ಕರ್ನಾಟಕ

ಯು.ಡಿ.ವೋಲ್ವೋ ಪ್ರಾಯೋಗಿಕ ಬಸ್ ಸೇವೆ ಆರಂಭ

Pinterest LinkedIn Tumblr

Minister--Ramalingareddy-01

ಬೆಂಗಳೂರು, ಜೂ.20- ಸಾಮಾನ್ಯ ವರ್ಗದ ಹವಾ ನಿಯಂತ್ರಿತ ಯು.ಡಿ.ವೋಲ್ವೋ ಬಸ್‌ನ ಪ್ರಾಯೋಗಿಕ ಸಂಚಾರಕ್ಕೆ ಮಾತ್ರ ಚಾಲನೆ ನೀಡಿದ್ದು, ಇದರ ಕ್ಷಮತೆ ಹಾಗೂ ಗುಣಮಟ್ಟ ಪರಿಶೀಲಿಸಿದ ನಂತರ ಇದನ್ನು ಖರೀದಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು

ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ತಿಳಿಸಿದ್ದಾರೆ. ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿಂದು ಹೊಸ ವಿನ್ಯಾಸದ ಯು.ಡಿ. ವೋಲ್ವೋ ಬಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಎರಡು ತಿಂಗಳ ಕಾಲ ಮೆಜಸ್ಟಿಕ್‌ನಿಂದ ಸರ್ಜಾಪುರ ಮಾರ್ಗವಾಗಿ ಈ ಬಸ್ ಸಂಚರಿಸಲಿದೆ. ಇದು ಕೇವಲ ಪ್ರಾಯೋಗಿಕ. ಮುಂದಿನ ದಿನಗಳಲ್ಲಿ ಖರೀದಿಸಬೇಕೆ, ಬೇಡವೆ ಎಂಬುದರ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಏಕ್‌ರೂಪ್ ಕೌರ್ ಮಾತನಾಡಿ, ಎರಡು ಬಸ್‌ಗಳು ಈಗ ಸೇವೆ ಆರಂಭಿಸಿವೆ. ಇಂಧನ ಕ್ಷಮತೆ ಮತ್ತು ಸಾಮರ್ಥ್ಯ ಪರಿಶೀಲಿಸಿದ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಈಗಾಗಲೇ ಮಾರ್ಕೊಪೋಲೋ ಬಸ್‌ಗಳಲ್ಲಿ ಅಧಿಕ ಇಂಧನ ಖರ್ಚಾಗುತ್ತಿರುವುದರಿಂದ ಸಂಪೂರ್ಣವಾಗಿ ಅದನ್ನು ನಿಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

Write A Comment