ಕರಾವಳಿ

‘ನಮಗೆ ಹೊಸಾಡು ಬೇಡಾ…’; ಪ್ರತ್ಯೇಕ ‘ಸೇನಾಪುರ’ ಗ್ರಾ.ಪಂ. ಮಾಡಲು ಹೆಚ್ಚಿದ ಕೂಗು..!

Pinterest LinkedIn Tumblr

ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಡಾ ಗ್ರಾಮಪಂಚಾಯತಿಗೆ ಸೇರಿದ್ದ ಸೇನಾಪುರ ಗ್ರಾಮವನ್ನು ಯಾವುದೇ ಕಾರಣಕ್ಕೂ ಹೊಸಾಡು ಗ್ರಾಮಪಂಚಾಯತ್ ಗೆ ಸೇರಿಸಬಾರದು. ಬದಲಾಗಿ ಸೇನಾಪುರ ಗ್ರಾಮವನ್ನು ಪ್ರತ್ಯೇಕವಾಗಿ ಸ್ವತಂತ್ರ ಗ್ರಾಮಪಂಚಾಯತ್ ಮಾಡಬೇಕು ಎಂಬ ಬಲವಾದ ಕೂಗು ನಿತ್ಯವು ಹೆಚ್ಚುತ್ತಿದೆ.

ಮಂಗಳವಾರವೂ ಕೂಡ ಸೇನಾಪುರ ಗ್ರಾಮಸ್ಥರು ನಾಡಾ ಗ್ರಾಮಪಂಚಾಯತ್ ಎದುರು ಜಮಾಯಿಸಿ ಹೊಸಾಡು ಗ್ರಾಮಪಂಚಾಯತಿಗೆ ಸೇನಾಪುರ ಗ್ರಾಮ ಸೇರಿಸುವ ಹುನ್ನಾರದ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದ್ದು ಪ್ರಸ್ತುತ ನಾಡ ಗ್ರಾ.ಪಂ.ಗೆ ಸೇರಿದ ಸೇನಾಪುರ ಗ್ರಾಮವನ್ನು ಸ್ವತಂತ್ರ ಗ್ರಾ.ಪಂ ಮಾಡಿ ಎಂದು ಬೇಡಿಕೆ ಇಟ್ಟರು. ನಾಡಾ ಗ್ರಾ.ಪಂ ಪಿಡಿಒ ಅವರ ಮೂಲಕವಾಗಿ ಶಾಸಕರಿಗೆ ಸೇನಾಪುರ ಗ್ರಾಮಸ್ಥರು ಇದೇ ಸಂದರ್ಭ ಮನವಿ ಸಲ್ಲಿಸಿದರು.
ಸ್ವತಂತ್ರ ಗ್ರಾಮ ಪಂಚಾಯತ್ ಆಗಲು ಎಲ್ಲಾ ಅರ್ಹತೆಯನ್ನು ಸೇನಾಪುರ ಗ್ರಾಮ ಹೊಂದಿದ್ದು ಗ್ರಾ.ಪಂ ಕಟ್ಟಡಕ್ಕೆ ಬೇಕಾದ ಜಾಗ, ಸಂಪನ್ಮೂಲ ಕ್ರೋಢೀಕರಣಕ್ಕೂ ವ್ಯವಸ್ಥೆ ಇದ್ದು ಸ್ಥಳೀಯ ಸರಕಾರದ ಮೂಲ ಉದ್ದೇಶ ಈಡೇರಿಕೆಗೆ ಜನರು ಆಗ್ರಹಿಸಿದ್ದಾರೆ.

ಈ ಸಂದರ್ಭ ಮಾಜಿ ತಾ.ಪಂ ಅಧ್ಯಕ್ಷ ಶಂಕರ್ ಶೆಟ್ಟಿ ಬೆಳ್ಳಾಡಿ, ಮಾಜಿ ತಾ.ಪಂ ಸದಸ್ಯ ಕೆನಡಿ ಪಿರೇರಾ ಸ್ಥಳೀಯರಾದ ಮಂಜುನಾಥ್ ಪೂಜಾರಿ ಬೆಳ್ಳಾಡಿ, ಸಂದೀಪ್ ಪೂಜಾರಿ ಸೇನಾಪುರ, ಶೇಖರ್ ಶೆಟ್ಟಿ ಬೆಳ್ಳಾಡಿ ಮೊದಲಾದವರು ಉಪಸ್ಥಿತಿತರಿದ್ದರು.

Comments are closed.