ಕರಾವಳಿ

ರೆಡ್ ಕ್ರಾಸ್ ಸಂಸ್ಥೆ ವಿಶಾಲವಾದ ಮಾನವೀಯ ಸಂಸ್ಥೆ: ಕೋಟ ಶ್ರೀನಿವಾಸ ಪೂಜಾರಿ

Pinterest LinkedIn Tumblr

ಉಡುಪಿ: ಪ್ರಪಂಚದಲ್ಲಿ ಶತ್ರುಗಳೆ ಇಲ್ಲದ ಸಂಘಟನೆ ಎಂದರೆ ರೆಡ್ ಕ್ರಾಸ್ಸಂಸ್ಥೆ. ಈ ಸಂಸ್ಥೆಯು ಅರೋಗ್ಯ ಆರೈಕೆ ಸೇವೆಗಳಲ್ಲಿ ಅಂಗವಿಕಲರಿಗೆ, ಆರೋಗ್ಯ ವೃದ್ದಿಸುವ ಕಾರ್ಯ ನಿರ್ವಹಿಸುದರಲ್ಲಿ ಪ್ರಮುಖ ಪಾತ್ರ ವಹಿಸಿದೆ, ರೆಡ್ಕ್ರಾಸ್ ಸಂಸ್ಥೆಯು ವಿಶ್ವದ ಅತ್ಯಂತ ವಿಶಾಲವಾದ ಮಾನವೀಯ ಸೇವಾ ಸಂಘಟನೆಯಾಗಿದೆ. ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಬುಧವಾರ ರೆಡ್ ಕ್ರಾಸ್ ಭವನ ಅಜ್ಜರಕಾಡು ಉಡುಪಿ ಇಲ್ಲಿ , ರೆಡ್ ಕ್ರಾಸ್ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಜನತೆಗೆ ಮಾನವೀಯ ನೆರವು ನೀಡುವುದರೊಂದಿಗೆ ಸಮಾಜದ ಸ್ಥಾನವನ್ನು ಹೆಚ್ಚಿಸುವ ಕಾರ್ಯ ಚಟುವಟಿಕೆಗಳಿಗೆ ಒತ್ತು ನೀಡಿದೆ. ರೆಡ್ ಕ್ರಾಸ್ ಸಂಸ್ಥೆಯು ಇಂದು ಅಂಗವಿಕಲರ ಬದುಕನ್ನು ರೂಪಿಸಿದೆ.ಈ ಸಂಸ್ಥೆಯು ಜನಸೇವೆಯನ್ನಾಗಿ ಮಾಡುತ್ತ ಬಂದಿದೆ ಎಂದು ರೆಡ್ ಕ್ರಾಸ್ ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಲಾಕ್ ಡೌನ್ ಸಂದರ್ಭದಲ್ಲಿ ಕಷ್ಟಕ್ಕೆ ಸಿಲುಕಿದವರಿಗೆ ನೆರವು ನೀಡುವ ಕಾರ್ಯವನ್ನು ರೆಡ್ ಕ್ರಾಸ್ ಸಂಸ್ಥೆಯು ಮಾಡಿದೆ.ಕೊರೋನ ದಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದು ಸಾರ್ವಜನಕರಿಗೆ ಮಾಸ್ಕ್ ವಿತರಣೆ ,ಆಹಾರ ಕಿಟ್ ವಿತರಣೆಯನ್ನು ಮಾಡಿ ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯ ಮಾಡಿದೆ. ಬದುಕನ್ನು ಸವಲಾಗಿ ತೆಗೆದುಕೊಂಡು ಸಮಾಜಿಕ ಅಂತರವನ್ನು ಕಾಯ್ದುಕೊಂಡು ಕೊರೋನ ದ ವಿರುದ್ದ ನಾವು ಹೋರಾಡಬೇಕಿದೆ ಸಚಿವ ಕೋಟ ಹೇಳಿದರು. ಕರ್ನಾಟಕ ವಿಧಾನಪರಿಷತ್ ನ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು, ರಡ್ ಕ್ರಾಸ್ ಸಂಸ್ಥಾಪಕ ಹೆನ್ರಿ ಡ್ಯುಯೆಂಟ್ ಅವರ ಪ್ರತಿಮೆ ಅನಾವರಣ ಮಾಡಿ, 8 ಮಂದಿ ವಿಕಲಚೇತನರಿಗೆ ರೂ.5 ಲಕ್ಷ ಮೌಲ್ಯದ ಕೃತಕ ಅವಯವಗಳನ್ನು ವಿತರಿಸಿದರು.

ಉಡುಪಿ ರೆಡ್ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿ, ದಿನಾಂಕ 20.03.2020 ರಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕದ ಕೊರೊನಾ ವ್ಯರಸ್ ಜಾಗೃತಿ ಆಭಿಯಾನದ ಅಂಗವಾಗಿ ಸಿದ್ಧಪಡಿಸಿರುವ ಮಾಸ್ಕ್, ಸೋಪು ಮತ್ತು ಸ್ಯಾನಿಟೈಸರ್ಗಳನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರೂ ಹಾಗೂ ಮಾನ್ಯ ಜಿಲ್ಲಾಧಿಕಾರಿಯವರು ಶ್ರೀ ಜಿ. ಜಗದೀಶ್, ಭಾ.ಆ.ಸೇ ರವರು ಬಿಡುಗಡೆಗೊಳಿಸಿದ್ದು, ಎಪ್ರಿಲ್ 2 ರಿಂದ ಸತತವಾಗಿ ಕೊವಿಡ್ 19 ಪ್ರಚಾರ ಕಾರ್ಯಕ್ರಮಗಳಿಗಾಗಿಯೇ ಸಿದ್ಧ ಪಡಿಸಿದ ವಾಹನದೊಂದಿಗೆ ಪ್ರತೀ ದಿನ ರೆಡ್ ಕ್ರಾಸ್ನ ಪದಾಧಿಕಾರಿಗಳು, ಆಡಳಿತ ಮಂಡಳಿಯಸದಸ್ಯರುಗಳು ಮತ್ತು ಕೊವಿಡ್ ವಾರಿಯರ್ಸ್ ಮೂಲಕ ಧ್ವನಿವರ್ಧಕದ ಮೂಲಕ ಕೊರೊನಾ ವೈರಸ್ ಹರಡದಂತೆ ಮತ್ತು ಮುಂಜಾಗ್ರತಾ ಕಾರ್ಯಕ್ರಮಗಳ ಬಗ್ಗೆ ಸತತವಾಗಿ 56 ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಹೆಚ್ಚಿನ 123 ಗ್ರಾಮ ಪಂಚಾಯತ್ಗಳ ಸುಮಾರು 29000 ಕ್ಕೂ ಮಿಕ್ಕಿ ಮಾಸ್ಕ್, ಸ್ಯಾನಿಟೈಸರ್, ಸೋಪ್, ಆಹಾರ ಸಾಮಾಗ್ರಿಗಳ ಮತ್ತು ಜಾಗೃತಿ ಕರಪತ್ರಗಳನ್ನು ಅಸಂಘಟಿತ ಕಟ್ಟಡ ಕಾರ್ಮಿಕರಿಗೆ ಮತ್ತು ವಲಸೆ ಕಾರ್ಮಿಕರಿಗೆ ವಿತರಿಸಲಾಗಿರುತ್ತದೆ ಎಂದರು.

ಅಲ್ಲದೆ ಮುಂದಿನ ದಿನಗಳಲ್ಲಿ ಶತಮಾನ ವರ್ಷದ ನಮ್ಮ ಮುಂದಿನ ಗುರಿಗಳಾದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಉಡುಪಿ ಪೋಲಿಸ್ ಸಂಸ್ಥೆಯ ಜೊತೆಗೆ ರಸ್ತೆ ತಡೆ ಕಂಬಿಗಳಿಗೆ ಕೊವಿಡ್ 19 ಅರಿವು ಫಲಕಗಳನ್ನು ಆಳವಡಿಸುವುದು. ರಾಜ್ಯ ಸರಕಾರ ಆದೇಶ ಹೊರಡಿಸಿದ್ದು ನಗರದ ಆಯ್ದ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮತ್ತು ಪಾನ್ ಮಸಾಲ ಸೇವಿಸಿ ಉಗುಳುವುದನ್ನು ನಿಷೇಧಿಸಲು “ನಮಗೋಸ್ಕರ ಉಗುಳಬೇಡಿ”, “ಉಗುಳುವುದು ಶಿಕ್ಷಾರ್ಹ ಅಪರಾಧ” ಎನ್ನುವ ನಾಮಫಲಕಗಳನ್ನು ರೆಡ್ ಕ್ರಾಸ್ ಮೂಲಕ ಅಳವಡಿಸುವುದು. 5000 ಪೋಷಕ ಸದಸ್ಯತನವನ್ನು ಮಾಡುವುದು. ಜನಔಷಧಿ ಕೇಂದ್ರವನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಆರಂಭಿಸುವುದು. ಕೃತಕ ಅವಯವ ಜೋಡಣಾ ಘಟಕವನ್ನು ಅಭಿವೃದ್ದಿ ಪಡಿಸುವುದು. ಸನ್ಮಾನ್ಯ ಶ್ರೀ ಟಿ.ವಿ. ರಾವ್ರವರಿಂದ ದಾನ ಪಡೆದ ವಸುಂಧರಾ ನಗರದಲ್ಲಿ ಸುಸಜ್ಜಿತವಾದ ಕೃತಕ ಅವಯವ ಜೋಡಣಾ ಘಟಕ, ವೃದ್ಧಾಶ್ರಮ ಮತ್ತು ಎಲ್ಲಾ ಸೌಲಭ್ಯಗಳಿರುವ ರಕ್ತನಿಧಿ ಕೇಂದ್ರವನ್ನು ಸ್ಥಾಪಿಸುವುದು. 5 ಪ್ರತಿಶತ ಸ್ವಯಂ ಸೇವಕರನ್ನು ಸಂಸ್ಥೆಗೆ ನೇಮಿಸಿಕೊಳ್ಳುವುದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ. ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ರೆಡ್ಕ್ರಾಸ್ ಕಾರ್ಯದರ್ಶಿಗಳಾದ ಬಾಲಕೃಷ್ಣ ಶೆಟ್ಟಿ, ಖಜಾಂಚಿಗಳಾದ ಟಿ ಚಂದ್ರಶೇಖರ್ ಮತ್ತು ಆಡಳಿತ ಮಂಡಳಿ ಸದಸ್ಯರುಗಳು ಹಾಜರಿದ್ದರು. ಸಾಲಿಗ್ರಾಮ ಜಯರಾಮ್ ಆಚಾರ್ ನಿರೂಪಿಸಿದರು. ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ವಂದಿಸಿದರು.

Comments are closed.