ಕರಾವಳಿ

IVF ಬಗ್ಗೆಗಿನ ತಪ್ಪು ಕಲ್ಪನೆ ನಿವಾರಣೆಗೆ ಒಂದು ಪ್ರಯತ್ನ

Pinterest LinkedIn Tumblr

ಸಾಮಾನ್ಯವಾಗಿ ಲೋಕದಲ್ಲಿ ಮಕ್ಕಳಿಲ್ಲದೇ ನೋವು ಅನುಭವಿಸುವ ಹಲವು ದಂಪತಿಗಳನ್ನು ನಾವು ಕಂಡಿರಾ ಬಹುದು. ಅದಕ್ಕಾಗಿ ಈ ನೋವುಗಳ ನಿವಾರಿಸಲು IVF(In vitro fertilization) ನ ಮುಂಖಾತರ ಅಂಡಾಣುವನ್ನು ದಾನವಾಗಿ ಪಡೆದು ಒಬ್ಬ ಸಂತಾನರಹಿತ ಮಹಿಳೆಯು ಗರ್ಭಧರಿಸಬಹುದು ಮತ್ತು ಮಗುವಿಗೆ ಜನ್ಮ ನೀಡಬಹುದು. ಎಂಬುದು ನಿಮಗೆ ಗೋತ್ತೆ..?ಅದರೆ IVF ಅಂದರೆ ಏನು ಎಂಬುದು ಹಾಗೂ ಅದರೆ ವಿಶೇಷತೆ ಬಗ್ಗೆ ನೋಡೋಣ ಬನ್ನಿ…!

IVF ನ ಕೆಲವು ವಿಶೇಷ ಮಾಹಿತಿಗಳು:
ಎಲ್ಲಾ ರೀತಿಯ ಬಂಜೆತನದ ಸಮಸ್ಯೆಗಳಿಗೆ IVFಒಂದೇ ಪರಿಹಾರ. ಎನ್ನುವುದು ತಪ್ಪು ಕಲ್ಪನೆ. IVF ಅನ್ನುವುದು ಬಂಜೆತನಕ್ಕೆ ಇರುವ ಒಂದು ಚಿಕಿತ್ಸಾ ಆಯ್ಕೆ ಅಷ್ಟೆ. ಇಲ್ಲಿ ಔಷಧೋಪಚಾರದ ಜತೆಗೆ ಮಾಡುವ ಓವುಲೇಶನ್ ಇಂಡಕ್ಷನ್, ಇಂಟ್ರಾ ಯುಟೆರೈನ್ ಇನ್ ಸೆಮೈನೇಷನ್ ಇತ್ಯಾದಿ ಇನ್ನಿತರ ಚಿಕಿತ್ಸೆಗಳೂ ಸಹ ಇವೆ. ಕೆಲವು ಬಾರಿ ನಾಳಗಳಲ್ಲಿ ಎರಡು ಬದಿಗಳಲ್ಲಿ ಅಡ್ಡಿ ಹೊಂದಿರುವ ಮಹಿಳೆಯರು, ತೀವ್ರ ಬಂಜೆತನದ ಸಮಸ್ಯೆ ಇರುವ ಪುರುಷರು ಮತ್ತು ಹೆಚ್ಚು ವಯಸ್ಸಾಗಿರುವ ದಂಪತಿಗಳಿಗೆ ಇದು ಮೊದಲ ಚಿಕಿತ್ಸಾ ಆಯ್ಕೆ ಆಗಿರಬಹುದು. IVF ಅಂದರೆ ಅದು ಕೇವಲ ಶ್ರೀಮಂತರು ಮಾತ್ರ ಪಡೆಯಬಹುದಾದ ಚಿಕಿತ್ಸೆ ಮಾತ್ರ ಅಲ್ಲ ಇದು ಮಕ್ಕಳಿಲ್ಲ ಯಾವುದೇ ದಂಪತಿಗಳು ಇದರ ಪ್ರಯೋಜನ ಪಡೆಯಬಹುದು. ಈ ಚಿಕಿತ್ಸೆಯು ದುಬಾರಿ ಆಗಿದ್ದರೂ ಸಹ ಇತ್ತೀಚಿನ ಕೆಲವು ವರ್ಷಗಳಲ್ಲಿ ಇದರ ವೆಚ್ಚವು ವಿಶೇಷವಾಗಿ ಹೆಚ್ಚಾಗಿಲ್ಲ. ಹೃದಯದ ಶಸ್ತ್ರಚಿಕಿತ್ಸೆ ಅಥವಾ ಮಂಡಿ ಜೋಡಣೆಯಂತಹ ಇನ್ನಿತರ ರೀತಿಯ ಶಸ್ತ್ರಚಿಕಿತ್ಸೆಗಳಿಗೆ ಹೋಲಿಸಿದರೆ IVF ವೆಚ್ಚ ಕಡಿಮೆ ಎಂದು ಹೇಳಬಹುದು.

ಕೆಲವು ಶೈಕ್ಷಣಿಕ ಸಂಸ್ಥೆಗಳು ಅಥವಾ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿರುವ ಬಂಜೆತನ ನಿವಾರಣಾ ಕ್ಲಿನಿಕ್ಗಳು ಕಡಿಮೆ ವೆಚ್ಚದಲ್ಲಿ ಚಿಕಿತ್ಸೆಯನ್ನು ಒದಗಿಸುತ್ತವೆ.

IVF ಅಂದರೆ ಅದು ಬಂಜೆತನದ ಸಮಸ್ಯೆ ಇರುವ ಯುವ ದಂಪತಿಗಳಿಗೆ ಮಾತ್ರ ಸೀಮಿತವಾಗಿರದೇ, ವಯಸ್ಸಾದ ಮಹಿಳೆಯರಿಗೆ ಮತ್ತು ಋತುಬಂಧ ಆಗಿರುವವರಿಗೂ ಸಹ IVF ತಂತ್ರಜ್ಞಾನವನ್ನು ಬಳಸಬಹುದು. ಇಂತಹ ಪ್ರಕರಣಗಳಲ್ಲಿ ಗರ್ಭಧಾರಣೆಯನ್ನು ಸಾಧಿಸಲಿಕ್ಕಾಗಿ ತರುಣ ಮಹಿಳೆಯಿಂದ ಪಡೆದ ಅಂಡಾಣುವನ್ನು ಫಲೀಕರಣ ಪ್ರಕ್ರಿಯೆಯಲ್ಲಿ ಬಳಸಲಾಗುತ್ತದೆ. ಇದಕ್ಕಾಗಿ ಆಸ್ಪತ್ರೆಯಲ್ಲಿ ನಿಲ್ಲಬೇಕಾಗಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಹೊರ ರೋಗಿಯ ನೆಲೆಯಲ್ಲಿಯೇ ಈ ಚಿಕಿತ್ಸೆಯನ್ನು ಪಡೆಯಬಹುದು. ಚಿಕಿತ್ಸೆಯ ಸರಾಸರಿ ಅವಧಿ ಸುಮಾರು 3 ವಾರಗಳು. ಅಂಡವನ್ನು-ಸಂಗ್ರಹಿಸುವ ಸಂದರ್ಭದಲ್ಲಿ, ಡೇ-ಕೇರ್ ಸೌಲಭ್ಯದಲ್ಲಿ ಒಂದು ಸಣ್ಣ ಅರಿವಳಿಕೆಯನ್ನು ನೀಡಬೇಕಾಗುತ್ತದೆ. ಕೆಲವು ಕ್ಲಿನಿಕ್ಗಳಲ್ಲಿ ಭ್ರೂಣವನ್ನು ವರ್ಗಾಯಿಸಿದ ನಂತರ 1-2 ದಿನ ಆಸ್ಪತ್ರೆಯಲ್ಲಿಯೇ ನಿಲ್ಲುವಂತೆ ಸೂಚಿಸುತ್ತಾರೆ.

IVF ಪ್ರಕ್ರಿಯೆಯ ಮೂಲಕ ಆದ ಗರ್ಭಧಾರಣೆಯಲ್ಲಿ ಯಾವಾಗಲೂ ಅವಳಿ ಅಥವಾ ತ್ರಿವಳಿ ಮಕ್ಕಳೆ ಹುಟ್ಟುತ್ತವೆ.ಎಂಬುವುದು ಹಲವರ ತಪ್ಪು ಕಲ್ಪನೆ,ವಾಸ್ತವವೆನೆಂದರೆ ಯುವ ಮಹಿಳೆಯರಲ್ಲಿ ಗರ್ಭಾಶಯಕ್ಕೆ ವರ್ಗಾಯಿಸುವ ಭ್ರೂಣಗಳ ಸಂಖ್ಯೆಯನ್ನು ತಗ್ಗಿಸಿಕೊಳ್ಳುವ ಮೂಲಕ ಬಹು-ಗರ್ಭಧಾರಣೆ ಆಗುವುದನ್ನು ತಪ್ಪಿಸಿಕೊಳ್ಳಬಹುದು. ಕೇವಲ ಒಂದೇ ಒಂದು ಉತ್ತಮ ಭ್ರೂಣವನ್ನು ವರ್ಗಾಯಿಸುವ ಆಧುನಿಕ ತಂತ್ರಜ್ಞಾನ ಪ್ರಸ್ತುತ ಲಭ್ಯ ಇದ್ದು, ಇದು ಬಹು-ಗರ್ಭಧಾರಣೆ ಆಗುವುದನ್ನು ತಡೆಯುತ್ತದೆ.

IVF ಚಿಕಿತ್ಸೆಯ ಮೂಲಕ ಹುಟ್ಟಿದ ಶಿಶುಗಳಲ್ಲಿ ಜನ್ಮಜಾತ ತೊಂದರೆಗಳು ಮತ್ತು ಅಂಗವಿಕಲತೆ ಇರುವ ಅಪಾಯ ಸಾಧ್ಯತೆ ಹೆಚ್ಚು ಇರುತ್ತದೆ.ಎನ್ನುವುದು ಸರಿ ಅಲ್ಲ, ನೈಸರ್ಗಿಕ ಗರ್ಭಧಾರಣೆಯ ಪ್ರಕರಣಗಳಿಗೆ ಹೋಲಿಸಿದರೆ IVF ಚಿಕಿತ್ಸೆಯ ಮೂಲಕ ಹುಟ್ಟಿದ ಶಿಶುಗಳಲ್ಲಿ ಅಂಗವಿಕಲತೆ ಅಥವಾ ನ್ಯೂನತೆಗಳ ಪ್ರಮಾಣ ಹೆಚ್ಚೇನಿಲ್ಲ ಎಂಬುದಾಗಿ ಅಧ್ಯಯನಗಳು ಹೇಳುತ್ತವೆ. ಆದರೆ ಈ ಬಗ್ಗೆ ಯಾವುದೇ ತೀರ್ಮಾನಕ್ಕೆ ಬರಲು ಇದುವರೆಗೆ ದೊರೆತಿರುವ ಫಲಿತಾಂಶಗಳ ಆಧಾರಗಳಷ್ಟೇ ಸಾಲದು.

IVF ಚಿಕಿತ್ಸೆಯಲ್ಲಿ ಯಾವುದೇ ಅಪಾಯಕಾರಿ ಅಂಶ ಇಲ್ಲ, ಖಂಡಿತವಾಗಿಯೂ ಇದು ಸುರಕ್ಷಿತ ಚಿಕಿತ್ಸೆ. ತೀವ್ರ ಹೈಪರ್ ಸ್ಟಿಮ್ಯುಲೇಷನ್ ರೋಗಸ್ಥಿತಿ ಇರುವ ಕೇವಲ 1-3% ರೋಗಿಗಳಲ್ಲಿ ಮಾತ್ರವೇ ಇದು ಅಸ್ವಸ್ಥತೆಯನ್ನು ಉಂಟು ಮಾಡಬಹುದು. ಸೂಕ್ಷ್ಮ ನಿಗಾ ವಹಿಸುವಿಕೆಯ ಮೂಲಕ ಈ ಪರಿಸ್ಥಿತಿಯನ್ನು ಸಹ ಕಡಿಮೆ ಮಾಡಿಕೊಳ್ಳಬಹುದು.

IVFನಲ್ಲಿ, ಚಿಕಿತ್ಸೆಗಾಗಿ ಬೇರೆ ಯಾರೋ ವ್ಯಕ್ತಿಗಳ ವೀರ್ಯಾಣು ಮತ್ತು ಅಂಡಾಣುಗಳನ್ನು ಬಳಸಲಾಗುವುದಿಲ್ಲ, ಚಿಕಿತ್ಸೆಗೆ ಒಳಗಾಗುವ ದಂಪತಿಗಳದ್ದೇ ವೀರ್ಯಾಣು ಮತ್ತು ಅಂಡಾಣುಗಳನ್ನು ಬಳಸಲಾಗುತ್ತದೆ. ಒಂದು ವೇಳೆ ಆರೋಗ್ಯ ಅಥವಾ ವೈದ್ಯಕೀಯ ಕಾರಣಗಳಿಂದಾಗಿ ವೀರ್ಯಾಣು ಅಥವಾ ಅಂಡಾಣುಗಳು ಸಿಗದೆ ಇರುವ ಸಂದರ್ಭದಲ್ಲಿ, ದಾನವಾಗಿ ಪಡೆದ ವೀರ್ಯಾಣುಗಳನ್ನು ಬಳಸಬಹುದೇ ಎಂಬ ಬಗ್ಗೆ ವೈದ್ಯರು ದಂಪತಿಗಳ ಜತೆಗೆ ಬಹಳ ಮೊದಲೆ ಚರ್ಚಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಚಿಕಿತ್ಸೆಗೆ ಒಳಪಡುವ ಪತಿ ಮತ್ತು ಪತ್ನಿ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ ಅನಂತರವೇ ದಾನವಾಗಿ ಪಡೆದ ವೀರ್ಯಾಣುಗಳನ್ನು ಚಿಕಿತ್ಸೆಗಾಗಿ ಬಳಸುತ್ತಾರೆ.

IVF ಚಿಕಿತ್ಸೆಯನ್ನು ಪಡೆದವರು ಗರ್ಭಧಾರಣೆಯ ಅವಧಿಯ ಉದ್ದಕ್ಕೂ ಬೆಡ್-ರೆಸ್ಟ್ ನಲ್ಲಿ ಇರಬೇಕಾಗ ಪರಿಸ್ಥಿ ಇರುವುದಿಲ್ಲ, ಒಂದು ಬಾರಿ ಭ್ರೂಣವು ಗರ್ಭಾಶಯದಲ್ಲಿ ಬೇರೂರಿದ ಅನಂತರ, ಇದು ನೈಸರ್ಗಿಕ ಗರ್ಭಧಾರಣೆಯಂತೆಯೇ ಸಾಗುತ್ತದೆ ಮತ್ತು ಮಹಿಳೆಯು ತನ್ನ ದಿನನಿತ್ಯದ ಕೆಲಸವನ್ನು ಮಾಡಬಹುದಾಗಿರುತ್ತದೆ. ಆದರೆ, ಗರ್ಭದ ಸ್ಥಿತಿ-ಗತಿಯನ್ನು ನಿಯಮಿತವಾಗಿ ಮತ್ತು ಜಾಗರೂಕತೆಯಿಂದ ಗಮನಿಸುತ್ತಿರಬೇಕಾಗುವುದು.

IVF ಚಿಕಿತ್ಸೆಯ ವೇಳೆ ಇತರ ರೋಗಿಗಳ ಭ್ರೂಣಗಳು ಅದಲು ಬದಲು ಅಗಬಹುದು ಎನ್ನುವ ಸಂಶಯ ಹಲವು ಜನರದ್ದು, ಇಲ್ಲ, ಇಂತಹ ಘಟನೆಗಳು ನಡೆಯದಂತೆ IVF ಸೆಂಟರ್‌ಗಳು ವಿಶೇಷ ಮುನ್ನೆಚ್ಚರಿಕೆಯನ್ನು ವಹಿಸುತ್ತವೆ. ರೋಗಿಯ ವೀರ್ಯಾಣು, ಅಂಡಾಣು ಮತ್ತು ಭ್ರೂಣಾಂಕುರಗಳನ್ನು ಚಿಕಿತ್ಸೆಯ ವಿವಿಧ ಹಂತಗಳಲ್ಲಿ ಗುರುತಿಸುತ್ತಿರುತ್ತಾರೆ. ಅದಲು-ಬದಲು ಆಗುವುದನ್ನು ತಡೆಯುವುದಕ್ಕಾಗಿ ಸೆಂಟರ್‌ಗಳು ವಿಶೇಷ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿರುತ್ತಾರೆ.

Comments are closed.