ಕರ್ನಾಟಕ

ಡಿಸೆಂಬರ್‌ ಅಂತ್ಯದೊಳಗೆ ಕಬ್ಬಿನ ಬಾಕಿ ಪಾವತಿಗೆ ಸಿದ್ದರಾಮಯ್ಯ ಭರವಸೆ: ರೈತರ ಧರಣಿ ವಾಪಸ್‌

Pinterest LinkedIn Tumblr

baba

ಬೆಳಗಾವಿ: ಕಳೆದ ಸಾಲಿನ ಕಬ್ಬಿನ ಬಾಕಿ ಹಣವನ್ನು ಡಿಸೆಂಬರ್‌ ಅಂತ್ಯದೊಳಗೆ ಸಕ್ಕರೆ ಕಾರ್ಖಾನೆಗಳಿಂದ ಕೊಡಿಸುವ ಕುರಿತು ಸದನದಲ್ಲಿ ಘೋಷಿಸು­ವು­ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಹೀಗಾಗಿ ಇಲ್ಲಿನ ಸುವರ್ಣ ವಿಧಾನಸೌಧದ ಬಳಿ ಗುರುವಾರ ಉತ್ತರ ಕರ್ನಾಟಕ ರೈತ ಸಂಘಗಳ ವೇದಿಕೆ ಆಶ್ರಯದಲ್ಲಿ ನಡೆಸುತ್ತಿದ್ದ ಧರಣಿಯನ್ನು ರೈತರು ಹಿಂದಕ್ಕೆ ಪಡೆದರು.

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ನೇತೃತ್ವದಲ್ಲಿ ಸುವರ್ಣ ವಿಧಾನಸೌಧದ ಬಳಿ ಬೆಳಿಗ್ಗೆ ರೈತರು ಧರಣಿಯನ್ನು ಆರಂಭಿಸಿದರು. ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ರೈತರು ಬಂದು ಸೇರಿದ್ದರು. ರೈತ ಗೀತೆ, ಡೊಳ್ಳು ಜಾನಪದ ಹಾಡುಗಳು ಮೊಳಗಿದವು. ಸಕ್ಕರೆ ಕಾರ್ಖಾನೆಗಳ ಹಾಗೂ ಸರ್ಕಾರದ ವಿರುದ್ಧ ಬಾಬಾ­ಗೌಡರು ಸುಮಾರು ಒಂದು ಗಂಟೆ ಕಾಲ ಮಾತ­ನಾಡಿದರು.

ಬಳಿಕ ನಗರದ ಪ್ರವಾಸಿ ಮಂದಿರ­ದಲ್ಲಿ ಮಧ್ಯಾಹ್ನ ಮುಖ್ಯ­ಮಂತ್ರಿಗಳು ರೈತ ಮುಖಂಡರೊಂದಿಗೆ ಸಭೆ ನಡೆಸಿ ಸಮಸ್ಯೆಗಳನ್ನು ಬಗೆಹರಿ­ಸುವುದಾಗಿ ಭರವಸೆ ನೀಡಿದರು. ‘ಸರ್ಕಾರದ ಮೇಲೆ ವಿಶ್ವಾಸ ಇಟ್ಟು ಸದ್ಯ ಧರಣಿಯನ್ನು ಹಿಂದಕ್ಕೆ ಪಡೆಯು­ತ್ತಿದ್ದೇವೆ’ ಎಂದು ಬಾಬಾಗೌಡ ಪಾಟೀಲ ತಿಳಿಸಿದರು.

Write A Comment