ಕರಾವಳಿ

ಉಡುಪಿಯಲ್ಲಿದ್ದ ನಕಲಿ ಡೆಂಟಲ್ ಕ್ಲಿನಿಕ್ ಮುಚ್ಚಿಸಿದ ಅಧಿಕಾರಿಗಳು..!

Pinterest LinkedIn Tumblr

ಉಡುಪಿ: ಉಡುಪಿ ಸಿಟಿ ಬಸ್ ನಿಲ್ದಾಣದ ಸಮೀಪದಲ್ಲಿ ಕಾರ್ಯಾಚರಿಸುತ್ತಿದ್ದ ನಕಲಿ ಡೆಂಟಲ್ ಕ್ಲಿನಿಕ್ ಅನ್ನು ಅಧಿಕಾರಿಗಳು ಸೀಲ್ ಮಾಡಿಸಿದ್ದಾರೆ.

ಉಡುಪಿ ಶ್ವೇತಾ ಎನ್ನುವರು ಶಾಶ್ವತ್ ಡೆಂಟಲ್ ಕ್ಲಿನಿಕ್ ಮತ್ತು ಲ್ಯಾಬ್ ಹೆಸರಿನ ವೈದ್ಯಕೀಯ ಸಂಸ್ಥೆಯನ್ನು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಸಂಸ್ಥೆಗಳ ಅಧಿನಿಯಮ 2007 ರ ಅಡಿಯಲ್ಲಿ ನವೀಕರಣವನ್ನು ಮಾಡಿದ್ದು ಶ್ವೇತಾ ಕ್ಲಿನಿಕ್‌ನ್ನು ನಡೆಸದೆ, ಯಾವುದೇ ವೈದ್ಯಕೀಯ ಪದವಿ ಹೊಂದಿರದ ಗೋವಿದಂ ಭಂಡಾರಿ ಎನ್ನುವ ನಕಲಿ ದಂತ ವೈದ್ಯನಾಗಿ ಈ ಕ್ಲಿನಿಕ್‌ನ್ನು ನಡೆಸುತ್ತಿದ್ದು ತನಿಖೆ ವೇಳೆ ತಿಳಿದುಬಂದಿದೆ.

ಈ ಬಗ್ಗೆ ರೋಗ್ಯ ಇಲಾಖೆ ವತಿಯಿಂದ ಈ ಕ್ಲಿನಿಕ್‌‌ನ್ನು ಸೀಲ್ ಮಾಡಲಾಗಿರುತ್ತದೆ. ಅರೋಪಿಗಳು ಸಮಾನ ಉದ್ದೇಶದಿಂದ ಸಾರ್ವಜನಿಕರನ್ನು ವಂಚಿಸಿ ಅರೋಗ್ಯ ಇಲಾಖೆ ಮತ್ತು ಸಾರ್ವಜನಿಕರಿಗೆ ಅಪರಾಧಿಕ ನಂಬಿಕೆ ದ್ರೋಹವೆಸಗಿ, ವಂಚನೆ ಮಾಡಿದ್ದಾರೆಂಬುದಾಗಿ ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರತ್ನ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಸಾಂದರ್ಭಿಕ ಚಿತ್ರಗಳು)

Comments are closed.