ಕರ್ನಾಟಕ

ಜೆಡಿಎಸ್ ನ ಪಾದಯಾತ್ರೆಯ ಯಶಸ್ಸು ಕಂಡು ದಂಗಾದ ಕಾಂಗ್ರೆಸ್ಸ್-ಬಿಜೆಪಿ !

Pinterest LinkedIn Tumblr

HDK-Rally-Belgum-001

ಬೆಳಗಾವಿ, ಜೂ.30:  ಉತ್ತರ ಕರ್ನಾಟಕದ ಹೆಬ್ಬಾಗಿಲು ಬೆಳಗಾವಿಯಲ್ಲಿ ಜೆಡಿಎಸ್ ಸೋಮವಾರ ನಡೆಸಿದ ಪಾದಯಾತ್ರೆ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿರುವುದು ಎರಡು ರಾಷ್ಟ್ರೀಯ ಪಕ್ಷಗಳನ್ನು ನಿದ್ದೆಗೆಡುವಂತೆ ಮಾಡಿದೆ. ಈ ಭಾಗದಲ್ಲಿ ಜೆಡಿಎಸ್‌ಗೆ ಹೇಳಿಕೊಳ್ಳುವಂತಹ ಭದ್ರ ನೆಲೆ ಇರಲಿಲ್ಲಿ.

ಉತ್ತರ ಕರ್ನಾಟಕದ ಸರಿಸುಮಾರು 10 ರಿಂದ 12 ಜಿಲ್ಲೆಗಳಲ್ಲಿ ತೆನೆಹೊತ್ತ ಮಹಿಳೆಗೆ ಇದ್ದದ್ದು ಬೆರಳಿಣಿಕೆಯ ಶಾಸಕರು ಮಾತ್ರ. ದಕ್ಷಿಣ ಕರ್ನಾಟಕಕ್ಕೆ ಮಾತ್ರ ಸೀಮಿತ ಎಂದು ವಿರೋಧಿಗಳ ಕುಹಕವನ್ನು ಹುಸಿಯಾಗುವಂತೆ ಮಾಡಿದೆ ಪಾದಯಾತ್ರೆ. ಸ್ವತಃ ಜೆಡಿಎಸ್ ಸಾರಥಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ತಮ್ಮ ಪಾದಯಾತ್ರೆ ಇಷ್ಟು ಯಶಸ್ವಿಯಾಗಿ ನಡೆಯುತ್ತದೆ ಎಂಬ ಭರವಸೆ ಇರಲಿಲ್ಲ. ಕಾರ್ಯಕರ್ತರು ಕೊನೆ ಕ್ಷಣದಲ್ಲಿ ಕೈ ಕೊಡುತ್ತಾರೋ ಎಂಬ ಆಳಕು ಕಾಡುತ್ತಿತ್ತು. ಆಪ್ತರೇ ಹೇಳುವಂತೆ 11 ಗಂಟೆಗೆ ಕಿತ್ತೂರು ರಾಣಿ ಚನ್ನಮ್ಮ ವೃತ್ತಕ್ಕೆ ವಿಳಂಬವಾಗಿ ಬರಲು ಕಾರಣ ಹೆಚ್ಚಿನ ಕಾರ್ಯಕರ್ತರು  ಸಮಾವೇಶಕ್ಕೆ ಬರುತ್ತಾರೋ ಇಲ್ಲವೋ ಎಂಬ ಭಯ ಇದ್ದೇ ಇತ್ತು.

ಆದರೆ ದಳಪತಿಗಳೇ ಅಚ್ಚರಿಪಡುವಂತೆ ಜನಸ್ತೋಮ ಜಮಾಯಿಸಿದ್ದನ್ನು ಒಂದು ಕ್ಷಣ ಪಕ್ಷದ ವರಿಷ್ಟ ದೇವೇಗೌಡರು ಹಾಗೂ ಕುಮಾರಸ್ವಾಮಿ ಹೌ ಹಾರಿದರು. ನಿರೀಕ್ಷೆ ಮಾಡಿದ್ದು 5 ಸಾವಿರ. ಆದರೆ ಕ್ರೀಡಂಗಾಣದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು ಸೇರಿದ್ದರು. ಇನ್ನು ಸಿಪಿಈಡಿ ಕ್ರೀಡಂಗಾಣದ ಸುತ್ತ ಮುತ್ತಾ ಇಕ್ಕೆಲೆಗಳಲ್ಲೂ ಭಾರೀ ಸಂಖ್ಯೆಯ ಜನ ಜಮಾಯಿಸಿದ್ದರು.  ಪಾದಯಾತ್ರೆ ಯಶಸ್ವಿಯಾಗಿರುವುದು ಇದೀಗ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ ನಿದ್ದೆಗೆಡುವಂತೆ ಮಾಡಿದೆ. ಮೊದಲು ಜೆಡಿಎಸ್ ಪಾದಯಾತ್ರೆಯನ್ನು ಸರ್ಕಾರವಾಗಲೀ ಇಲ್ಲವೆ ಅಧಿಕೃತ ವಿರೋಧ ಪಕ್ಷ ಗಂಭೀರವಾಗಿ ಪರಿಗಣಿಸಲಿಲ್ಲ. ಈ ಭಾಗದಲ್ಲಿ ಜೆಡಿಎಸ್‌ಗೆ ಗ್ರಾಪಂ ಸದಸ್ಯರು ಕೂಡಾ ಇಲ್ಲ. ಇನ್ನು ಪಾದಯಾತ್ರೆಗೆ ಅಂತಹ ಬೆಂಬಲ ಸಿಗುವುದಿಲ್ಲ ಎಂದು ಎರಡು ಪಕ್ಷಗಳು ಮನಸ್ಸೀನಲ್ಲೇ ಮಂಡಕ್ಕಿ ಮಿಯುತ್ತೀದ್ದವು.

ಆದರೆ ಪಾದಯಾತ್ರೆ ಯಶಸ್ವಿಯಾಗಿರುವುದು ನಮ್ಮ ಲೆಕ್ಕಚಾರ ತಪ್ಪಿ ಹೋಯಿತು ಎಂದು ಕೈ ಕೈ ಹಿಚುಕಿ ಕೊಳ್ಳುತ್ತಿದ್ದಾರೆ. ಅದರಲ್ಲೂ ಈ ಭಾಗದಲ್ಲಿ ಪ್ರಬಲವಾಗಿರುವ ಬಿಜೆಪಿಗೆ ಮುಂದಿನ ಚುನಾವಣೆಗೆ ಜೆಡಿಎಸ್ ಪ್ರಬಲ ಸ್ಪರ್ಧೆ ನೀಡಬಹುದೆನೋ ಎಂಬ ಆತಂಕ ಕಾಡುತ್ತಿದೆ.
ಬಿಜೆಪಿ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಶಾಸಕರು ಹಾಗೂ ಸಂಸದರನ್ನು ಹೊಂದಿದೆ.ಅದರಲ್ಲೂ ಕಮಲ ಪಕ್ಷಕ್ಕೆ ಬೆನ್ನಲುಬಿಗೆ ನಿಂತಿರುವ  ಲಿಂಗಾಯಿತ ಮತಗಳ ಮೇಲೆ ತೆನೆಹೊತ್ತ ಹೊತ್ತ ಮಹಿಳೆ ಸವಾರಿ ಮಾಡಬಹುದೆನೋ ಎಂದು ಭಯ ಆವರಿಸಿಕೊಂಡಿದೆ. ಅದರಲ್ಲೂ ಈ ಭಾಗದಲ್ಲಿ ಕುಮಾರಸ್ವಾಮಿ ಅವರಿಗೆ ವ್ಯಕ್ತವಾದ ಜನ ಬೆಂಬಲ ಕಂಡು ಬಿಜೆಪಿಗೆ ಇನ್ನಷ್ಟು ನಿದ್ದೆಗೆಡಿಸಿದೆ. ಇದೇ ಭಾಗದವರಾದ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಪಕ್ಷದ ರಾಜ್ಯಧ್ಯಕ್ಷ ಪ್ರಹ್ಲದ್ ಜೋಶಿ ಅವರ ಬೆನ್ನ ಹಿಂದೆ ಹತ್ತು ಮಂದಿ ಕಾರ್ಯಕರ್ತರು ಇರುವುದಿಲ್ಲ. ಆದರೆ ಜೆಡಿಎಸ್‌ಗೆ ಅದೇಗೆ ಜನಬೆಂಬಲ ವ್ಯಕ್ತವಾಯಿತೋ ಎಂದು ಕಮಲ ಪಕ್ಷದ ನಾಯಕರು ಮಾತನಾಡಿಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿ ಏಕಾಂಗಿಯಾಗಿ ಪಾದಯಾತ್ರೆ ನಡೆಸಿ ಯಶಸ್ವಿಗೊಳಿಸಿದ್ದಾರೆ. ನಮ್ಮ ಪಕ್ಷ ಬಡ ಅಂಕಲಗಿ ಗ್ರಾಮದಿಂದ ಸುವರ್ಣಸೌಧಕ್ಕೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಾಗಲು ಠುಸ್ ಪಟಾಕಿ ಹೊಡೆಯಿತು.

ಬಿಸಿ ಬಿಸಿ ಚರ್ಚೆ:
ಇನ್ನು ಅಧಿವೇಶನದಲ್ಲಿ  ಕಾರ್ಯತಂತ್ರ ಹೆಣೆಯಲು ಸೋಮವಾರ ಸಂಜೆ ಕರೆಯಲಾಗಿದ್ದ ಶಾಸಕಾಂಗ ಸಭೆಯಲ್ಲೂ ಇದೇ ವಿಷಯವಾಗಿ ಸುದೀರ್ಘ ಚರ್ಚೆ ನಡೆದಿದೆ ಎಂದು ಗೊತ್ತಾಗಿದೆ. ನಮ್ಮ ಎಲ್ಲ ಹೋರಾಟಗಳು ವಿಫಲವಾಗುತ್ತಿವೆ. ಪ್ರತಿಯೊಂದು ಹೋರಾಟದ ಶ್ರೇಯಸ್ಸನ್ನು ಜೆಡಿಎಸ್ ಪಡೆಯುತ್ತಿದೆ. ನಾವು ಎಲ್ಲಿ ವಿಪಲರಾಗಿದ್ದೇವೆಂದು ನಾಯಕರೇ ಪ್ರಶ್ನೆ ಮಾಡಿಕೊಂಡಿದ್ದಾರೆ. ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನ ಪ್ರರಕಣ , ಒಂದಂಕಿ ಲಾಟರಿ ಹಗರಣ, ಅಕ್ರಮ ಮರಳು ದಂಧೆ , ರೈತರ ಸರಣಿ ಸಾವು, ಸೇರಿದಂತೆ ಪ್ರಚಲಿತ ಸಮಸ್ಯೆಗಳ ಬಗ್ಗೆ   ಸರ್ಕಾರದ ವಿರುದ್ದ ಸದನದ ಒಳಗೂ, ಹೊರಗೂ ನಡೆಸುತ್ತಿರುವ ಹೋರಾಟದ  ಶ್ರೇಯಸ್ಸು ಜೆಡಿಎಸ್ ಸಲ್ಲುತ್ತಿರುವುದಕ್ಕೆ ಬಿಜೆಪಿ ಕೈ ಕೈ ಹಿಸುಕಿಕೊಳ್ಳುವಂತೆ ಮಾಡಿದೆ. ಇದೇ ರೀತಿ ಪಕ್ಷದಲ್ಲಿ ಗುಂಪುಗಾರಿಕೆ ನಡೆಸುತ್ತಾ ಹೋದರೆ ಮುಂದಿನ ವಿಧಾನಸಭೆ ಚುನಾವಣೆಯ ವೇಳೆಗೆ ಇನ್ನಷ್ಟು ಪ್ರಬಲವಾಗುತ್ತದೆ. ಇದಕ್ಕೆ ಅವಕಾಶ ನೀಡದೆ ಎಲ್ಲ ವೈ ಮನಸ್ಸುಗಳನ್ನು ಬದಿಗೊತ್ತಿ ಪಕ್ಷದ ಸಂಘಟನೆ ಒತ್ತು ನೀಡುವುದು, ಸರ್ಕಾರದ ವಿರುದ್ದ ಹೋರಾಟ ಮಾಡುವಾಗ ಜೆಡಿಎಸ್ ಜೊತೆ ಕೈ ಜೋಡಿಸದೆ ಅಂತರ ಕಾಪಾಡಿಕೊಳ್ಳಬೇಕು ಎಂಬ ಮಾತು ಕೇಳಿ ಬಂದಿದೆ.

Write A Comment