ಕರಾವಳಿ

ಮನಸ್ಸು ಹಾಗೂ ಅತ್ಮ ಇವುಗಳ ನಡುವಿನ ನಿಜವಾದ ಅರ್ಥ ಬಲ್ಲಿರಾ..!

Pinterest LinkedIn Tumblr


ಪ್ರಪಂಚದಲ್ಲಿರುವ ಮನುಷ್ಯರು ನನ್ನನ್ನು ಸೇರಿ ಎಲ್ಲರು ಮಾತನಾಡುವಾಗ ನನ್ನ ಮನಸ್ಸಿನಂತೆ ನಡೆಯುತ್ತೇನೆ. ಆತ್ಮಕ್ಕೆ ದ್ರೋಹವನ್ನು ಬಗೆಯುವುದಿಲ್ಲವೆನ್ನುತ್ತೇವೆ. ನಿಜವನ್ನು ಹೇಳಬೇಕೆಂದರೇ, ಮನುಷ್ಯನ ದೇಹದಲ್ಲಿ ಆತ್ಮವೆಂಬುದು ಏಲ್ಲಿಯು………… ಇಲ್ಲವೆಯಿಲ್ಲ. ಮನಸ್ಸು ಎಂಬುದು ಏನೂ………. ಇಲ್ಲವೇಯಿಲ್ಲ. ಮನಸ್ಸು ಎಂಬುದು ನಮ್ಮ ಮೆದುಳು ಮಾಡುವ ಕಾರ್ಯ ಯೋಚನೆ ಮತ್ತು ಅದು ಕೊಡುವ ಉತ್ತರವೇ ಆಗಿರುತ್ತದೆ. ಮನಸ್ಸು ಎಂಬುದು ಬೇರೆಯಾವುದು ಆಗಿರದೇ ತಮ್ಮತಮ್ಮ ಮೆದುಳೆ ಆಗಿರುತ್ತದೆ.

ಮನುಷ್ಯನ ಮೆದುಳು ಯಾವಾಗಲು ಎರಡು ಅಥವಾ ಹೆಚ್ಚು ಬೇರೆ ಬೇರೆದಿಕ್ಕಿನಲ್ಲಿ ಯೋಚಿಸುತ್ತದೆ. ಆ ವ್ಯಕ್ತಿಗೆ ಜ್ಞಾನಕ್ಕೆ ಅರಿವಿಗೆ ತಕ್ಕಂಥೆ ಸರಿಯಾದ ಉತ್ತರವನ್ನು ಕೊಡುತ್ತದೆ. ಅದು ಸರಿಯಾಗಿಯು ಕೆಲವು ವೇಳೆ ಆ ತಪ್ಪಾದ ವ್ಯಕ್ತಿಯಂತೆ ತಪ್ಪಾಗಿಯು ಉತ್ತರಿಸುತ್ತದೆ. ಆತನು ತಪ್ಪಾದ ಮಾಹಿತಿಯಲ್ಲಿ ತಪ್ಪಾದ ದಾರಿಯಲ್ಲಿ ಹೋದಾಗ ಆತನು ತಪ್ಪಾಗಲಾರನೇ ಆಗುತ್ತನೆ. ಕೆಲವು ದೌರ್ಜನ್ಯ ದುಃಖ ಹಿಂಸೆ ಶಿಕ್ಷೆ ನೋವುಗಳಿಗೆ ಹೊಣೆಗಾರನಾಗುತ್ತಾನೆ.

ಮೆದುಳು ಯಾವಾಗಲೂ ಸ್ವತಂತ್ರವಾಗಿ ಯೋಚಿಸುವ ಒಂದು ಅಂಗ. ಅದೇ ಎಲ್ಲಾ ಜೀವಿಗಳ ಸಾರ್ವಭೌಮವೆಂದರೇ ತಪ್ಪಾಗಲಾರದು ಅದು ತನ್ನ ತೀರ್ಮಾನದಂತೆಯೇ ಈ ದೇಹವನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಂಡಿರುತ್ತದೆ. ಉದಾಹರಣೆಗೇ, ಒಂದು ಸಣ್ಣ ಸೊಳ್ಳೆ ನಿಮ್ಮ ಮುಖದ ಮುಂದೇ ಹಾರಾಡುತ್ತಿದೆ ಎಂದರೇ, ಮೆದುಳು ಈ ದೇಹದಲ್ಲಿರುವ ತನ್ನ ಕೈಗೆ ಈ ಸೊಳ್ಳೆ ಇಷ್ಟೆ ದಪ್ಪವಾಗಿದೆ ಎಷ್ಟು ವೇಗದಲ್ಲಿದೆ ನಿನ್ನ ಎರಡು ಕೈಗಳು ಇಷ್ಟೆ ವೇಗದಲ್ಲಿ ಬಲದಿಂದ ಎಡಕ್ಕೆ ಇಷ್ಟೆ ಬಲವನ್ನು ಉಪಯೋಗಿಸಿದಲ್ಲಿ ಹೋಡೆಯಬಹುದೆಂದು ಹೇಳಿ ಆ ಸೊಳ್ಳೆಯನ್ನು ಹೊಡೆದು ಹಾಕುತ್ತದೆ. ಇಷ್ಟು ಒಂದೇ ಕ್ಷಣದಲ್ಲಿಯೇ ನಡೆದಿರುತ್ತದೆ.

ಮೆದುಳಿನ ಕಾರ್ಯವೈಖರಿಯನ್ನು ಅದರ ಕಾರ್ಯವನ್ನು ಯಾವ ಮಾಸ್ಟರ್ ಕಂಪ್ಯೂಟರ್ ಗೂ ಯಾವ ಮೆಷನರಿಗೂ ಯಾವುದೇ ಅಂಗಗಳಿಗೆ ಹೊಲಿಸಲಾಗುವುದಿಲ್ಲ.
ನಮ್ಮ ಮೆದುಳಿಗೂ ಇದರಲ್ಲಿ ಯಾವ ನಮ್ಮದೇವರು ದಿಂಡರು ಹಿರಿಯರ ಕೈವಾಡವಿರುವುದಿಲ್ಲ. ನಾವು ದೇವರು ನಡೆಸಿದಂತೆ ನಾವು ನಡೆಯುತ್ತಿದ್ದೇವೆ ಎಂಬುದು ಬರೀ ಭ್ರಾಂತಿ. ನಮ್ಮ ದೇವರುಗಳಿಗೆ ತಮ್ಮ ಮೆದುಳು ಕೆಲಸಮಾಡದೇ ಬುದ್ಧಿಯಿಲ್ಲದೆಲೇ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡ ಕಥೆಗಳಿಗೇನು ಭರತದಲ್ಲಿ ಕೊರೆತೆಯಿಲ್ಲ. ಇದು ನಮ್ಮ ಮೂಢನಂಬಿಕೆಯ ಕಥಾ ವಸ್ತುವಾಗಿರುತ್ತದೆ.

ಮೆದುಳು ಬಗ್ಗೆ ಬರೆಯಲು ಈ ಕಾಲವು ಜ್ಞಾನವು ಸಾಲದು ಸಾಲದೆಂದೇ ಹೇಳಬೇಕಿದೆ. ಅದು ದೊಡ್ದ ಯಂತ್ರ ಅದನ್ನು ಪ್ರಪಂಚದ ಅತೀ ಬುದ್ಧಿವಂತ ಮನುಷ್ಯನೆಂಬುವನು ಮನುಷ್ಯನು ಅತೀ ಸ್ವಲ್ಪ ಭಾಗವನ್ನೇ ಉಪಯೋಗಿಸಿದ್ದಾನೆ ಎಂದರೇ ನಾವು ಈಗ್ಗೆ ನಾವು ಕೊಟ್ಟಿರುವ ಕೆಲಸವೇ ಬಹು ಕಡಿಮೆಯೇ ಸರೀ. 90  ಭಾಗವನ್ನು ನಾವು ಉಪಯೋಗಿಸಿಯೇಯಿಲ್ಲವೆನ್ನುವುದು ಸರಿಯಿಲ್ಲಿ.

ಆತ್ಮ ವೆಂದರೇ, ಅತ್ಮವೆಂಬುದು ಮೆದುಳು ಎಂಬ ಬುದ್ಧಿಯೆಂಬ (ಮನಸ್ಸಿನ) ಇನ್ನೊಂದು ಮುಖ ಅದಕ್ಕೆ ಆದ ಸ್ವಂತ ಮುಖವಿಲ್ಲ. ನಾವೂ ಕಾಲ ಕಾಲದಿಂದಲೂ ಈ ಹಿರಿಯರು ಹೇಳಿದ ಪದವನ್ನು ಬಳಿಸಿ ಪಳಗಿಕೊಂಡಿದ್ದೇವೆ. ಆತ್ಮವು ಹುಟ್ಟಿಯೇ……..ಯಿಲ್ಲ ಅದು ಹುಟ್ಟಿದರೇ ತಾನೇ ಅದು ಸಾಯಲಿಕ್ಕೆ ಅದು ಸಾಯುವುದು ಇಲ್ಲ. ಕಪೋಲ ಕಲ್ಪಿತ ಒಂದು ಪದ ಹೆಸರು.

ಎಲ್ಲರು ತಮ್ಮ ತಮ್ಮ ಎದೆಯನ್ನು ಮುಟ್ಟಿ ನಾನು ಆತ್ಮಸಾಕ್ಷಿಯಾಗಿ ಹೇಳುತ್ತೇನೆ ಎನ್ನುತ್ತಾರೆ. ಹೃದಯಕ್ಕೂ ಆತ್ಮಕ್ಕೂ ಸಂಭಂದವಿಲ್ಲ. ಹೃದಯವು ಒಂದು ರಕ್ತವನ್ನು ದೇಹದ ಎಲ್ಲಾ ಭಾಗಗಳಿಗೂ ಪಂಪುಮಾಡುವ ಯಂತ್ರ ಅದು ಕೆಟ್ಟು ನಿಂತು ಹೋದರೇ, ರಕ್ತ ಚಾಲನೆಯಿಲ್ಲದೆಲೇ ಶರೀರದಲ್ಲಿ ರಕ್ತವು ಹೆಪ್ಪುಗಟ್ಟಿ ಸಾಯುತ್ತಾನೆ. ಅದಕ್ಕೆ ಆದ ಯಾವುದೇ ನಿರ್ಧಾರ ತೆಗೆದು ಕೊಳ್ಳುವ ಶಕ್ತಿ ಯಾವುದು ಇಲ್ಲ. ಅದು ಬರೀ ಒಂದು ಯಂತ್ರ. ಕೆಲವರು ಪ್ರೀತಿಯನ್ನು ಸೂಚಿಸಲು ಹೃದಯವನ್ನು ಚಿತ್ರಿಸಿ ತೋರುತ್ತಾರೆ. ಆದರೇ ಹೃದಯಕ್ಕೂ ಪ್ರೀತಿಗೂ ಯಾವ ಸಂಭಂದವು ಇಲ್ಲ ಪಾಪ ಅದು ಏನೂ ಅರಿಯದ ಯಂತ್ರವೇ. ಪ್ರೀತಿಯೆಂಬುದು ಪ್ರೀತಿಯದು ಮೆದುಳಿನ ಕಾರ್ಯವಾದ ಬುದ್ಧಿಗೆ ಸಂಭಂದಿಸಿದ್ದಾಗಿರುತ್ತದೆ.

ಹೀಗೆಯೇ ನಾವು ತಪ್ಪು ತಪ್ಪು ಮಾಹಿತಿಯೊಂದಿಗೆ ಬಾಳುತ್ತಿದ್ದೇವೆ ನಿಜವಲ್ಲವೇ……….ಸರಿಯಿದ್ದಲ್ಲಿ ನೀವು ಸರಿ ಎನ್ನಬಹುದಲ್ಲವೇ…………?

Comments are closed.