ಕರಾವಳಿ

ಬಾಣಂತಿಯರು ಹೆರಿಗೆಯ ಬಳಿಕ ಅನುಭವಿಸುವ ಕೆಲವು ಸಮಸ್ಯೆಗಳು ಹಾಗೂ ಪರಿಹಾರಗಳು

Pinterest LinkedIn Tumblr

ಜಗತ್ತಿನಲ್ಲಿ ಅತ್ಯಂತ ದೊಡ್ಡ ನೋವು ಅಂದರೆ ಹೆರಿಗೆ ನೋವು ಎಂದು ಹೇಳಲಾಗುತ್ತದೆ. ಹೆರಿಗೆಯ ಸಮಯದಲ್ಲಿ ಮಾತ್ರವಲ್ಲ, ಹೆರಿಗೆಯ ಬಳಿಕವೂ ಬಾಣಂತಿ ಎದುರಿಸುವ ಮಾನಸಿಕ ಒತ್ತಡ, ಖಿನ್ನತೆಗಳೂ ಪರೋಕ್ಷವಾಗಿ ಹಿಂಡುತ್ತವೆ. ಆದರೆ ಹೆರಿಗೆಯ ಬಳಿಕವೂ ಕೆಲವು ಅಚ್ಚರಿಗಳನ್ನು ನಿರೀಕ್ಷಿಸಿ ಎಂದು ಪ್ರಸೂತಿ ತಜ್ಞರು ತಿಳಿಸುತ್ತಾರೆ.

ಇವೆಲ್ಲವೂ ಅನೈಚ್ಚಿಕವಾದರೂ ಹೆರಿಗೆಯ ಬಳಿಕ ದೇಹ ಮೊದಲಿನ ಸ್ಥಿತಿಗೆ ಹಿಂದಿರುಗಳು ಅನಿವಾರ್ಯವಾದವುಗಳಾಗಿವೆ. ಉದಾಹರಣೆಗೆ ಉಬ್ಬಿದ ಹೊಟ್ಟೆ. ಸಾಮಾನ್ಯವಾಗಿ ಸಿಸೇರಿಯನ್ ಹೆರಿಗೆಯಾದ ಮಹಿಳೆಯರಲ್ಲಿ ಹೆರಿಗೆಯ ಬಳಿಕ ಕೆಳಹೊಟ್ಟೆ ದೊಡ್ಡದಾಗಿದ್ದು ಜೋತು ಬಿದ್ದಿರುವಂತೆ ಕಾಣುತ್ತದೆ. ಸತತ ಮತ್ತು ನಿಲ್ಲದ ರಕ್ತಸ್ರಾವ, ಸುಸ್ತು, ಸೊಂಟದ ಅಗಲ ಹೆಚ್ಚುವುದು ಇತ್ಯಾದಿಗಳು ಬಾಣಂತಿಯ ಸೌಂದರ್ಯವನ್ನು ಕುಂದಿಸುತ್ತವೆ.

ಆದರೆ ನವಜಾತ ಮಗುವಿಗಾಗಿ ತಾಯಿ ತನ್ನ ದೇಹದಲ್ಲಾದ ಎಲ್ಲಾ ಬದಲಾವಣೆಗಳನ್ನು ಖುಷಿಯಿಂದಲೇ ಸ್ವೀಕರಿಸುತ್ತಾಳೆ ಮತ್ತು ಸ್ವೀಕರಿಸಬೇಕು ಸಹಾ. ಹೆರಿಗೆಯ ಬಳಿಕ ಏನೇನಾಗುತ್ತದೆ ಎಂದು ಹೆರಿಗೆಯ ಮುನ್ನ ತಿಳಿದುಕೊಂಡಿದ್ದರೆ ಮಾನಸಿಕವಾಗಿ ಸಿದ್ಧರಿರಲು ಸಾಧ್ಯವಾಗುತ್ತದೆ ಹಾಗೂ ಇದು ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಈ ನಿಟ್ಟಿನಲ್ಲಿ ಹೆರಿಗೆ ಆಸ್ಪತ್ರೆಯಿಂದ ಮನೆಗೆ ಹೋದ ಬಳಿಕ ತಮ್ಮ ದೇಹದಲ್ಲಿ ಯಾವ ಬದಲಾವಣೆಗಳಾಗುತ್ತವೆ ಎಂದು ಬಾಣಂತಿಯರು ತಿಳಿದುಕೊಂಡಿದ್ದರೆ ಉತ್ತಮ.

ಆರಾಮವಾಗಿ ಕುಳಿತು ನಿರಾಳರಾಗಿ ಈ ಮಾಹಿತಿಗಳನ್ನು ಓದಿ…

ಹಿಮ್ಮುಖ ಮಸಾಜ್ (The Fundal Massage) ಯಾವುದೇ ಮಹಿಳೆ ಇಷ್ಟಪಡದ ಮಸಾಜ್ ಇದು. ಹೆಸರು ಕೊಂಚ ಭಯಹುಟ್ಟಿಸುವಂತೆ ಕಂಡರೂ ಇದು ವಾಸ್ತವವಾಗಿ ಕೊಂಚ ಕಷ್ಟಕರವಾದ ಮತ್ತು ನೋವಿನಿಂದ ಕೂಡಿದ ಮಸಾಜ್ ಆಗಿದೆ. ಹೆರಿಗೆಯ ಬಳಿಕ ಗರ್ಭಕೋಶ ಕೆಳಗೆ ಬಂದಿದ್ದು ಇದನ್ನು ಪುನಃ ಸ್ವಸ್ಥಾನಕ್ಕೆ ಸೇರಿಸುವುದು ಅತಿ ಅಗತ್ಯವಾಗಿದೆ. ಆದ್ದರಿಂದ ನಿಮ್ಮ ಪ್ರಸೂತಿ ವೈದ್ಯರು ಹೊಟ್ಟೆಯ ಕೆಳಭಾಗದಿಂದ ಮೇಲಕ್ಕೆ ಬರುವಂತೆ ಕೊಂಚ ಒತ್ತಡ ಹೇರಿ ಮಸಾಜ್ ಮಾಡುತ್ತಾರೆ.

ಈ ಕ್ರಿಯೆಯಲ್ಲಿ ಬಾಣಂತಿ ಕೊಂಚ ನೋವು ಅನುಭವಿಸುವುದು ಅನಿವಾರ್ಯವಾದರೂ ಹೆರಿಗೆಯ ಬಳಿಕ ಎದುರಾಗುವ ರಕ್ತಸ್ರಾವ ತಡೆಯಲು ಈ ಕ್ರಮ ಅನಿವಾರ್ಯವಾಗಿದೆ.

ಹೊಟ್ಟೆಯೊಳಗೆ ಅನುಭವಿಸುವ ಭೂಕಂಪ..!
ಹೆರಿಗೆಯ ಬಳಿಕ ಬಾಣಂತಿಯ ಹೊಟ್ಟೆಯ ಅಂಗಗಳು ಕಂಪಿಸಿ ಭೂಕಂಪದಂತಹ ಅನುಭವವಾಗುತ್ತದೆ. ಸ್ತ್ರೀರೋಗ ತಜ್ಞರ ಪ್ರಕಾರ ಇದು ಅತಿ ಸಾಮಾನ್ಯವಾದ ಅನುಭವವಾಗಿದೆ. ಏಕೆಂದರೆ ಹೆರಿಗೆಗೂ ಮುನ್ನ ಸ್ರವಿಸಿದ್ದ ಹಾರ್ಮೋನುಗಳ ಪ್ರಭಾವ ಈಗ ಹಿಂದೆ ಸರಿಯುವುದು ಮತ್ತು ಇದಕ್ಕಾಗಿ ಅಡ್ರಿನಲಿನ್ ಎಂಬ ಹಾರ್ಮೋನು ಸ್ರವಿಸುವ ಪ್ರಭಾವವಾಗಿದೆ. ಇದು ಸಹಾ ಅನಿವಾರ್ಯವಾದ ಅನುಭವವಾಗಿದ್ದು ಎಲ್ಲವೂ ಮೊದಲಿನಂತಗುತ್ತಿದೆ ಎಂಬುದರ ಸೂಚನೆಯಾಗಿದೆ. ಇದು ಆಗದೇ ಇದ್ದರೆ ಅಥವಾ ಪ್ರಾರಂಭವಾಗಿ ಕೆಲದಿನಗಳವೆರೆಗೂ ಕಡಿಮೆಯಾಗದೇ ಇದ್ದರೆ ಮಾತ್ರ ಆತಂಕಕಾರಿಯಾಗಿದೆ. ಇದಕ್ಕೆ ಹೆರಿಗೆಯ ಬಳಿಕ ಉಂಟಾದ ಸೋಂಕು ಕಾರಣವಾಗಿರಬಹುದು. ನೋವು ಕೊಡುವ ಹೊಲಿಗೆಗಳು ಹೆರಿಗೆಯ ಸಮಯದಲ್ಲಿ ಅನುಕೂಲಕರವಾಗಲೆಂದು ವೈದ್ಯರು ಗರ್ಭದ್ವಾರದ ಭಾಗವನ್ನು ಗುದದ್ವಾರದವರೆಗೆ ಅಗಲಿಸಿರುತ್ತಾರೆ.ಹೆರಿಗೆಯ ಬಳಿಕ ಈ ಭಾಗವನ್ನು ಮತ್ತೆ ಹೊಲಿದಿರುತ್ತಾರೆ. ಈ ಹೊಲಿಗೆಗೆ ಇಂದು ಚರ್ಮದಲ್ಲಿಯೇ ಲೀನವಾಗುವಂತಹ ಸಾಮಾಗ್ರಿಯಿಂದ ತಯಾರಾದ ನೂಲನ್ನು ಬಳಸಲಾಗುತ್ತದೆ. ಆದರೆ ಇದು ಗುಣವಾಗುವವರೆಗೆ ನಿತ್ಯಕರ್ಮಗಳಿಗೆ ನೀಡುವ ಒತ್ತಡ ಈ ಹೊಲಿಗೆಯ ಮೇಲೂ ಒತ್ತಡ ಹೇರಿ ನೋವು ಉಂಟುಮಾಡುತ್ತವೆ.

ಸಿಸೇರಿಯನ್ ಹೆರಿಗೆಯಾದ ಮಹಿಳೆಯರಲ್ಲಿ ಕೆಳಹೊಟ್ಟೆಯಲ್ಲಿ ಕೊಯ್ದ ಭಾಗವನ್ನೂ ಹೀಗೇ ಹೊಲಿಗೆ ಹಾಕಿರುತ್ತಾರೆ. ಈ ಹೊಲಿಗೆ ಇನ್ನಷ್ಟು ಅಗಲವಾಗಿರುತ್ತದೆ. ಈ ಗಾಯ ಮಾಗಲು ಹೆಚ್ಚು ದಿನ ಬೇಕು. ಹೆಚ್ಚುವ ರಕ್ತಸ್ರಾವ ಕೇವಲ ಹೆರಿಗೆಯ ಸಮಯದಲ್ಲಿ ಮಾತ್ರವಲ್ಲ, ಹೆರಿಗೆಯ ಬಳಿಕವೂ ರಕ್ತಸ್ರಾವ ಕೆಲದಿನಗಳವರೆಗೆ ಮುಂದುವರೆಯುತ್ತದೆ. ಆದರೆ ಈ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಹೋಗಬೇಕು. ಕೆಲವು ವಾರಗಳ ಬಳಿಕ ರಕ್ತಸ್ರಾವ ನಿಂತಂತೆ ಅನ್ನಿಸಿದರೂ ಒಳಗೇ ಕಡಿಮೆ ಪ್ರಮಾಣದಲ್ಲಿ ಸ್ರವಿಸಿದ್ದು ಗಾಳಿಯ ಸಂಪರ್ಕ ಪಡೆದೊಡನೇ ಹೆಪ್ಪುಗಟ್ಟಿದ್ದು ಈ ಸ್ಥಿತಿಯಲ್ಲಿಯೇ ಹೊರಬರುತ್ತದೆ. ಈ ಸ್ಥಿತಿ ಇದ್ದರೆ ಮಾತ್ರ ಸ್ತ್ರೀರೋಗ ವೈದ್ಯರಲ್ಲಿ ತಪಾಸಣೆಗೊಳಗಾಗುವುದು ಅಗತ್ಯ. ಇದು ಒಳಗೆ ಹಾಕಿರುವ ಹೊಲಿಗೆಗಳು ಕೂಡಿಕೊಂಡಿರದೇ ಇರುವ ಸೂಚನೆಯಾಗಿರಬಹುದು.

ಕಾಲು, ಕೆಳಹೊಟ್ಟೆಯಲ್ಲಿ ಊತ:
ಹೆರಿಗೆಯ ಬಳಿಕ ಕೆಳಹೊಟ್ಟೆ, ಜನನಾಂಗ, ಕಾಲುಗಳು ಮತ್ತು ಪಾದಗಳು ಊದಿಕೊಳ್ಳುತ್ತವೆ. ಸ್ಥಳೀಯವಾಗಿ ಇದಕ್ಕೆ ಬಾಣಂತಿಯ ದೇಹದಲ್ಲಿ ನೀರು ತುಂಬಿ ಕೊಂಡಿದೆ ಎನ್ನುತ್ತಾರೆ. ಇದು ಅತ್ಯಂತ ಸ್ವಾಭಾವಿಕವಾಗಿದ್ದು ಯಾವುದೇ ಆತಂಕಕ್ಕೆ ಕಾರಣವಿಲ್ಲ. ಆದರೆ ಒಂದು ವೇಳೆ ಈ ಊತ ಅತಿಹೆಚ್ಚಾಗಿದ್ದು ಕಡಿಮೆ ಯಾಗುವಂತೆ ಕಾಣದೇ ಇದ್ದಲ್ಲಿ ಮಾತ್ರ ವೈದ್ಯರ ಸಲಹೆ ಪಡೆಯುವುದು ಅಗತ್ಯವಾಗಿದೆ.

Comments are closed.