ಕರಾವಳಿ

ಚಕ್ರವರ್ತಿ ಸೂಲಿಬೆಲೆ ದೇಶದ್ರೋಹಿಯಲ್ಲ: ಬ್ಯಾಟ್ ಬೀಸಿದ ಮುತಾಲಿಕ್!

Pinterest LinkedIn Tumblr

ಉಡುಪಿ: ಚಕ್ರವರ್ತಿ ಸೂಲಿಬೆಲೆಯನ್ನು ದೇಶದ್ರೋಹಿ ಅಂದದ್ದು ತಪ್ಪು. ಅವರಿಗೆ ನೆರೆ ಪರಿಹಾರ ವಿಚಾರದಲ್ಲಿ ನೋವಿದೆ. ಅವರನ್ನು ನಾನು ಬೆಂಬಲಿಸುತ್ತೇನೆ. ಸಂಘ ಪರಿವಾರ ಇದನ್ನೆಲ್ಲ ಗಂಭೀರವಾಗಿ ಪರಿಗಣಿಸಬೇಕು ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಹೇಳಿದರು.

ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಭಾನುವಾರ ನಡೆದ ಚಂಡಿಕಾ ಹೋಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತದೆ. ನ್ಯಾಯಾಲಯದ ತೀರ್ಪಿನ ಬಗ್ಗೆ ನೂರಕ್ಕೆ ನೂರು ವಿಶ್ವಾಸ ಇದೆ. ಈ ಬಾರಿ ದತ್ತಮಾಲಾ ಕಾರ್ಯಕ್ರಮದಲ್ಲಿ 5 ಸಾವಿರ ಮಾಲಾಧಾರಿಗಳು ಭಾಗವಹಿಸುವ ನಿರೀಕ್ಷೆಯಿದೆ. ಶೋಭಾಯಾತ್ರೆ, ಧರ್ಮಸಭೆ, ದತ್ತಹೋಮ, ಗಣಹೋಮ ನಡೆಯಲಿದೆ.

ದಸರಾ ವೇದಿಕೆಯಲ್ಲಿ ಚಂದನ್‌ -ನಿವೇದಿತಾ ಪ್ರಪೋಸ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಸರಕಾರಿ ವೇದಿಕೆಯಲ್ಲಿ ಪ್ರೇಮ ನಿವೇದನೆ ಮಾಡಬಾರದೆಂಬ ನಿಯಮ ಎಲ್ಲಿದೆ ಎಂದು ಪ್ರಶ್ನಿಸಿದರು.

ಜನಪ್ರತಿನಿಧಿಗಳು ನೆರೆ ಪರಿಹಾರ ತರಿಸುವಲ್ಲಿ ಪೂರ್ಣ ಶ್ರಮಿಸಿದ್ದಾರೆ. ಕೇಂದ್ರ ಸರಕಾರ ಈಗ ನೀಡಿರುವ 1,200 ಕೋ.ರೂ. ಪರಿಹಾರ ಸಾಕಾಗದು. ಮುಂದೆ
ಒಳ್ಳೆದಾಗುತ್ತದೆ ಎಂಬ ವಿಶ್ವಾಸವಿದೆ ಎಂದರು.

Comments are closed.