ಕರಾವಳಿ

ಬಿ.ಎಸ್.ವೈ ನೇತೃತ್ವದ ಬಿಜೆಪಿ ಸರ್ಕಾರಕ್ಕೆ 1 ವರ್ಷ; ಕುಂದಾಪುರ ಭಾ.ಜ.ಪ.ದಿಂದ ವನಮಹೋತ್ಸವ!

Pinterest LinkedIn Tumblr

ಕುಂದಾಪುರ: ಮುಖ್ಯಮಂತ್ರಿಗ ಬಿ. ಎಸ್.‌ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷದ ಅವಧಿ ಪೂರ್ಣಗೊಂಡ ಹಿನ್ನಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ ಹಾಗೂ ವಿವಿಧ ಮೋರ್ಚಾದ ಪಧಾಧಿಕಾರಿಗಳು ಮಂಗಳವಾರದಂದು ಕುಂದಾಪುರದಲ್ಲಿ ಸಾಂಕೇತಿಕವಾಗಿ ‘ಸಸಿ ನಡುವ ಕಾರ್ಯಕ್ರಮ’ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಮಂಡಲ ಮತ್ತು ಎಲ್ಲಾ ಮೋರ್ಚಾದ ಪಧಾಧಿಕಾರಿಗಳು 70 ಕ್ಕೂ ಹೆಚ್ಚು ಸಸಿಗಳನ್ನು ನಟ್ಟರು.

ಕಾರ್ಯಕ್ರಮದಲ್ಲಿ ಕುಂದಾಪುರದ ಕ್ಷೇತ್ರಾಧ್ಯಕ್ಷ ಶಂಕರ್ ಅಂಕದಕಟ್ಟೆ, ಮಂಡಲ ಪ್ರಧಾನಕಾಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ, ಸುರೇಶ್ ಶೆಟ್ಟಿ ಗೋಪಾಡಿ ,ಜಿಲ್ಲಾ ಕಾರ್ಯದರ್ಶಿಗಳಾದ ಸದಾನಂದ ಬಳ್ಕೂರು, ಗುಣರತ್ನ, ಜಿಲ್ಲಾ ಯುವಮೊರ್ಚಾ ಪ್ರಮುಖರಾದ ವಿನೋದ್ ರಾಜ್ ಶಾಂತಿನಿಕೇತನ, ಕುಂದಾಪುರ ಯುವ ಮೋರ್ಚಾ ಅಧ್ಯಕ್ಷ ಅವಿನಾಶ್ ಉಳ್ತೂರು, ರೈತಮೋರ್ಚಾ ಅಧ್ಯಕ್ಷ ಸುನಿಲ್ ಶೆಟ್ಟಿ ಹೇರಿಕುದ್ರು, ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗೋಪಾಲ್ ಕಳಂಜೆ, ಎಸ್ ಟಿ ಮೋರ್ಚಾ ಅಧ್ಯಕ್ಷ ಪ್ರವೀಣ್ ವಕ್ವಾಡಿ, ಮಹಿಳಾಮೋರ್ಚಾ ಅಧ್ಯಕ್ಷೆ ರೂಪಾ ಪೈ, ಹಿಂದುಳಿದ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸುಧೀರ್ ಕೆ ಎಸ್ , ಅಲ್ಪಸಂಖ್ಯಾತ ಮೋರ್ಚಾ ಕುಂದಾಪುರ ಅಧ್ಯಕ್ಷ ಫಿರೋಜ್ ಕೋಡಿ ಹಾಗೂ ಪಕ್ಷದ ಎಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Comments are closed.