಲ್ಲೂಕುಗಳ ರಚನೆಗಳಿಗೆ 25 ಕೋಟಿ ರೂ. ವೆಚ್ಚ ತಗಲಿವೆ. ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಒಂದೇ ಹಂತದಲ್ಲಿ ತಾಲ್ಲೂಕುಗಳ ಕಾರ್ಯಾರಂಭ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

43 ತಾಲ್ಲೂಕುಗಳು ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಬರಲಿದೆ. ಆದಷ್ಟು ಬೇಗ ತಾಲ್ಲೂಕುಗಳನ್ನು ರಚಿಸಬೇಕೆಂದು ಒತ್ತಡ ಹೇರಲಾಗುತ್ತಿದೆ ಎಂದರು.

Write A Comment