ಕರ್ನಾಟಕ

‘ಕನ್ನಡ ಮಾತಾಡಿ’ ಕಂಕಣ ಸಂಸ್ಥೆಯ ಸ್ವಯಂ ಸೇವಕರು ಫಲಕಗಳನ್ನು ಹಿಡಿದು ಜಾಗೃತಿ ಅಭಿಯಾನ

Pinterest LinkedIn Tumblr

kannada

ಬೆಂಗಳೂರು: ಕಂಕಣ ಸಂಸ್ಥೆಯು ಜಯ­ನಗರ 4 ನೇ ಹಂತದಲ್ಲಿ ಭಾನುವಾರ ‘ಕನ್ನಡ ಮಾತಾಡಿ’ ಅಭಿಯಾನವನ್ನು ಆಯೋಜಿಸಿತ್ತು.
ಅಭಿಯಾನದಲ್ಲಿ ಘೋಷಣೆಗಳ ಅಬ್ಬರ, ಪ್ರತಿಭಟನೆಯ ಕೂಗಿರಲಿಲ್ಲ. ಮೌನ­ವಾಗಿ ಕನ್ನಡಾಭಿಮಾನದ ಬಗೆಗೆ ಪ್ರೀತಿ ಮೂಡಿಸಲಾಯಿತು. ಈ ಅಭಿ­ಯಾನ­ದಲ್ಲಿ ಐಟಿ ಉದ್ಯೋಗಿಗಳೂ ಸೇರಿ­ದಂತೆ 80ಕ್ಕೂ ಹೆಚ್ಚು ಮಂದಿ ಭಿತ್ತಿ­ಚಿತ್ರ­ಗಳನ್ನು ಹಿಡಿದು, ಕನ್ನಡ ಮಾತಾಡಿ ಎಂದು ಪ್ರೇರೇಪಿಸಿದರು.

ಅಪ್ಪ, ಅಮ್ಮ ಚಂದ, ಇಲ್ಲೇಕೆ ಮಮ್ಮಿ, ಡ್ಯಾಡಿ ದುರ್ಗಂಧ.. ಐಟಿ­ಯಲ್ಲಿ­ದ್ದರೂ, ಬಿಟಿಯಲ್ಲಿದ್ದರೂ ಕನ್ನಡ ಮಾತಾಡ್ ಗುರು.. ತಾಯಿಯಂತೆ ತಾಯ್ನುಡಿ, ಪ್ರೀತಿಯಿಂದ ನೀ ನುಡಿ.. ಲಂಡನ್‌ನಲ್ಲೇ ಹುಟ್ಟಿದಂತೆ ಆಡಬೇಡಿ.. ಕನ್ನಡ ಮಣ್ಣಿನ ಋಣ ಮರೆಯಬೇಡಿ ಎಂಬ ಸಂದೇಶಗಳ ಮೂಲಕ ಕನ್ನಡದ ಬಗ್ಗೆ ಜಾಗೃತಿ ಮೂಡಿಲಾಯಿತು.

ಅಭಿಯಾನದ ಆಯೋಜಕ ಕವಿ­ರಾಜ್, ‘ಕಂಕಣ ಬಳಗ ನಡೆಸಿದ ಸಮೀಕ್ಷೆ ಪ್ರಕಾರ ನಮ್ಮಲ್ಲಿ ಮೂರು ವರ್ಗ­ಗಳಿವೆ. ಒಂದು ವರ್ಗ ಅಪ್ಪಟ ಕನ್ನ­ಡಿ­ಗ­ರದ್ದು, ಇವರಿಗೆ ಕನ್ನಡ ಮಾತಾ­ಡಲು ಯಾವುದೇ ಹಿಂಜರಿಕೆ ಇಲ್ಲ. ಎರಡನೇ ವರ್ಗ ಸಾಮಾನ್ಯವಾಗಿ ಕನ್ನಡಿ­ಗರೇ ಆದರೂ, ವಾಣಿಜ್ಯ, ವ್ಯವಹಾರ­ಗಳ ಸಂದರ್ಭದಲ್ಲಿ ಇಂಗ್ಲಿಷ್ ಬಳಕೆ ಮಾಡುವವರು, ಮೂರನೇ ವರ್ಗ ಲಂಡನ್‌ನಲ್ಲಿ ಹುಟ್ಟಿ ಬೆಳೆದವರಂತೆ ಆಡುವವರದ್ದು’ ಎಂದರು.

‘ನಾವು ಮೊದಲಿನ ಎರಡು ವರ್ಗ­ಗಳನ್ನು ಅಪ್ಪಟ ಕನ್ನಡಿಗರಾಗಿಯೇ ಉಳಿಸಿ­ಕೊಳ್ಳಲು ಈ ಅಭಿಯಾನ ಆರಂ­ಭಿಸಿ­ದ್ದೇವೆ. ಆ ಮೂಲಕ ಕನ್ನಡದಲ್ಲಿ ಮಾತನಾಡುವವರ ಶೇಕಡಾವಾರು ಪ್ರಮಾಣ­ವನ್ನು ಹೆಚ್ಚಿಸಿ, ಭಾಷಾ­ಭಿಮಾನ ಮೂಡಿಸ­ಲಾಗುವುದು. ಇದೇ ವೇಳೆ, ಕನ್ನಡ ಕಲಿಯಲು ಇಚ್ಛಿಸುವ ಅನ್ಯಭಾಷಿಕರಿಗೂ ನೆರವಾಗಲಿದ್ದೇವೆ’ ಎಂದು ಹೇಳಿದರು.

‘ಕಳೆದ ತಿಂಗಳು ಜೆ.ಪಿ.ನಗರದ ಸೆಂಟ್ರಲ್ ಮಾಲ್‌ನಲ್ಲಿ ಮೊದಲ ಅಭಿ­ಯಾನ ನಡೆಸಲಾಗಿತ್ತು. ಮಾಲ್, ಸೂಪರ್ ಮಾರ್ಕೆಟ್, ಬ್ಯಾಂಕ್ ಹಾಗೂ ಕಚೇರಿಯಂತಹ ಸ್ಥಳಗಳಲ್ಲಿ ಕನ್ನಡ­ದಲ್ಲಿ ಮಾತನಾಡಲು ಹಿಂಜರಿ­ಯುವ ಮಂದಿಗೆ ಕನ್ನಡ ಮಾತ­ನಾಡಲು ಪ್ರೇರೇಪಿಸುವುದು  ನಮ್ಮ ಉದ್ದೇಶವಾಗಿದೆ’ ಎಂದರು.

Write A Comment