ಕರ್ನಾಟಕ

ಅಮೃತ ಬಳ್ಳಿ ಇದು ಬರೀ ಹೆಸರಲ್ಲ…ಅಮೃತ

Pinterest LinkedIn Tumblr

5595amruta balliಅಮೃತ ಬಳ್ಳಿ ಎಂಬುದು ಮನೆಯಂಗಳದಲ್ಲಿ ಸುಲಭವಾಗಿ ಬೆಳೆಸಬಹುದಾದ ಔಷಧೀಯ ಪ್ರಬೇಧವಾಗಿದ್ದು ಇದರ ಕಾಂಡ, ಎಲೆ, ಬೇರು ಎಲ್ಲವೂ ಔಷಧೀಯ ಗುಣ ಹೊಂದಿದೆ.

ಇದರ ಕಾಂಡದ ಒಂದು ತುಂಡನ್ನು ಮಣ್ಣಿನಲ್ಲಿ ನೆಟ್ಟರೆ ಬಳ್ಳಿಯ ರೂಪದಲ್ಲಿ ಹಬ್ಬುವ ಜಾತಿಗೆ ಸೇರಿದ್ದು ಹೃದಯದ ಆಕಾರದ ಎಲೆ, ಬೂದಿಮಿಶ್ರಿತ ಕಂದು ಬಣ್ಣದ ತೊಗಟೆಯನ್ನು ಹೊಂದಿರುತ್ತದೆ.

ಅಲ್ಲದೇ ಅಮೃತಬಳ್ಳಿ ಹೆಸರಿಗೆ ತಕ್ಕಂತೆ ಅಮೃತದ ಸ್ವರೂಪವೇ ಆಗಿದ್ದು, ಎಲ್ಲ ಬಗೆಯ ಜ್ವರಗಳಿಗೂ ಇದು ರಾಮ ಬಾಣವಾಗಿದೆ. ಅದರ ಜತೆಗೆ ವಾತ, ಪಿತ್ತ, ಕಫಗಳ ನಿವಾರಣೆಗೂ ಇದನ್ನು ಔಷಧವಾಗಿ ಬಳಸುತ್ತಾರೆ.

ಉಪಯೋಗ ಹೇಗೆ…?
ಹಲವು ಉಪಯೋಗಗಳಿಂದ ಸಂಜೀವಿನಿಯಾಗಿರುವ ಅಮೃತ ಬಳ್ಳಿಯ ಕಾಂಡವನ್ನು ಜಜ್ಜಿ ರಸ ತೆಗೆದು ಜೇನುತುಪ್ಪದೊಂದಿಗೆ ಬೆರೆಸಿ ಆಹಾರ ಸೇವನೆಗೆ ಮುಂಚೆ ದಿನಕ್ಕೆ ಮೂರು ಬಾರಿಯಂತೆ ಸೇವಿಸಿದರೆ ರಕ್ತ ಶುದ್ದವಾಗುವುದಲ್ಲದೇ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ಅಮೃತ ಬಳ್ಳಿಯ ಕಾಂಡವನ್ನು ಸಂಬಾರ ಬಳ್ಳಿ, ಅಮೃತ ಬಳ್ಳಿ ಎಲೆ, ಮಜ್ಜಿಗೆ ಸೊಪ್ಪು, ಶುಂಠಿ, ತುಳಸಿ, ಲವಂಗ, ಅರಸಿನ ಪುಡಿ, ಕಾಳುಮೆಣಸು, ಜೀರಿಗೆ ಬೆರೆಸಿ ಕಷಾಯ ಮಾಡಿ ವಾರದಲ್ಲಿ ಒಂದು ಬಾರಿ 1/2 ಲೋಟದಂತೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಶೀತ, ವಿಷಮ ಶೀತ ಜ್ವರ ಇತ್ಯಾದಿ ಖಾಯಿಲೆಗಳಿಂದ ದೂರವಿರಬಹುದಾಗಿದೆ.

ಅಲ್ಲದೇ ಇದರ ಎಲೆಯಲ್ಲಿಯೂ ಔಷಧೀಯ ಗುಣವಿದ್ದು ತಂಬುಳಿಯಂತಹ ಅಡುಗೆಯಲ್ಲಿ ಬಳಸಿಯೂ ಸಹ ಇಡೀ ಕುಟುಂಬವನ್ನು ಆರೋಗ್ಯದೆಡೆಗೆ ಕರೆದೊಯ್ಯಬಹುದಾಗಿದೆ.

1 Comment

Write A Comment