ಕರ್ನಾಟಕ

ಮೃತ್ಯುಕೂಪಕ್ಕೆ ಸಿಕ್ಕ ಒದ್ದಾಡಿದ ಮೂಕಪ್ರಾಣಿ

Pinterest LinkedIn Tumblr

Malavalli-News

ಮಳವಳ್ಳಿ, ಏ.14- ಬಲಿಗಾಗಿ ಬಾಯ್ದೆರೆದು ಕುಳಿತಿದ್ದ ಈ ಮೃತ್ಯುವಿನ ಬಾಯಿಗೆ ವ್ಯಕ್ತಿಯೋ iಗುವೋ ಬಿದ್ದು ಒದ್ದಾಡುತ್ತಿದ್ದರೆ ಸುದ್ದಿಯಾಗಿ  ಇಡೀ ರಾಜ್ಯವೆ ಅಲ್ಲೋಲ-ಕಲ್ಲೋಲವಾಗಿಬಿಡುತ್ತಿತ್ತೋ ಏನೋ… ಆದರೆ, ಈ ಮೃತ್ಯುಕೂಪಕ್ಕೆ ಸಿಕ್ಕು ಒದ್ದಾಡುತ್ತಿರುವುದು ಒಂದು ಮೂಕ ಪ್ರಾಣಿ…  ಇದು ನಮ್ಮ ಸೌರಶಕ್ತಿ ವಿದ್ಯುತ್ ಉತ್ಪಾದನಾ ಕೇಂದ್ರದವರು ಬ್ಲಫ್‌ನಲ್ಲಿ ಸೃಷ್ಟಿಸಿರುವ ಮೃತ್ಯುಕೂಪದ ಒಂದು ಸ್ಯಾಂಪಲ್ ಅಷ್ಟೆ.  ಬ್ಲಫ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸೌರಶಕ್ತಿ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ನಿರ್ಮಾಣ ಮಾಡುತ್ತಿರುವುದು ಗೊತ್ತೇ ಇದೆ. ನೂರಾರು ಎಕರೆ ಪ್ರದೇಶದಲ್ಲಿ ಬೃಹತ್ ಗಾತ್ರದ ಸೋಲಾರ್‌ಗಳನ್ನು

ಅಳವಡಿಸುತ್ತಿದ್ದು, ಗ್ರಾಮದ ಶಾಲಾ ಆವರಣವನ್ನೂ ಸಹ ಬಿಡದೆ ಗ್ರಾಮದ ಸುತ್ತ ಬೃಹತ್ ಸೋಲಾರ್‌ಗಳನ್ನು ಹಾಕುತ್ತಿದ್ದು, ಇದಕ್ಕಾಗಿ ಬೋರ್‌ವೆಲ್ ಮಾದರಿಯಲ್ಲಿ  ನೆಲ ಕೊರೆಯಲಾಗುತ್ತಿದೆ.

ಕೊರೆದ ಕೊಳವೆ ಬಾವಿಗೆ ತಕ್ಷಣ ಸೋಲಾರ್ ಅಳವಡಿಸಿಬಿಟ್ಟಿದ್ದರೆ ಈ ಅವಘಡ ಆಗುತ್ತಿರಲಿಲ್ಲವೇನೋ. ಆದರೆ ದಪ್ಪಚರ್ಮದ ಅಧಿಕಾರಿಗಳು ಕೊರೆದ ರಂಧ್ರವನ್ನು ತಕ್ಷಣ ಮುಚ್ಚದೆ ಹಾಗಿಯೇ ಬಿಟ್ಟಿದ್ದಾರೆ.  ಪರಿಣಾಮ ಒಬ್ಬ ದೃಢಕಾಯ ವ್ಯಕ್ತಿ ಸಲೀಸಾಗಿ ಕೊಳವೆ ಬಾವಿಯೊಳಗೆ ತೂರಿಬಿಡಬಹುದಾದ ಈ ರಂಧ್ರದೊಳಕ್ಕೆ ಹಸುವೊಂದು ಸಿಕ್ಕಿಕೊಂಡಿದೆ. ರಂಧ್ರದಿಂದ ಹೊರಬರಲು ಹಸು ನಡೆಸಿದ ಹೋರಾಟದಿಂದ ರಂಧ್ರ ಇನ್ನಷ್ಟು ಅಗಲವಾಗಿ ಇಡೀ ಹಸುವಿನ ದೇಹ ಕೊಳವೆಯೊಳಗೆ ತೂರಿಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು.  ಅಷ್ಟರಲ್ಲಿ ಗ್ರಾಮಸ್ಥರು ಸೇರಿ ಜೆಸಿಬಿ ಯಂತ್ರದ ಸಹಾಯದಿಂದ ಹಸುವನ್ನು ಮೇಲಕ್ಕೆತ್ತಿ ಆ  ಮೂಕ ಪ್ರಾಣಿಯ ಜೀವ ಉಳಿಸಿದ್ದಾರೆ. ಇನ್ನು ಸ್ವಲ್ಪ ವಿಂಬವಾಗಿದ್ದರೂ ಹಸು ಕೊಳವೆ ಬಾವಿಯೊಳಗೆ ಮುಳುಗಿಬಿಡುತ್ತಿತ್ತು.  ಆದರೆ ಇದ್ಯಾವುದೇ ಮುನ್ನೆಚ್ಚರಿಕೆ ಕೈಗೊಳ್ಳದ ಕಡೇ ಪಕ್ಷ ರಂಧ್ರ ಕೊರೆದಿರುವ ಆವರಣದ ಸುತ್ತ ಒಂದು ತಾತ್ಕಾಲಿಕ ತಡೆಯನ್ನಾದರೂ ನಿರ್ಮಿಸಬೇಕೆಂಬ ಸಾಮಾನ್ಯ ಕಾಳಜಿಯೂ ಇಲ್ಲದೆ ಕೇವಲ ಸರ್ಕಾರದ ಹಣ ಕಾಲಮಿತಿಯೊಳಗೆ ಖರ್ಚಾಗಬೇಕು. ಕೆಲಸ ಮುಗಿಯಬೇಕು ಎನ್ನುವ ಹಂಬಲದಲ್ಲೇ ಮುಳುಗಿ ಹೋಗಿರುವ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಜನ-ಜಾನುವಾರುಗಳ ಪ್ರಾಣರಕ್ಷಣೆ ಬಗ್ಗೆ ಯೋಚಿಸಲು ಪುರುಸೊತ್ತಾದರೂ ಎಲ್ಲಿದೆ. ಇದನ್ನು ಪ್ರಕೃತಿ ಕಲಿಸಿದ  ಪಾಠವೆಂದು ತಿಳಿದು ಬೃಹತ್ ಯೋಜನೆ ಕೈಗೆತ್ತಿರಕೊಂಡಿರುವ ಇಲಾಖೆ ಜನರ ಆಸ್ತಿ ಪ್ರಾಣ ರಕ್ಷಣೆಯ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.

Write A Comment