ಕರ್ನಾಟಕ

ಜೈಲು ಪಾಲಾದವರಿಗೆ ನಮ್ಮನ್ನು ಪ್ರಶ್ನಿಸುವ ನೈತಿಕತೆ ಇದೆಯೇ: ಸಿದ್ದರಾಮಯ್ಯ

Pinterest LinkedIn Tumblr

siddu

ದಾವಣಗೆರೆ,: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಎರಡು ವರ್ಷಗಳ ಆಡಲಿತ ಪೂರೈಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ವೋದಯ ಸಂವಾದ ಕಾರ್ಯಕ್ರಮ ನಡೆಯುತ್ತಿದ್ದು, ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.

ಉಧ್ಘಾಟನೆಯ ಬಳಿಕ ಮಾತನಾಡಿದ ಅವರು, ಕಳೆದ ಐದು ವರ್ಷಗಳ ಅವಧಿಯಲ್ಲಿ ಬಿಜೆಪಿ ಸರ್ಕಾರ ಏನು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿಗಳಾಗಿದ್ದ ಜಗದೀಶ್ ಶೆಟ್ಟರ್ ಹಾಗೂ ಸದಾನಂದಗೌಡರಿಗೆ ಪ್ರಶ್ನಿಸುತ್ತೇನೆ ಎಂದ ಅವರು, ರಾಜ್ಯದ ಸಂಪತ್ತನ್ನು ಲೂಟಿ ಮಾಡಿದ್ದು ಬಿಜೆಪಿ, ಕಾಂಗ್ರೆಸ್‌ನ್ನು ಕಾಲೆಳೆಯುವ ನೈತಿಕ ಹಕ್ಕು ಬಿಜೆಪಿಗಿಲ್ಲ ಎಂದರು.

ಇದೇ ವೇಳೆ, ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಜಗದೀಶ್ ಶೆಟ್ಟರ್, ಯಡಿಯೂರಪ್ಪನವರು ಹಾಗೂ ಮಾಜಿ ಸಚಿವ ಜನಾರ್ಧನರೆಡ್ಡಿ ಅವರು ಜೈಲಿಗೆ ಹೋಗಿ ಬಂದರು. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಯಾರೊಬ್ಬರೂ ಜೈಲಿನ ಬಾಗಿಲೇ ತುಳಿದಿಲ್ಲ. ಅಪರಾಧಿ ಸ್ಥಾನದಲ್ಲಿ ನಿಂತು ಕ್ರಿಮಿನಲ್ ಮನೊಕದ್ದಮೆಗಳನ್ನು ಎದುರಿಸುತ್ತಿರುವ ಇವರಿಗೆ ನಮ್ಮ ಪಕ್ಷದ ಆಡಳಿತದ ಬಗ್ಗೆ ಟೀಕಿಸುವ ಅದಿಕರವಿದೆಯೇ ಎಂದು ಪ್ರಶ್ನಿಸಿದರು.

ನಮ್ಮ ಸರ್ಕಾರ ಅಹಿಂದ ವರ್ಗ, ಮಹಿಳೆಯರ ಪರವಾಗಿದೆ. ಕಾಂಗ್ರಸೆ್ ಮುಕ್ತ ಭಾರತವನ್ನು ನಿರ್ಮಾಣ ಮಾಡುತ್ತೇವೆ ಎಂದು ಬಿಜೆಪಿಯವರು ಪ್ರತಿನಿತ್ಯ ಹೇಳುತ್ತಿರುತ್ತಾರೆ. ಆದರೆ ಬಿಜೆಪಿ ನಾಯಕರೇ ನಿಮಗಿದು ಸಾಧ್ಯವಿಲ್ಲ. ಅದು ಕೇವಲ ನಿಮ್ಮ ಭ್ರಮೆಯಷ್ಟೇ ಎಂದರು.

ಬಳಿಕ ಮಾತನಾಡಿದ ಕೆಪಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್, ಬಿಜೆಪಿ ರಾಜ್ಯದ ಸಂಪತ್ತನ್ನು ಲೂಟಿ ಮಾಡಿದೆ. ಅಷ್ಟೇ ಅಲ್ಲ ಕೇಂದ್ರ ಸರ್ಕಾರವೂ ಕೂಡ ಅಭಿವೃದ್ಧಿ ಕೆಲಸಗಳಿಗೆ ಮುಂದಾಗಿಲ್ಲ. ಕಪ್ಪು ಹಣ ವಾಪಾಸ್ ತರುತ್ತೇನೆ ಎನ್ನುತ್ತಿದ್ದ ಮೋದಿ ಪ್ರಸ್ತುತ ಸುಮ್ಮನಾಗಿದ್ದಾರೆ. ಇದು ವಿಫಲವಲ್ಲವೇ ಎಂದು ಕೇಂದ್ರ ಸರ್ಕಾರವನ್ನೂ ಟೀಕಿಸಿದರು.

Write A Comment