ಕರಾವಳಿ

ಅಪರೂಪದ ಪ್ರಕರಣ: ಹಲ್ಲೆ ಆರೋಪಿಗೆ ಶಿಕ್ಷೆ‌ ವಿಧಿಸಿ ಆದೇಶ: ಮೇಲ್ಮನವಿ ವಜಾ

Pinterest LinkedIn Tumblr

ಕುಂದಾಪುರ: ಹಲ್ಲೆ ಪ್ರಕರಣದಲ್ಲಿ ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಆರೋಪಿ ಸಲ್ಲಿಸಿದ ಮೇಲ್ಮನವಿಯನ್ನು ಕುಂದಾಪುರ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ವಜಾಗೊಳಿಸಿ ಕೆಳ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದ ಅಪರೂಪದ ಪ್ರಸಂಗ ಇಲ್ಲಿನ ನ್ಯಾಯಾಲಯದಲ್ಲಿ ನಡೆದಿದೆ.

ಬೆಳ್ವೆ ಗ್ರಾಮದ ಜಾಗದ ತಕರಾರಿಗೆ ಸಂಬಂಧಿಸಿದಂತೆ ಅಂದಿನ ಅವಧಿಯ ಗ್ರಾಮ ಪಂಚಾಯಿತಿ  ಅಧ್ಯಕ್ಷ ಉದಯ ಕುಮಾರ ಪೂಜಾರಿ ಅವರು ಇತ್ಯರ್ಥಕ್ಕೆ ಮುಂದಾದ ವೇಳೆ ಅವರ ಮೇಲೆ ಹಲ್ಲೆ ನಡೆದಿತ್ತು. ಮಹಾಬಲೇಶ್ವರಿ ಬಾಯರಿ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ಉದಯಕುಮಾರ ಪೂಜಾರಿ ನೀಡಿದ್ದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ ವಿರುದ್ದ ಪೋಲಿಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕುಂದಾಪುರ ಜೆಎಂಎಫ್‌ಸಿ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿ, ತಪ್ಪಿದಲ್ಲಿ ದಂಡ ತೆರೆವುವಂತೆ ತೀರ್ಪು ನೀಡಿತ್ತು . ಹಲ್ಲೆ ಪ್ರಕರಣದಲ್ಲಿ ಆರೋಪಿ ಶಿಕ್ಷೆಗೆ ಒಳಪಟ್ಟ ಅಪರೂಪದ ಪ್ರಕರಣ ಇದಾಗಿತ್ತು.

ಜೆಎಂಎಫ್‌ಸಿ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮಹಾಬಲೇಶ್ವರ ಬಾಯರಿ ಕುಂದಾಪುರ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಜೆಎಂಎಫ್‌ಸಿ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದು ಮೇಲ್ಮನವಿ ವಜಾಗೊಳಿಸಿದೆ. ಆರೋಪಿಯು ನ್ಯಾಯಾಲಯಕ್ಕೆ ದಂಡ ಪಾವತಿಸಿ ಬಿಡುಗಡೆಗೊಂಡಿದ್ದಾರೆ.

Comments are closed.