ಕರ್ನಾಟಕ

ಮಗನ ಕೊಲೆಗೆ ಸಹಕರಿಸಿದ್ದ ತಾಯಿಗೆ ಶಿಕ್ಷೆ

Pinterest LinkedIn Tumblr

43345718613730_09bfd4440f_zಹುಬ್ಬಳ್ಳಿ: 2011 ರಲ್ಲಿ ಹುಬ್ಬಳ್ಳಿಯಲ್ಲಿ ನಡೆದಿದ್ದ ಬಾಲಕನ ಕೊಲೆ ಪ್ರಕರಣದ ತೀರ್ಪು ಹೊರ ಬಿದ್ದಿದ್ದು, ಕೊಲೆ ಮಾಡಿದ್ದ ಬಾಲಕನ ಮಲ ತಂದೆ ಮತ್ತು ಇದಕ್ಕೆ ಸಹಕರಿಸಿದ್ದ ತಾಯಿಗೆ ಶಿಕ್ಷೆ ವಿಧಿಸಿ 1 ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ತಮಿಳುನಾಡು ಮೂಲದ ನಾಗಮಣಿ ಎಂಬಾಕೆಯ ಮೊದಲ ಪ್ರಿಯಕರನಿಗೆ ಜನಿಸಿದ್ದ ಈ ಬಾಲಕನನ್ನು ಆಕೆ ವಿವಾಹ ಮಾಡಿಕೊಂಡಿದ್ದ ಮಣಿಕಂಠ ಎಂಬಾತ 2011 ರ ಮಾರ್ಚ್ 25 ರಂದು ಹತ್ಯೆ ಮಾಡಿದ್ದ. ಈ ಕೊಲೆಗೆ ಬಾಲಕನ ತಾಯಿಯೂ ಸಹಕರಿಸಿದ್ದಳೆನ್ನಲಾಗಿದ್ದು ಶವವನ್ನು ಬಾಡಿಗೆ ಮನೆಯ ಕೋಣೆಯಲ್ಲಿ ಹೂತಿಟ್ಟು ತಮಿಳುನಾಡಿಗೆ ಪರಾರಿಯಾಗಿದ್ದರು.

ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ತೀರ್ಪು ಮಂಗಳವಾರ ಹೊರ ಬಿದ್ದಿದ್ದು, ಕೊಲೆ ಮಾಡಿದ್ದ ಮಣಿಕಂಠನಿಗೆ ಜೀವಾವಧಿ ಶಿಕ್ಷೆ ಹಾಗೂ ಕೊಲೆಗೆ ಸಹಕಾರ ನೀಡಿದ್ದ ನಾಗಮಣಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ

Write A Comment