ಕರಾವಳಿ

ಊಟವಾದ ಬಳಿಕ ತಕ್ಷಣ ಸಿಗರೇಟ್ ಸೇದುವ ಹಾವ್ಯಾಸವಿದೆಯೇ ಹಾಗಾದರೆ  ಇದನ್ನ ಓದಿ..!

Pinterest LinkedIn Tumblr
ದೈಹಿಕ ಚಟುವಟಿಕೆಯ ಜೊತೆಗೆ ಪೌಷ್ಟಿಕ, ಸಮತೋಲನದ ಆಹಾರ ಮತ್ತು ಧೂಮಪಾನದಿಂದ ದೂರವಿರುವುದು ಒಳ್ಳೆಯ ಆರೋಗ್ಯದ ಅಡಿಪಾಯವಾಗಿದೆ. ಆರೋಗ್ಯಕರ ಆಹಾರ ತಿನ್ನುವಿಕೆಯು ದೇಹವು ದಿನನಿತ್ಯದ ಕಾರ್ಯಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ, ಸೂಕ್ತ ದೇಹ ತೂಕವನ್ನು ಉತ್ತೇಜಿಸುತ್ತದೆ ಮತ್ತು ರೋಗಗಳನ್ನು ತಡೆಗಟ್ಟುವಲ್ಲಿ ನೆರವಾಗುತ್ತದೆ. ವೈದ್ಯರ ಪ್ರಕಾರ,ಸರಿಯಾದ ಸಮಯ ಮತ್ತು ಸರಿಯಾದ ಪ್ರಮಾಣದಲ್ಲಿ ತಿನ್ನುವುದು ಅತ್ಯಗತ್ಯ. ತಿನ್ನುವ ನಂತರ ನೀವು ಎಂದಿಗೂ ಮಾಡಬಾರದಾದ ಹಲವಾರು ವಿಷಯಗಳಿವೆ. ಅವುಗಳಲ್ಲಿ ಮುಖ್ಯವಾದುದು ” ಸಿಗರೇಟ್ “ , ಹೌದು ಊಟ ಆದ ತಕ್ಷಣ ಸಿಗರೇಟ್ ಸೇದುವುದು ಅಪಾಯಕರ ಹಾಗೂ ಅನಾರೋಗ್ಯಕರ.
ಊಟದ ನಂತರ ತಕ್ಷಣ ಸಿಗರೇಟ್ ಸೇದುವುದು ಒಳಿತಲ್ಲ.
ಧೂಮಪಾನ ಸಾಕಷ್ಟು ಕೆಟ್ಟದ್ದು, ಅದು ನಮಗೆಲ್ಲರಿಗೂ ಗೊತ್ತು , ಆದರೇ ತಲೆ ಬಿಸಿಯಾಗಿದೆ, ಮೈಂಡ್ ರಿಲಿಪ್ ಆಗುತ್ತೆ ಅನ್ನೋ ಸಂಜಾಯಿಶಿ ನೀಡಿ ದಮ್ ಹೊಡೆಯೋದನ್ನ ಮಾತ್ರ ಬಿಡೋಲ್ಲ. ಆದರೆ ಊಟದ ನಂತರ ಸೇದುವ ಸಿಗರೇಟ್ ನಮ್ಮ ದೇಹದ ಮೇಲೆ ಬಾರಿ ಪ್ರಮಾಣದ ಪರಿಣಾಮ ಬೀರುತ್ತದೆ. ಇದು ನಮ್ಮ ದೇಹದ ಮೇಲೆ ಕೊಲೆಗಾರನಂತೆ ವರ್ತಿಸುತ್ತದೆ. ಹೌದು, ಅದು ಸರಿ ! ಸಿಗರೇಟ್ ಕನಿಷ್ಠ ಅರವತ್ತು ಕಾರ್ಸಿನೋಜೆನ್ಗಳನ್ನು ಹೊಂದಿರುತ್ತದೆ (ಇದು, ಬೇಗನೆ ಕ್ಯಾನ್ಸರ್ ಗೆ ಕಾರಣವಾಗುತ್ತದೆ). ಆದ್ದರಿಂದ, ಊಟದ ನಂತರ ಮತ್ತು ಊಟಕ್ಕೆ ಮುಂಚಿತವಾಗಿ ಸಿಗರೇಟ್ ಸೇದುವುದು ಕೆಟ್ಟ ಆಲೋಚನೆ.
ಊಟದ ನಂತರ ತಕ್ಷಣ ಸಿಗರೇಟ್ ಸೇದ್ತೀರ – ವಿಜ್ಞಾನಿಗಳು ಏನಂತಾರೆ ?
ವಿಜ್ಞಾನಿಗಳ ಪ್ರಕಾರ, ಊಟದ ನಂತರ ಸಿಗರೆಟ್ ತುಂಬಾ ಅಪಾಯಕಾರಿಯಾಗಿದೆ ಮತ್ತು ಅದು ಸಂಪೂರ್ಣ ದೇಹವನ್ನು ಹಾನಿಗೊಳಿಸುತ್ತದೆ, ವಿಜ್ಞಾನಿಗಳ ಪ್ರಕಾರ, ಊಟದ ನಂತರ ಸೇದುವ ಸಿಗರೇಟ್ 10 ಸಿಗರೇಟ್ ಗಳಿಗೆ ಸಮ. ಊಟದ ನಂತರ ಮಾಡುವ ಧೂಮಪಾನ ಕರುಳಿನ ಮೇಲೆ ಪರಿಣಾಮ ಬೀರುತ್ತದೆ. ಕರುಳಿನ ಕಿರಿಕಿರಿಯನ್ನು ಉಂಟುಮಾಡುತ್ತದೆ.
ಊಟದ ನಂತರ ಸಿಗರೇಟ್ ಸೇದುವುದು ಕರುಳಿನ ಕ್ಯಾನ್ಸರ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಜೀರ್ಣಾಂಗ ವ್ಯವಸ್ತೆಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

Comments are closed.