ಕರ್ನಾಟಕ

ವಾಯವ್ಯದತ್ತ ಅಶೋಬಾ: ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ

Pinterest LinkedIn Tumblr

Mangalore_Havey_Rain_1

ಬೆಂಗಳೂರು, ಜೂ.11: ಪೂರ್ವ ಮಧ್ಯ ಅರಬ್ಬೀ ಸಮುದ್ರದಲ್ಲಿ ಎದ್ದಿರುವ ಅಶೋಬಾ ಚಂಡ ಮಾರುತ ವಾಯವ್ಯ ದಿಕ್ಕಿನತ್ತ ಸಾಗಿದ್ದು ಮುಂಬೈನಿಂದ 750 ಕಿ. ಮೀ. ಹಾಗೂ ಗುಜರಾತ್‌ನ ವೆರಾವಲ್‌ನ ಪಶ್ಚಿಮ – ನೈರುತ್ಯದಲ್ಲಿ ಕೇಂದ್ರೀಕೃತವಾಗಿದೆ.

ಇದು ಇನ್ನೂ ತೀವ್ರವಾಗಿ ಮುಂದಿನ 24 ತಾಸುಗಳಲ್ಲಿ ಉತ್ತರ ವಾಯವ್ಯ ಮಾರ್ಗವಾಗಿ ಸಾಗಲಿದೆ. ಇದರ ಪರಿಣಾಮವಾಗಿ ಮುಂದಿನ 48 ಗಂಟೆಗಳಲ್ಲಿ ಕರ್ನಾಟಕ, ದಕ್ಷಿಣ ಗುಜರಾತ್, ಕರಾವಳಿ ಕೊಂಕಣ ಹಾಗೂ ಗೋವಾದಲ್ಲಿ ಚದುರಿದಂತೆ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಕರ್ನಾಟಕದ, ಗೋವಾ ಮತ್ತು ಮಹಾರಾಷ್ಟ್ರ ಕರಾವಳಿಯಲ್ಲಿ ಗಂಟೆಗೆ 70 ರಿಂದ 80 ಕಿ.ಮೀ. ವೇಗದಲಿ ್ಲ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ. ಸಮುದ್ರದಲ್ಲಿ ಅಲೆಗಳ ರಭಸ ಹೆಚ್ಚಾಗುವ ನಿರೀಕ್ಷೆಯೂ ಇದೆ. ಹೀಗಾಗಿ ಈ ಅವಧಿಯಲ್ಲಿ ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿಯಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.

Write A Comment