ಕರಾವಳಿ

ಪುತ್ತೂರು ತಾಲೂಕು ಪ್ರಥಮ ಕವಿ ಕಾವ್ಯ ಸಂಭ್ರಮ ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ಸಿಗಲಿ : ದೀಕ್ಷಾ ಡಿ.ರೈ

Pinterest LinkedIn Tumblr

ಮಂಗಳೂರು / ಪುತ್ತೂರು: ಮಕ್ಕಳಿಗೆ ಅವರ ಪ್ರತಿಭೆಗೆ ಅನುಸಾರವಾಗಿ ಎಲ್ಲಾ ರೀತಿಯ ಪ್ರೋತ್ಸಾಹ ಸಿಗಲಿ ಎಂದು ಪೆನ್ಸಿಲ್ ಬಾಕ್ಸ್ ಚಿತ್ರದ ನಾಯಕಿ ನಟಿ ಬಾಲಕಿ ದೀಕ್ಷಾ ಡಿ.ರೈ ಹೇಳಿದರು.

ಅವರು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಮತ್ತು ಸತ್ಯಶಾಂತಾ ಪ್ರತಿಷ್ಠಾನದ ಸಂಯಕ್ತವಾಗಿ ಆಯೋಜಿಸಿದ್ದ ಪುತ್ತೂರು ತಾಲೂಕು ಪ್ರಥಮ ಕವಿ ಕಾವ್ಯ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕವಿಗಳ ನಡುವೆ ಈ ದೊಡ್ಡ ಗೌರವ ನೀಡಿದ್ದು ನನಗೆ ತುಂಬಾ ಸಂತೋಷ ತಂದಿದೆ. ನನ್ನ ಸಿನಿಮಾ ಪೆನ್ಸಿಲ್ ಬಾಕ್ಸ್ ಚಿತ್ರ ನೋಡಿ ನನ್ನ ಸಿನಿಮಾ ಪಯಣವನ್ನು ಹರಸಿ ಎಂದು ಅವರು ವಿನಂತಿಸಿದರು.

ಕವಿಗಳಿಗೆ ಕವಿತೆಯ ಜೊತೆ ಮಾತು ನೀಡಿರುವುದು ಕವಿ ಕಾವ್ಯ ಸಂಭ್ರಮದ ಸಂತೋಷವನ್ನು ಹೆಚ್ಚಿಸಿದೆ. ಉತ್ತಮ ಕವಿತೆಗಳು ಇಲ್ಲಿ ಮೂಡಿ ಬಂದವು. ಪ್ರತಿ ತಾಲೂಕಿನಲ್ಲಿಯೂ ಇಂತಹ ಕಾರ್ಯಕ್ರಮ ನಡೆಸುವ ಪ್ರಯತ್ನ ಅಭಿನಂದನೀಯ ಎಂದು ಅಧ್ಯಕ್ಷತೆ ವಹಿಸಿದ್ದ ಯುವ ಕವಿ, ಉಪನ್ಯಾಸಕ ದೀಪಕ್ ದುರ್ಗಾ ಹೇಳಿದರು.

ಕಾರ್ಮಿಕನಾಗಿದ್ದು ಬರವಣಿಗೆಯನ್ನು ನಿರಂತರವಾಗಿ ಮಾಡುತ್ತಾ ಬಂದಿರುವ ಸಾಮಾನ್ಯ ಕವಿಗೂ ಉದ್ಘಾಟನಾ ಕವಿತೆ ಓದುವ ಅವಕಾಶ ನೀಡಿದ್ದು ವಿಶೇಷ ಸಂಗತಿ ಎಂದು ಉದ್ಘಾಟನಾ ಕವಿತೆ ವಾಚಿಸಿದ ಆರ್ಯನ್ ಸವನಾಲ್ ಅಭಿಪ್ರಾಯ ಪಟ್ಟರು. ಕಥಾಬಿಂಧು ಪ್ರಕಾಶನದ ಪಿ.ವಿ.ಪ್ರದೀಪ್ ಕುಮಾರ್ ಮತ್ತು ನಿವೃತ ಶಿಕ್ಷಕ-ಕವಿ ಗುಣಾಜೆ ರಾಮಚಂದ್ರ ಭಟ್ ಮತ್ತು ಆಮಂತ್ರಣ ಪರಿವಾರ ಮತ್ತು ಅಡ್ಮಿನ್ ಪವರ್ ಅಧ್ಯಕ್ಷ ವಿಜಯ ಕುಮಾರ್ ಜೈನ್ ಅಳದಂಗಡಿ ಅವರು ಮುಖ್ಯ ಅತಿಥಿಗಳಾಗಿದ್ದರು.

ಸತ್ಯ ಶಾಂತಾ ಪ್ರತಿಷ್ಠಾನದ ಅಧ್ಯಕ್ಷೆ ಶಾಂತಾ ಕುಂಠಿನಿ ಅವರು ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಸೌರಭ ಪ್ರಾರ್ಥಿಸಿದರು. ಸಂಚಾಲಕ ಸತ್ಯಾತ್ಮ ಕುಂಟಿನಿ ವಂದಿಸಿದರು. ಸತ್ಯಕಾಮ ಕುಂಟಿನಿ ಒಂದು ನೃತ್ಯ ಪ್ರದರ್ಶನ ಮಾಡಿದರು. ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ರಾಜ್ಯಾಧ್ಯಕ್ಷ ಡಾ. ಶೇಖರ ಅಜೆಕಾರು ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ನಿರೂಪಿಸಿದರು.

ಕವಿಗೋಷ್ಠಿಯಲ್ಲಿ ದೀಪಕ್ ದುರ್ಗಾ ಹೆಬ್ರಿ, ವಿಘ್ನೇಶ ಕೆ. ಬಿಡೆ ಮಂಗಳೂರು, ಹಿದಾಯತ್ ಕಂಡ್ಲೂರಿ ಕುಂದಾಪುರ, ಬಾಲಕೃಷ್ಣ ಕೇಪುಳ, ಕಾಪು, ಹೇಮಂತ್ ಕುಮಾರ್ ಡಿ. ಬಂಟ್ವಾಳ, ಶಿವ ಕುಮಾರ್ ಸವಣೂರು, ದಿಲೀಪ್ ವೇದಿಕ್ ಕಡಬ, ಸೌರಭ ಕುಂಠಿನಿ, ಸತ್ಯಾತ್ಮ ಕುಂಟಿನಿ, ಆರ್ಯನ್ ಸವಣಾಲ್, ಗೋಪಾಲಕೃಷ್ಣ ಕಟ್ಟತ್ತಿಲ ಪುತ್ತೂರು ಮತ್ತು ಗುಣಾಜೆ ರಾಮಚಂದ್ರ ಭಟ್ ಕವನ ವಾಚಿಸಿ ಕಾವ್ಯಾನುಭವ ಹಂಚಿ ಕೊಂಡರು.

Comments are closed.