ಕರಾವಳಿ

ಕ್ರೀಡಾ ಅಂಕಣಕಾರ ಎಸ್.ಜಗದೀಶ್ಚಂದ್ರ ಅಂಚನ್‌ರಿಗೆ ‘ಜಾನಪದ ಲೋಕ ರಾಜ್ಯ ಪ್ರಶಸ್ತಿ’

Pinterest LinkedIn Tumblr

ಮಂಗಳೂರು. ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು , ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಇದರ ವತಿಯಿಂದ ಬೆಂಗಳೂರು -ಮೈಸೂರು ಹೆದ್ದಾರಿ ರಾಮನಗರದಲ್ಲಿ ನಡೆದ ಪ್ರವಾಸಿ ಜಾನಪದ ಲೋಕೋತ್ಸವ -2019ರ ಸಮಾರೋಪ ಸಮಾರಂಭದಲ್ಲಿ ಕ್ರೀಡಾ ಅಂಕಣಕಾರ ಶ್ರೀ ಎಸ್.ಜಗದೀಶ್ಚಂದ್ರ ಅಂಚನ್ ಸೂಟರ್ ಪೇಟೆ ಸೇರಿದಂತೆ ರಾಜ್ಯದ ವಿವಿಧ ಭಾಗದ 32 ಮಂದಿಗೆ ‘ಜಾನಪದ ಲೋಕ-2019ರ ರಾಜ್ಯ ಪ್ರಶಸ್ತಿ’ ಯನ್ನು ಭಾನುವಾರ ಪ್ರದಾನ ಮಾಡಲಾಯಿತು.

ಕ್ರೀಡಾ ಅಂಕಣಕಾರರಾಗಿ ಗುರುತಿಸಿ ಕೊಂಡಿರುವ ಶ್ರೀ ಎಸ್.ಜಗದೀಶ್ಚಂದ್ರ ಅಂಚನ್ ಅವರು ಜನಪದ ಕ್ರೀಡೆಗಳ ಕುರಿತು, ಜನಪದ ಸಾಧಕರ ಕುರಿತು, ಯಕ್ಷಗಾನ ಹಾಗೂ ಜನಪದ ಕಲೆಗಳ ಬಗ್ಗೆ ವಿಶೇಷ ಕಾಳಜಿಯಿಂದ ಬರೆದ ವಿಮರ್ಶಾ ಲೇಖನಗಳನ್ನು ಪರಿಗಣಿಸಿ ಜಾನಪದ ಲೋಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.

ರಾಮನಗರದ ಜಾನಪದ ಲೋಕದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ , ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಶ್ರೀ ಕೆ.ಎಲ್.ಮಂಜುನಾಥ ಇವರಿಂದ ಶ್ರೀ ಎಸ್ .ಜಗದೀಶ್ಚಂದ್ರ ಅಂಚನ್ ಜಾನಪದ ಲೋಕ ರಾಜ್ಯ ಪ್ರಶಸ್ತಿಯನ್ನು ಸ್ವೀಕರಿಸಿಕೊಂಡರು.

ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಠ ಶಾಖಾ ಮಠಾಧೀಶರಾದ ಶ್ರೀ ಶ್ರೀ ಅನ್ನದಾನೇಶ್ವರ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯರುಗಳಾದ ಶ್ರೀ ಸಿ.ಎಂ.ಲಿಂಗಪ್ಪ , ಶ್ರೀ ಅ.ದೇವೇಗೌಡ, ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಶ್ರೀ ಟಿ.ತಿಮ್ಮೇಗೌಡ,  ಮ್ಯಾನೇಜೀಂಗ್ ಟ್ರಸ್ಟಿ ಶ್ರೀ ಆದಿತ್ಯ ನಂಜರಾಜ್, ಪ್ರೋ.ಹಿ.ಸಿ.ರಾಮಚಂದ್ರೇಗೌಡ , ಪ್ರೋ.ಜಯಪ್ರಕಾಶ್ ಗೌಡ ಮೊದಲಾದವರು ಉಪಸ್ಥಿತರಿದ್ದರು.

Comments are closed.