ಕರ್ನಾಟಕ

ಪ್ರಸಿದ್ಧ ಒಂಗೊಲ್ ತಳಿಯ ಈ ಜೋಡಿ ಜೋಡಿ ಹೋರಿಗೆ ರೂ16 ಲಕ್ಷ!

Pinterest LinkedIn Tumblr

ox

ಬೀದರ್: ಕಟ್ಟುಮಸ್ತಾಗಿರುವ ಈ ಜೋಡಿ ಹೋರಿ (ರಾಸು)ಗಳ ಬೆಲೆ ಎಷ್ಟು ಗೊತ್ತೆ? ಭರ್ತಿ ರೂ16 ಲಕ್ಷ!

ಬೀದರ್ ತಾಲ್ಲೂಕಿನ ಕಮಠಾಣ ಬಳಿಯ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಶನಿವಾರ ಆರಂಭ­ವಾದ ಜಾನುವಾರು, ಕೃಷಿ, ತೋಟಗಾರಿಕೆ ಹಾಗೂ ಮತ್ಸ್ಯ ಮೇಳ­ದಲ್ಲಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನಾದೆಂದ್‍ಲಾ ಗ್ರಾಮದ ಕೃಷಿಕ ನಲ್ಲಾ ಮೊತು ವೇಣುಗೋಪಾಲ­ರಾವ್‌ ಅವರ ಜೋಡಿ ಹೋರಿಗಳು ಗಮನ ಸೆಳೆಯುತ್ತಿವೆ.

ಪ್ರಸಿದ್ಧ ಒಂಗೊಲ್ ತಳಿಯ ಈ ಜೋಡಿ ಹೋರಿಗಳಲ್ಲಿ ಒಂದು 34 ತಿಂಗಳು ಮತ್ತು ಇನ್ನೊಂದು 32 ತಿಂಗಳ­ದ್ದಾಗಿದೆ. ಪ್ರಸಕ್ತ ಸಾಲಿನಲ್ಲಿ ಹೈದ­ರಾಬಾದ್‌ನಲ್ಲಿ ನಡೆದ ಜಾನುವಾರು ಪ್ರದರ್ಶನದಲ್ಲಿ ‘ಉತ್ತಮ ಜೋಡಿ’ ಪ್ರಶಸ್ತಿ ಪಡೆದ ಹಿರಿಮೆಯೂ ಈ ಜೋಡಿಗಿದೆ.

‘14 ತಿಂಗಳ ಹಿಂದೆ ಒಂದು ಹೋರಿ­ಯನ್ನು ರೂ 2.5 ಲಕ್ಷಕ್ಕೆ ಖರೀದಿಸಿದ್ದೇನೆ. ಸದ್ಯ ಒಂದು ಹೋರಿಗೆ ರೂ7ರಿಂದ ರೂ8 ಲಕ್ಷ ಹಾಗೂ ಜೋಡಿ ಹೋರಿಗೆ  ರೂ 16 ಲಕ್ಷ ಬೆಲೆ ನಿರೀಕ್ಷಿಸುತ್ತಿದ್ದೇನೆ. ನಾಲ್ಕು ದಿನಗಳ ಹಿಂದೆಯೇ ಒಂದು ಹೋರಿಗೆ ರೂ 6 ಲಕ್ಷಕ್ಕೆ ಬೇಡಿಕೆ ಬಂದಿತ್ತು’ ಎಂದು ನಲ್ಲಾ ಮೊತು ವೇಣುಗೋಪಾಲ­ರಾವ್‌ ಹೇಳಿದರು.

‘ಹೋರಿಗಳಿಗೆ ನಿತ್ಯ ಶ್ಯಾಂಪೂ ಬಳಸಿ ಸ್ನಾನ ಮಾಡಿಸುತ್ತೇನೆ. ಕೊಟ್ಟಿಗೆಯಲ್ಲಿ ಫ್ಯಾನ್ ಅಳವಡಿಸಿದ್ದೇನೆ. ಹೋರಿಗಳಿಗೆ ಆಹಾರವಾಗಿ ನಿತ್ಯ ನಾಲ್ಕು ಲೀಟರ್ ಹಾಲು, ಆರು ಮೊಟ್ಟೆ ಹಾಗೂ 15 ಕೆ.ಜಿ. ಹಿಂಡಿ ಕೊಡುತ್ತೇನೆ. ಒಂದು ದಿನದ ಒಟ್ಟು ಖರ್ಚು ರೂ 1,500 ಆಗುತ್ತದೆ. ಪ್ರದರ್ಶನಕ್ಕಾಗಿ ಲಾರಿ­ಯಲ್ಲಿ ಹೋರಿಗಳನ್ನು ತರಲು ರೂ 22 ಸಾವಿರ ಖರ್ಚಾಗಿದೆ’ ಎಂದು  ತಿಳಿಸಿದರು.

Write A Comment