ಕರಾವಳಿ

ಹಿರಿಯರು ಮಾಡಿರುವ ಹಿಂದಿನ ಕೆಲವು ಸಂಪ್ರದಾಯಗಳಲ್ಲಿ ಅಡಗಿರುವ ವೈಜ್ಞಾನಿಕ ಕಾರಣಗಳು

Pinterest LinkedIn Tumblr

ಹಿರಿಯರು ಮಾಡಿರುವ ಕೆಲವೊಂದು ಸಂಪ್ರದಾಯಗಳನ್ನು ಕೆಲವರು ಮೂಡನಂಬಿಕೆ, ಅಪ್ಪ ಹಾಕಿದ ಆಲದಮರ, ಅಂತ ಹಾಗೆ ಹೀಗೆ ಎಂದು ಟೀಕಿಸುತ್ತಾರೆ.ಆದರೆ ನಮಗೆ ಗೊತ್ತಿಲ್ಲದ ವಿಚಾರವೆಂದರೆ, ನಮ್ಮ ಹಿರಿಯರು ಮಾಡಿರುವ ಅನೇಕ ಸಂಪ್ರದಾಯಗಳ ಹಿಂದೆ ವೈಜ್ಞಾನಿಕ ಕಾರಣಗಳು ಅಡಗಿರುವುದು ಅಷ್ಟೇ ಸತ್ಯ.

ಹಿಂದೂ ಸಂಪ್ರದಾಯದಲ್ಲಿನ ಪ್ರತಿಯೊಂದು ಆಚರಣೆಳಿಗೂ ವೈಜ್ಞಾನಿಕ ಹಿನ್ನೆಲೆ ಇದೆ. ಹಿರಿಯರು ಮಾಡಿರುವಂತೆ ನಾವು ಧರಿಸುವ ಪ್ರತಿಯೊಂದು ವಸ್ತುವೂ ನಮಗೆ ಆರೋಗ್ಯದ ಜೊತೆಗೆ ವಿಕಾಸವನ್ನು ನೀಡುತ್ತದೆ. ಅದರಲ್ಲಿ ಒಂದು ನಮ್ಮ ಗಂಡು ಮಕ್ಕಳು ಸೊಂಟಕ್ಕೆ ಕಟ್ಟಿಕೊಳ್ಳುವ ಉಡದಾರ ಸಹ ಒಂದು.

ಉಡುದಾರ ಕಟ್ಟುವುದರ ಹಿಂದೆ ಇದೆ ವೈಜ್ಞಾನಿಕ ಕಾರಣಗಳು…
ಉಡದಾರ ಧರಿಸುವುದು ಹಿಂದೂ ಸಂಪ್ರದಾಯಗಳಲ್ಲಿ ಒಂದಾಗಿದ್ದು, ಇದು ಹಿಂದೂಗಳಲ್ಲಿ ಪ್ರತಿ ಪುರುಷನಿಗೆ ಇರುತ್ತದೆ. ಚಿಕ್ಕ ಮಕ್ಕಳಿಗೆ ಉಡದಾರ ಕಟ್ಟಿದರೆ ಅವರ ಬೆಳವಣಿಗೆಯ ಸಮಯದಲ್ಲಿ ಮೂಳೆಗಳು, ಖಂಡಗಳು ಸರಿಯಾದ ಪದ್ದತಿಯಲ್ಲಿ ವೃದ್ಧಿಯಾಗುತ್ತವೆಯಂತೆ. ಮುಖ್ಯವಾಗಿ ಗಂಡು ಮಕ್ಕಳ ಬೆಳವಣಿಗೆಯ ಸಂದರ್ಭದಲ್ಲಿ ಪುರುಷಾಂಗ ಯಾವುದೇ ರೀತಿಯ ಅಸಮತೋಲನೆಗೆ ಗುರಿಯಾಗದೇ ಸರಿಯಾದ ರೀತಿಯಲ್ಲಿ ಬೆಳವಣಿಗೆಯಾಗಲು ಉಡದಾರ ಕಟ್ಟುತ್ತಾರಂತೆ.

ಉಡದಾರ ಧರಿಸಿದರೆ ರಕ್ತ ಪ್ರಸರಣ ಕೂಡ ಉತ್ತಮಗೊಳ್ಳುತ್ತದೆ. ಗಂಡಸರಿಗೆ ಹೆರ್ನಿಯಾ ಬರದಂತೆ ಉಡದಾರ ಕಾಪಾಡುತ್ತದೆಯಂತೆ. ಇದನ್ನು ಕೆಲವು ವಿಜ್ಞಾನಿಗಳು ಸಹ ನಿರೂಪಿಸಿದ್ದಾರಂತೆ‌. ನಮ್ಮಲ್ಲಿ ಚಿಕ್ಕ ಮಕ್ಕಳಿಗೆ ಸಾಮಾನ್ಯವಾಗಿ ತಾಮ್ರದಲ್ಲಿ ಮಾಡಿದ ಉಡದಾರವನ್ನು ಕಟ್ಟುತ್ತಾರೆ. ಅಂದರೆ ಯಾವುದೇ ರೀತಿಯ ಉಡುದಾರ ಧರಿಸಿದರೂ ಅದರಿಂದ ಉಪಯೋಗ ಮಾತ್ರ ಖಂಡಿತ ಇರುತ್ತದೆ.

Comments are closed.