ಕರ್ನಾಟಕ

ಉಪ್ಪಿ-2 ಆಡಿಯೋ ಬಿಡುಗಡೆ ಧಮಾಕಾ

Pinterest LinkedIn Tumblr

Uppi-audio-launchಬೆಂಗಳೂರು: ನಟ ನಿರ್ದೇಶಕ ಉಪೇಂದ್ರ ಅವರ ಅಭಿಮಾನಿಗಳ ಜೊತೆ ರುಪ್ಪೀಸ್ ರೆಸಾರ್ಟ್ ನಲ್ಲಿ ಉಪ್ಪಿ-೨ ಸಿನೆಮಾದ ಆಡಿಯೋ ವೈಭವಯುತವಾಗಿ ಅನಾವರಣಗೊಂಡಿತು. ರಮೇಶ್ ದೇಂಬ್ಲಾ ಅವರ ನಿರ್ದೇಶನದಲ್ಲಿ ಉಪೇಂದ್ರ ಅವರ ಪತ್ನಿ ಪ್ರಿಯಾಂಕ ಉಪೇಂದ್ರ ಫ್ಯಾಶನ್ ಶೋ ನಡೆಸಿದ್ದು ನೆರೆದಿದ್ದವರ ಕಣ್ಮನ ಸೆಳೆಯಿತು. ಹಾಗೆಯೇ ತಮ್ಮ ನಿರ್ದೇಶನದ ಈ ಚಿತ್ರದ ಎರಡು ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಉಪೇಂದ್ರ ತಮ್ಮ ಅಭಿಮಾನಿಗಳನ್ನು ರಂಜಿಸಿದರು.

ಗುರುಕಿರಣ್ ಸಂಗೀತ ನಿರ್ದೇಶನದ ಹಾಡುಗಳು ರೇಡಿಯೋ ಚಾನಲ್ ಗಳಲ್ಲಿ ಅತಿ ಹೆಚ್ಚು ಜನಪ್ರಿಯವಾಗಿವೆಯಂತೆ. ಹಲವು ವರ್ಷಗಳ ನಂತರ ಈ ಜೋಡಿ ಒಂದಾಗಿದ್ದು ಸಿನೆಮಾ ಬಗ್ಗೆ ಕುತೂಹಲ ಇಮ್ಮಡಿಸಿದೆಯಂತೆ. ಅದರಲ್ಲಿ ‘ಎಲ್ಲರ ಕಾಲ್ ಎಳಿತದೆ ಕಾಲ’ ಎಂಬ ಹಾಡು ವೈರಲ್ ಆಗುತ್ತಿದೆ ಎನ್ನುತ್ತದೆ ಚಿತ್ರತಂಡ. ಉಪೇಂದ್ರ ಅವರೇ ಹಾಡಿರುವ ಈ ಹಾಡಿನಲ್ಲಿ ಕನ್ನಡ ಚಿತ್ರೋದ್ಯಮದ ಸ್ಥಿತಿಗತಿಗಳನ್ನು ಲೇವಡಿ ಮಾಡುವ ಮೂಲಕ ಹಾಸ್ಯ ಲೇಪನ ಹಚ್ಚಿದ್ದಾರಂತೆ.

ಉಪ್ಪಿ-೨ ಸಿನೆಮಾದ ಒಂದು ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೂಡ ಹಾಡಿದ್ದಾರೆ. ವಿಜಯ್ ಪ್ರಕಾಶ್, ಚೈತ್ರ ನಿತಿನ್, ರಾಜಾರಾಂ ಶಾಸ್ತ್ರಿ ಇತರ ಗಾಯಕರು.

Write A Comment