ಕರಾವಳಿ

ಉಡುಪಿಯಲ್ಲಿ ಲ್ಯಾಬ್’ಗೆ ತೆರಳಿದ ಯುವತಿ ನಾಪತ್ತೆ

Pinterest LinkedIn Tumblr

ಉಡುಪಿ: ಬಡಗುಬೆಟ್ಟು ಕುಕ್ಕಿಕಟ್ಟೆ, ಬೈಲೂರು ನಿವಾಸಿ ಅಪೂರ್ವ (19) ಎಂಬುವವರು ನಗರದ ಲ್ಯಾಬ್ ಟೆಕ್ನಿಷಿಯನ್ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದು, ಅಕ್ಟೋಬರ್ 5 ರಂದು ಮನೆಯಿಂದ ಲ್ಯಾಬ್’ಗೆ ಹೋದವರು ವಾಪಾಸ್ ಬಾರದೇ ಕಾಣೆಯಾಗಿದ್ದಾರೆ.

4 ಅಡಿ, 5 ಇಂಚು ಎತ್ತರವಿದ್ದು, ಸಪೂರ ಮೈಕಟ್ಟು, ಎಣ್ಣೆಗಪ್ಪು ಮೈಬಣ್ಣ ಹೊಂದಿದ್ದು, ಕನ್ನಡ, ತುಳು, ಇಂಗ್ಲಿಷ್, ಹಿಂದಿ ಭಾಷೆ ಬಲ್ಲವರಾಗಿದ್ದು, ಇವರ ಪತ್ತೆಯಾದಲ್ಲಿ ಪಿ.ಎಸ್.ಐ ಉಡುಪಿ ನಗರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 0820-2520444, ಪೊಲೀಸ್ ವೃತ್ತ ನಿರೀಕ್ಷಕರು ದೂ.ಸಂಖ್ಯೆ: 0820-2520329, ಉಡುಪಿ ಜಿಲ್ಲಾ ನಿಸ್ಸಂತು ಕಚೇರಿ ದೂ. ಸಂಖ್ಯೆ: 0820-2526444, ಉಡುಪಿ ನಗರ ಠಾಣೆಗೆ ಮಾಹಿತಿ ನೀಡುವಂತೆ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Comments are closed.