ಕರ್ನಾಟಕ

ಕೆಎಸ್‌ಆರ್‌ಟಿಸಿಗೆ ರಾಷ್ಟ್ರೀಯ ಗ್ರೀನ್‌ಟೆಕ್ ಎಚ್‌ಆರ್ ಪ್ರಶಸ್ತಿ

Pinterest LinkedIn Tumblr

ksrtc-Bus

ಬೆಂಗಳೂರು, ಮೇ 31-ಕೆಎಸ್‌ಆರ್‌ಟಿಸಿಯು ರಾಷ್ಟ್ರೀಯ ಗ್ರೀನ್‌ಟೆಕ್ ಎಚ್‌ಆರ್ ಪ್ರಶಸ್ತಿಗೆ ಭಾಜನವಾಗಿದೆ.  ಈ ನಿಗಮದಲ್ಲಿ ಅನುಷ್ಠಾನಗೊಳಿಸಿರುವ ಸ್ಟಾಫ್ ಡ್ಯೂಟಿ ರೋಟಾ ಸಿಸ್ಟಮ್ ಉಪಕ್ರಮವು ಮಾನವ ಸಂಪನ್ಮೂಲ ವಿಭಾಗದ ಅತ್ಯುತ್ತಮ ಉಪಕ್ರಮವಾಗಿ ಹೊರ ಹೊಮ್ಮಿರುವುದರಿಂದ ಗ್ರೀನ್‌ಟೆಕ್ ಹೆಚ್‌ಆರ್ ಪ್ರಶಸ್ತಿಯ ಟೆಕ್ನಾಲಜಿ

ಎಕ್ಸಲೆನ್ಸ್ ಇನ್ ಎಚ್‌ಆರ್ ವರ್ಗದಲ್ಲಿ ಪ್ಲಾಟಿನಂ ಪ್ರಶಸ್ತಿಯನ್ನು ನಗರದಲ್ಲಿ ನಡೆದ ಸಮಾರಂಭದಲ್ಲಿ ಕೆಎಸ್‌ಆರ್‌ಟಿಸಿಗೆ ಪ್ರಧಾನ ಮಾಡಲಾಯಿತು. ಗ್ರೀನ್‌ಟೆಕ್ ಎಚ್‌ಆರ್ ಪ್ರಶಸ್ತಿಯನ್ನು  ದೇಶದ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಸಂಸ್ಥೆಯ ಸಿಬ್ಬಂದಿಗಳ ಹಿತದೃಷ್ಟಿಯಿಂದ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಅಭಿವೃದ್ಧಿಪಡಿಸಿರುವ ಅತ್ಯುತ್ತಮ ಉಪಕ್ರಮಗಳನ್ನು ಗುರುತಿಸಿ ಗೌರವಿಸುವ ಪ್ರಸಸ್ತಿ ಇದಾಗಿದೆ.

ಸ್ಟಾಫ್ ಡ್ಯೂಟಿ ರೋಟಾ ಸಿಸ್ಟಮ್ :
ಸಿಬ್ಬಂದಿಗಳ ಸೇವಾ ಹಿರಿತನ ಆಧಾರದ ಮತ್ತು ಸಮಾಲೋಚನೆಯ ಮೇಲೆ ಪ್ರತಿ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸುವ ವ್ಯವಸ್ಥೆಯಾಗಿರುತ್ತದೆ.  ಇದರಿಂದ ಪಕ್ಷಪಾತವಿಲ್ಲದೆ, ಪಾರದರ್ಶಕವಾಗಿ ಸಿಬ್ಬಂದಿಗಳಿಗೆ ಆಡಳಿತ ವ್ಯವಸ್ಥೆ ದೊರಕುತ್ತದೆ ಮತ್ತು ದಿಢೀರ್ ಮಾರ್ಗ ರದ್ಧತಿಗೆ ಅವಕಾಶವಿಲ್ಲದಂತೆ ಪ್ರಯಾಣಿಕರಿಗೆ ಸಮರ್ಥ ಸೇವೆ ಒದಗಿಸಲು ಸಹಕಾರಿಯಾಗಿರುತ್ತದೆ. ನಿಗಮವು ಒಂದು ಕಾರ್ಮಿಕ ಸಮೂಹವನ್ನು ಹೊಂದಿರುವ ಸಂಸ್ಥೆಯಾಗಿದ್ದು, ಸುಮಾರು 37,381 ನೌಕರರು  ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ಕರ್ತವ್ಯ ನಿಯೋಜನೆ ಮತ್ತು ರಜೆ ನಿರ್ವಹಣೆ ಹಂಚಿಕೆಯು ಬಹಳ ಸೂಕ್ಷ್ಮವಾದ ವಿಷಯವಾಗಿದ್ದು, ಅತ್ಯಂತ ಪಾರದರ್ಶಕತೆಯಿಂದ ಮತ್ತು ವಸ್ತುನಿಷ್ಠವಾಗಿ ನಿಭಾಯಿಸುವ ವಿಷಯವಾಗಿರುತ್ತದೆ.

Write A Comment