ಕರ್ನಾಟಕ

ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಶ್ರೇಣಿಯಲ್ಲಿ ಶೋಲಾ ಅರಣ್ಯಕ್ಕೆ ಬೆಂಕಿ,ಹಾನಿ

Pinterest LinkedIn Tumblr

mu

ಚಿಕ್ಕಮಗಳೂರು: ಪ್ರವಾಸಿಗರು ಮತ್ತು ಚಾರಣಿಗರ ನೆಚ್ಚಿನ ತಾಣ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಬುಧವಾರ ಕಾಣಿಸಿಕೊಂಡ ಕಾಳ್ಗಿಚ್ಚಿಗೆ ಹುಲ್ಲುಗಾವಲು ಮತ್ತು ಶೋಲಾ ಅರಣ್ಯ ನಾಶವಾಗಿದೆ. ಮುಳ್ಳಯ್ಯನಗಿರಿ ಮತ್ತು ಸೀತಾಳ­ಯ್ಯನ ಗಿರಿಗಳ ನಡುವಣ ಶೋಲಾ ಅರಣ್ಯ ಮತ್ತು ಹುಲ್ಲುಗಾವಲಿ­ನಲ್ಲಿ ಮಧ್ಯಾಹ್ನ 2 ಗಂಟೆಗೆ ಬೆಂಕಿ ಕಾಣಿ­ಸಿತು. ಕೇವಲ ಇಬ್ಬರು ಅರಣ್ಯ ರಕ್ಷಕರು ಬೆಂಕಿ ನಂದಿಸಲು ಸಂಜೆ­ವರೆಗೂ ಹರಸಾಹಸ ನಡೆಸುತ್ತಿದ್ದುದು ಕಂಡು­ಬಂತು.

ಕಳಸಾಪುರದ ಸಾಮಾಜಿಕ ಅರಣ್ಯ­ದಲ್ಲಿ ಕಾಣಿಸಿದ ಬೆಂಕಿ ನಂದಿಸಲು ತೆರಳಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಮುಳ್ಳಯ್ಯನಗಿರಿ ತಲುಪುವಷ್ಟರಲ್ಲಿ ಸೊಂಪಾಗಿ ಬೆಳೆದಿದ್ದ ಹುಲ್ಲುಗಾವಲು, ಕುರಂಜಿ ವನ, ಅಮೂಲ್ಯ ಔಷಧ ಗಿಡಗಳು, ಶೋಲಾ ಅರಣ್ಯ ಬಹಳಷ್ಟು ಪ್ರಮಾಣದಲ್ಲಿ ಬೆಂಕಿಯಲ್ಲಿ ಬೆಂದು­ಹೋಗಿತ್ತು.

ಸಂಜೆ 5 ಗಂಟೆ ಹೊತ್ತಿಗೆ ಎರಡು ಜೀಪುಗಳಲ್ಲಿ ಸ್ಥಳಕ್ಕೆ ಧಾವಿಸಿದ ಹೆಚ್ಚಿನ ಸಿಬ್ಬಂದಿ, ಮುಳ್ಳಯ್ಯನಗಿರಿ ತುದಿಯ ಇಳಿಜಾರಿನ ಪ್ರದೇಶದಲ್ಲಿ ಹೊತ್ತಿ ಉರಿಯು­ತ್ತಿದ್ದ ಬೆಂಕಿಯನ್ನು ಹರಸಾಹಸ ಪಟ್ಟು ನಂದಿಸಿದರು. ಅಷ್ಟರಲ್ಲಿ, ಗಿರಿಯ ಬುಡದಲ್ಲಿ ಮತ್ತೆ ಬೆಂಕಿ ಕಾಣಿಸಿ, ಜ್ವಾಲೆ ಮುಗಿಲೆತ್ತರಕ್ಕೆ ಚಾಚಿ­ಕೊಂಡಿತು. ಅತ್ತ ಬೆಂಕಿ ನಂದಿಸಲು ಕೆಲ ಸಿಬ್ಬಂದಿ ಹೊರ­ಡಲು ಸಜ್ಜಾಗು­ತ್ತಿದ್ದಂತೆ, ಮುತ್ತೋಡಿ ಅಭಯಾರಣ್ಯ­ದಂಚಿನ ಗಿರಿ ತಪ್ಪಲಿನ ಮೀಸಲು ಅರಣ್ಯದಲ್ಲಿ ಬೆಂಕಿ ಕಾಣಿಸಿತು. ಇದರಿಂದ ಬೆರಳೆಣಿಕೆ ಯಷ್ಟಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ಪೇಚಿಗೆ ಸಿಲುಕಿದರು.

ಸಂಜೆ 6 ಗಂಟೆ ವೇಳೆಗೆ ಗಿರಿಯಲ್ಲಿ ಬೆಂಕಿ ನಂದಿಸಲು  ಯಶಸ್ವಿಯಾದರು.  ಎಸಿಎಫ್‌  ಶಶಿಧರ್‌ ಮತ್ತು ವಲಯ ಅರಣ್ಯಾ­ಧಿಕಾರಿ ಅಜೀಜ್‌ ಬೆಂಕಿ ನಂದಿಸುವ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು.

Write A Comment