ಕರ್ನಾಟಕ

ಪತಿಯ ಗೆಳತಿಗೆ ಠಾಣೆಯಲ್ಲಿಯೇ ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ

Pinterest LinkedIn Tumblr

6999beat

ಧಾರವಾಡ: ತನ್ನ ಪತಿ ಮತ್ತೊಬ್ಬಳ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆಂಬ ಶಂಕೆ ಹೊಂದಿದ್ದ ಮಹಿಳೆಯೊಬ್ಬರು ಪತಿಯನ್ನು ಹಿಂಬಾಲಿಸಿ ರೆಡ್ ಹ್ಯಾಂಡಾಗಿ ಹಿಡಿದಿದ್ದು, ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದ ವೇಳೆ ಪತಿಯ ಗೆಳತಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ.

ಮೂಲತಃ ಆಂಧ್ರಪ್ರದೇಶದ ಮಾರ್ಗಿಯೋ ಎಂಬಾತ ರಾಯಪುರದ ಪ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಈ ಹಿಂದೆ ಗುಂಟೂರಿನಲ್ಲಿ ಎನ್.ಜಿ.ಓ. ಒಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ತನ್ನೊಂದಿಗಿದ್ದ ಗೌರಿ ಎಂಬಾಕೆ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದನೆನ್ನಲಾಗಿದೆ. ಈ ಮೊದಲೇ ಮೀನಾಕ್ಷಿ ಎಂಬ ಯುವತಿಯೊಂದಿಗೆ ವಿವಾಹವಾಗಿದ್ದ ಮಾರ್ಗಿಯೋ ತನ್ನ ಅಕ್ರಮ ಸಂಬಂಧ ಬಯಲಾಗುತ್ತದೆಂಬ ಕಾರಣಕ್ಕಾಗಿ ಧಾರವಾಡದಲ್ಲಿ ಬಂದು ನೆಲೆಸಿದ್ದನೆಂದು ಹೇಳಲಾಗಿದೆ.

ತಾನು ಸಂಬಂಧ ಹೊಂದಿದ್ದ ಗೌರಿ ಜೊತೆ ಆತ ಎರಡನೇ ವಿವಾಹವಾಗಿದ್ದು, ಆಕೆಯನ್ನು ನವಲೂರು ಗ್ರಾಮದಲ್ಲಿ ಮನೆ ಮಾಡಿಟ್ಟಿದ್ದರೆ ತಾನು ಮೊದಲ ಪತ್ನಿ ಮೀನಾಕ್ಷಿ ಜೊತೆ ಅಳ್ನಾವರದಲ್ಲಿದ್ದನೆನ್ನಲಾಗಿದೆ. ಪತಿಯ ನಡತೆ ಕುರಿತು ಸಂಶಯ ಹೊಂದಿದ್ದ ಮೊದಲ ಪತ್ನಿ ಮೀನಾಕ್ಷಿ ಶನಿವಾರದಂದು ಪತಿಯನ್ನು ಹಿಂಬಾಲಿಸಿದ್ದು, ಗೌರಿ ಇದ್ದ ನವಲೂರು ನಿವಾಸಕ್ಕೆ ಆತ ಭೇಟಿ ನೀಡಿದ ವೇಳೆ ರೆಡ್ ಹ್ಯಾಂಡಾಗಿ ಹಿಡಿದಿದ್ದಾಳೆ.

ಬಳಿಕ ಕುಟುಂಬಸ್ಥರೊಂದಿಗೆ ಸೇರಿ ಇಬ್ಬರನ್ನೂ ವಿದ್ಯಾಗಿರಿ ಠಾಣೆಗೆ ಕರೆದುಕೊಂಡು ಬಂದಿದ್ದು, ಈ ವೇಳೆ ಮೀನಾಕ್ಷಿ, ತನ್ನ ಪತಿಯೊಂದಿಗೆ ಸಂಬಂಧ ಹೊಂದಿದ್ದ ಗೌರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ತಕ್ಷಣವೇ ಮಧ್ಯ ಪ್ರವೇಶಿಸಿದ ಪೊಲೀಸರು ಇಬ್ಬರನ್ನೂ ಬಿಡಿಸಿದ್ದು, ಇದನ್ನು ಚಿತ್ರೀಕರಿಸಲು ಮುಂದಾದ ಮಾಧ್ಯಮದವರ ಮೇಲೆ ಹರಿಹಾಯ್ದಿದ್ದಾರೆ.

Write A Comment