ಕರಾವಳಿ

ರೈಲಿನಲ್ಲಿ ಡಿಸೇಲ್ ಸಾಗಾಟ; ರೈಲ್ವೇ ಪ್ರೊಟೆಕ್ಷನ್ ಪೋರ್ಸ್ ಅಧಿಕಾರಿಗಳಿಂದ ಓರ್ವನ ಬಂಧನ

Pinterest LinkedIn Tumblr

ಉಡುಪಿ: ರೈಲ್ವೇ ಪ್ರೊಟೆಕ್ಷನ್ ಪೋರ್ಸ್ ಅಧಿಕಾರಿಗಳು ಫೆಬ್ರವರಿ 6 ರಂದು ಗಸ್ತು ತಿರುಗುತ್ತಿದ್ದ ವೇಳೆ ಭಟ್ಕಳದಿಂದ ಉಡುಪಿಗೆ ಡೀಸೆಲ್ ಕೊಂಡು ಹೋಗುತ್ತಿದ್ದ ವ್ಯಕ್ತಿ ಯೊಬ್ಬನನ್ನು ಬಂಧಿಸಿದ್ದಾರೆ. ರೈಲ್ವೆ ನಿಯಮಗಳ ಪ್ರಕಾರ ರೈಲಿನಲ್ಲಿ ಡೀಸೆಲ್ನಂತಹ ಅಪಾಯಕಾರಿ ವಸ್ತುಗಳನ್ನು ಕೊಂಡು ಹೋಗುವುದು ಶಿಕ್ಷಾರ್ಹವಾಗಿದ್ದು, ವ್ಯಕ್ತಿಯನ್ನು ಬಂಧಿಸಿ, ಜಿಲ್ಲಾ ಸತ್ರ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.

ರೈಲ್ವೆ ನಿಯಮಗಳ ಪ್ರಕಾರ ಪ್ಯಾಸೆಂಜರ್ ರೈಲಿನಲ್ಲಿ ಡೀಸೆಲ್ನಂತಹ ಅಪಾಯಕಾರಿ ವಸ್ತುಗಳನ್ನು ಕೊಂಡು ಹೋಗುವುದು ಅಪಾಯಕಾರಿ ಹಾಗೂ ಶಿಕ್ಷಾರ್ಹವಾಗಿದ್ದು, ಇದರಿಂದ ಪ್ರಯಾಣಿಕರಿಗೂ ತೊಂದರೆ ಆಗುವ ಸಾಧ್ಯತೆ ಇದೆ. ಆದ್ದರಿಂದ ಇಂತಹ ಅಪಾಯಕಾರಿ ವಸ್ತುಗಳನ್ನು ಪ್ಯಾಸೆಂಜರ್ ರೈಲಿನಲ್ಲಿ ಕೊಂಡು ಹೋಗದಂತೆ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.

Comments are closed.