ಕರ್ನಾಟಕ

ಇಸ್ರೋದ ವೆಬ್‌ಸೈಟ್ ಹ್ಯಾಕ್

Pinterest LinkedIn Tumblr

isro

ಬೆಂಗಳೂರು, ಜು.13: ಇಸ್ರೋದ ವಾಣಿಜ್ಯ ವಿಭಾಗವಾದ ಆ್ಯಂಟ್ರಿಕ್ಸ್ ಕಾರ್ಪೊರೇಶನ್.ಲಿ.ನ ವೆಬ್‌ಸೈಟನ್ನು ಇಂದು ಹ್ಯಾಕ್ ಮಾಡಲಾಗಿದೆಯೆಂದು ವರದಿಯಾಗಿದೆ. ಅದನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆಯೆಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಆ್ಯಂಟ್ರಿಕ್ಸ್ ಕಾರ್ಪೊರೇಶನ್.ಲಿ.ನ ವೆಬ್‌ಸೈಟ್‌ನ ಹೋಂ ಪೇಜನ್ನು ಹ್ಯಾಕ್ ಮಾಡಿರುವಂತೆ ತೋರುತ್ತಿದೆ. ತಾವಿದನ್ನು ಈಗಾಗಲೇ ಆ್ಯಂಟ್ರಿಕ್ಸ್‌ನ ಅಧಿಕಾರಿಗಳಿಗೆ ತಿಳಿಸಿದ್ದು, ಅವರು ಸಮಸ್ಯೆಯನ್ನು ನಿಭಾಯಿಸುತ್ತಿದ್ದಾರೆಂದು ಇಸ್ರೋದ ಹಿರಿಯಾಧಿಕಾರಿಯೊಬ್ಬರು ಹೇಳಿದ್ದಾರೆ.

ವೆಬ್‌ಸೈಟ್‌ನ ಉಳಿದ ಪುಟ ಗಳು ಚೆನ್ನಾಗಿವೆ. ಆದಾಗ್ಯೂ, ಆ್ಯಂಟ್ರಿಕ್ಸ್‌ನ ಅಧಿಕಾರಿಗಳು ಸಮಸ್ಯೆ ಯನ್ನು ಕಂಡು ಹಿಡಿದು ಪರಿಹರಿಸಲು ಪ್ರಯತ್ನಿಸುತ್ತಿದ್ದಾರೆಂದು ಅವರು ತಿಳಿಸಿದ್ದಾರೆ.ಸೈಟ್ ಸರಿಪಡಿಸಲು ಎಷ್ಟು ಸಮಯ ತಗಲಬಹುದೆಂಬ ಪ್ರಶ್ನೆಗೆ, ಈ ಹಂತದಲ್ಲಿ ತಾನು, ಅಧಿಕಾರಿಗಳು ಸಮಸ್ಯೆ ಸರಿಪಡಿಸಲು ಪ್ರಯತ್ನಿಸ್ತುತಿದ್ದಾರೆಂದಷ್ಟೇ ಹೇಳಬಲ್ಲೆನೆಂದು ಅಧಿಕಾರಿ ಉತ್ತರಿಸಿದ್ದಾರೆ.

ಆದಾಗ್ಯೂ, ವೆಬ್‌ಸೈಟ್ ‘ನಿರ್ಮಾಣದಲ್ಲಿದೆ’ಯೆಂದು ಅಜ್ಞಾತವಾಗುಳಿಯ ಬಯಸಿರುವ ಅವರು ತಿಳಿಸಿದ್ದಾರೆ.
ಹ್ಯಾಕಿಂಗ್‌ನಲ್ಲಿ ಚೀನೀಯರ ಕೈವಾಡವಿರುವ ಶಂಕೆಯಿದೆಯೇ ಎಂದು ಕೇಳಿದಾಗ, ತಾವದನ್ನು ದೃಢಪಡಿಸಲು ಸಾಧ್ಯವಿಲ್ಲ. ಆದರೆ, ಆ್ಯಂಟ್ರಿಕ್ಸ್ ಅಧಿಕಾರಿಗಳು ದೋಷದ ಕುರಿತು ಪರಿಶೀಲಿಸುತ್ತಿದ್ದಾರೆಂದು ಅಧಿಕಾರಿ ಹೇಳಿದ್ದಾರೆ.

ಇಸ್ರೋ, ಶ್ರೀಹರಿಕೋಟಾದಿಂದ ಪಿಎಸ್‌ಎಲ್‌ವಿ-ಸಿ28ರ ಮೂಲಕ, ಐದು ಬ್ರಿಟಿಷ್ ವಾಣಿಜ್ಯ ಉಪಗ್ರಹಗಳನ್ನು ಯಶಸ್ವಿಯಾಗಿ ಹಾರಿಸಿದ ಎರಡು ದಿನಗಳ ಬಳಿಕ ಈ ಘಟನೆ ಸಂಭವಿಸಿದೆ.

Write A Comment