ಕರಾವಳಿ

ಕಪ್ಪುಹಣವನ್ನು ಭಾರತಕ್ಕೆ ತರುವ ಪ್ರಯತ್ನಕ್ಕೆ ಭಾರೀ ಯಶಸ್ಸು : ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರು ಹೊಂದಿರುವ ಖಾತೆಗಳ ವಿವರ ಲಭ್ಯ

Pinterest LinkedIn Tumblr

ನವದೆಹಲಿ : ಭಾರತೀಯರು ಸ್ವಿಜ್ ಬ್ಯಾಂಕ್ ನಲ್ಲಿ ಹೊಂದಿರುವ ಕಪ್ಪುಹಣವನ್ನು ಭಾರತಕ್ಕೆ ತರುವ ಪ್ರಯತ್ನಕ್ಕೆ ಭಾರೀ ಯಶಸ್ಸು ಸಿಕ್ಕಿದೆ. ಸ್ವಿಜ್ ಬ್ಯಾಂಕ್ ನಲ್ಲಿ ಭಾರತೀಯರು ಹೊಂದಿರುವ ಕೋಟ್ಯಾಂತರ ಹಣದ ಬಗ್ಗೆ ಸ್ವಿಜರ್ಲ್ಯಾಂಡ್ ಸರಕಾರ ಮಾಹಿತಿ ನೀಡಿದ್ದು,ಇದು ಭಾರತೀಯ ಸರಕಾರದ ಹೋರಾಟಕ್ಕೆ ಸಿಕ್ಕಿರುವ ಮೊದಲ ಹಂತದ ಜಯವಾಗಿದೆ.

ಭಾರತ-ಸ್ವಿಡ್ಜರ್ಲ್ಯಾಂಡ್ ಹೊಸ ಒಪ್ಪಂದದಡಿಯಲ್ಲಿ ಭಾರತೀಯರ ಸ್ವಿಸ್ ಬ್ಯಾಂಕ್ ಖಾತೆಯ ವಿವರ ಪಡೆದುಕೊಂಡಿದ್ದು, ಎಇಒಐನಲ್ಲಿ ಜಾಗತಿಕ ಮಾನದಂಡಗಳ ಚೌಕಟ್ಟಿನೊಳಗೆ ಸ್ವಿಡ್ಜರ್ಲ್ಯಾಂಡ್ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ ಹಣಕಾಸು ಖಾತೆಗಳ ಮಾಹಿತಿಯನ್ನು ವಿನಿಮಯ ಮಾಡಿಕೊಂಡ 75 ದೇಶಗಳಲ್ಲಿ ಭಾರತವೂ ಸೇರಿದೆ.

ಎಇಒಐ ಚೌಕಟ್ಟಿನಡಿಯಲ್ಲಿ ಭಾರತವು ಮೊದಲ ಬಾರಿಗೆ ಸ್ವಿಸ್ ಅಧಿಕಾರಿಗಳಿಂದ ವಿವರಗಳನ್ನು ಪಡೆದುಕೊಂಡಿದೆ. ಇದು ಹಣಕಾಸು ಖಾತೆಗಳ ಮಾಹಿತಿ ವಿನಿಮಯವಾಗಿರಲಿದ್ದು 2018 ರಲ್ಲಿ ರದ್ದಾಗಿರುವ ಖಾತೆಗಳ ಮಾಹಿತಿ ಸಹ ಇವುಗಳ ಜತೆಗೆ ಲಭ್ಯವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

Comments are closed.