ಕರ್ನಾಟಕ

ಲೋಕಾಯುಕ್ತ ಹಗರಣದ ಸತ್ಯಾಸತ್ಯತೆ ಹೊರಬರಲು ಸಿಬಿಐಗೆ ವಹಿಸುವುದು ಸೂಕ್ತ : ನ್ಯಾ.ಸಂತೋಷ್ ಹೆಗ್ಡೆ

Pinterest LinkedIn Tumblr

pvec11Ap15santhosh hegde1

ಹಾವೇರಿ, ಜು.6: ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಆಗ ಮಾತ್ರ ಸತ್ಯಾಸತ್ಯತೆ ಹೊರಬರಲು ಸಾಧ್ಯ ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಹಾವೇರಿಯಲ್ಲಿಂದು ಮಾತನಾಡಿದ ಅವರು, ನ್ಯಾಯಮೂರ್ತಿಗಳ ಆಯ್ಕೆಯಲ್ಲಿ ಬಹಳ ಎಚ್ಚರಿಕೆ ವಹಿಸಬೇಕು. ಆಗ ಮಾತ್ರ ಲೋಕಾಯುಕ್ತ ಸಂಸ್ಥೆಗೆ ಗೌರವ ಬರುತ್ತದೆ ಎಂದರು. ನ್ಯಾಯಮೂರ್ತಿಗಳನ್ನು ನೇಮಕ ಮಾಡುವಾಗ ಅವರ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕು. ಇದರಿಂದ ಇಂತಹ ಘಟನೆಗಳು ಜರುಗಲು ಆಸ್ಪದವಿಲ್ಲದಂತಾಗುತ್ತದೆ ಎಂದರು. ಕರ್ನಾಟಕ ಲೋಕಾಯುಕ್ತ ಸಂಸ್ಥೆ ಕೆಟ್ಟದ್ದಲ್ಲ ನನಗೆ ಆ ಸಂಸ್ಥೆಯ ಬಗ್ಗೆ ಗೌರವವಿದೆ ಹಾಗಾಗಿ ನಾನು ಈ ಮಾತನ್ನು ಹೇಳುತ್ತಿದ್ದೇನೆ ಎಂದರು. ತಮಗೆ ಮತ್ತೆ ಲೋಕಾಯುಕ್ತ ಆಗುವ ಆಸೆಯಿಲ್ಲ ಎಂದು ಸ್ಪಷ್ಟಪಡಿಸಿದರು.

Write A Comment