ಕರಾವಳಿ

ಹಾಲುಗಲ್ಲದ ಪುಟಾಣಿಗಳ ರಂಗ ಪ್ರವೇಶ: ಮರವಂತೆಯಲ್ಲಿ ಬಾಲ ಯಕ್ಷ ಪ್ರತಿಭೆಗಳ ಅನಾವರಣ

Pinterest LinkedIn Tumblr

ಕುಂದಾಪುರ: ಮೊರೆತು ನಿಲುವೆ ಏಕ ಮಾವ ಅಳಿಯನಲ್ಲವೇ.. ಉರಿವುದೊಂದೇ ದೀಪವಾದರೂ .. ಎರಡಾಗುತ..ಮೂರಾಗುತ..ಕರೆಸಿ ಕೊಲುವೆ ಏಕೆ ಮಾವ ಅಳಿಯನಲ್ಲವೇ ಎಂಬ ಪದ್ಯಗಳಿಗೆ ಹಾಲುಗಲ್ಲದ ಮಕ್ಕಳ ನೃತ್ಯಾಭಿನಯಕ್ಕೆ ತಲೆ ದೂಗದವರಿಲ್ಲ.. ಕಂಡೆನೊಂದು ಕನಸಿನ ಪದ್ಯಕ್ಕೆ ಕಂಸ ವೇಷದಾರಿ‌ಅಭಿನಯ ಅಲ್ಲಲ್ಲಿ ಚಿಟ್ಟಾಣಿ ನೆನಪು ಮೂಡಿಸಿದ್ದು ಸುಳ್ಳಲ್ಲ..

ಧೂರ್ವಾಸ ಮುನಿಯ ಶಾಪಕ್ಕೆ ಒಳಗಾಗುವ ಗಂಧರ್ವನ ಪಾತ್ರ ನಿರ್ವಹಸಿದ ಪುಣಾಣಿ ಬಾಲಕಿಯ ನೃತ್ಯ ಕೌಶಲ್ಯ ತರಬೇತುದಾರರ ಪರಿಶ್ರಮಕ್ಕೆ ಸಿಕ್ಕಫಲ. ರಾಜಾರಜಕ, ಆಸ್ತಿ ಪಾಸ್ತಿ ಹೀಗೆ ಪತ್ರಗಳಲ್ಲಿ ಕಾಣಿಸಿಕೊಂಡವರೆಲ್ಲಾ.. ನಾಲ್ಕನೇ ತರಗತಿ ಒಳಗಿನ ಮಕ್ಕಳು..! ಗಂಡು ಮತ್ತು ಹೆಣ್ಣು ಮಕ್ಕಳು ಒಟ್ಟಾಗಿ ರಂಗದಲ್ಲಿ ಮೂರುಗಂಟೆ ಕಾಲ ವೀಕ್ಷಕರ ಸೆರಿಹಿಡಿದು ಕೂರಿಸಿದ ಮಕ್ಕಳ ಯಕ್ಷಗಾನ ಕಸರತ್ತು.. ಯಕ್ಷಗಾನಕ್ಕೆ ಉಳಿಗಾಲವಿಲ್ಲ ಎಂದು ಬೊಬ್ಬೆಯಿಡುವವರಿಗೆ ಉತ್ತರವೂ ಹೌದು, 30ಕ್ಕೂ ಮಿಕ್ಕ ಮಕ್ಕಳ ಸಿದ್ದ ಪಡಿಸಿ, ಮಕ್ಕಳ ರಂಗದಲ್ಲಿ ತರುವ ಕೆಲಸ ಸುಲಭ ಸಾಧ್ಯವೂ ಅಲ್ಲ. ಎಲ್ಲವೂ ಸಾಧ್ಯವಾಗಿದ್ದು ಮರವಂತೆ ಶ್ರೀ ದುರ್ಗಾಪರಮೇಶ್ವರಿ ಜಾತ್ರೆ ಸಂದರ್ಭ. ಮಕ್ಕಳ ಯಕ್ಷಾಗನ ಪ್ರತಿಭೆಕಂಡು ಬೋಳಂಬಳ್ಳಿ ಯಕ್ಷಪ್ರೇಮಿ ನಮ್ಮೂರಿಗೆ ಬಂದು ಯಕ್ಷಗಾನ ಪ್ರದರ್ಶನ ನೀಡವಂತೆ ಆಹ್ವಾನಿಸಿದ್ದು ಮಕ್ಕಳ ಪ್ರಯತ್ನಕ್ಕೆ ಸಿಕ್ಕ ಪ್ರಶಸ್ತಿ.

ಹಾಗಂತ ಯಕ್ಷಗಾನ ಪ್ರದರ್ಶನದಲ್ಲಿ ತಪ್ಪೇ ಇಲ್ಲಾ ಅಂತ ಅರ್ಥವಲ್ಲ. ತಪ್ಪಾಗಿದ್ದರೂ ಮಕ್ಕಳು ಎನ್ನುವ ನಿಟ್ಟಿನಲ್ಲಿ ಸ್ವೀಕಾರಾರ್ಹ. ಮರವಂತೆ ಸಾಧನಾ ಸಭಾಂಗಣದಲ್ಲಿ ಕಳೆದ ಆರೇಳು ತಿಂಗಳಿಂದ ಯಕ್ಷಗಾನ ತರಬೇತಿ ನಡಸಲಾಗುತ್ತಿತ್ತು. ಮೊದಲು ಮಕ್ಕಳಿಂದ ಯಕ್ಷಗಾನ ಪ್ರದರ್ಶನ ನೀಡುವ ಯಾವ ಉದ್ದೇಶವೂ ಇರಲಿಲ್ಲ. ತರಬೇತಿಗೆ ಸೇರಿದ ಮಕ್ಕಳಿಗೆ ಮುಂದೆ ನಾವು ರಂಗಸ್ಥಳದಲ್ಲಿ ಬರುತ್ತೇವೆ ಎನ್ನುವ ಕಲ್ಪನೆಯೂ ಇರಲಿಲ್ಲ. ಸಾಲಿಗ್ರಾಮ ಮಕ್ಕಳ ಮೇಳದ ಪ್ರಭಾವದಿಂದಮಕ್ಕಳ ಏಕ ರಂಗಕ್ಕೆ ತರಬಾರದು ಎನ್ನುವ ಯೋಜನೆಯೇ ರಂಗದಲ್ಲಿ ಮಕ್ಕಳು ಕೃಷ್ಣ ಬಲರಾಮರಾದರು, ಕಂಸನಾದ, ಆಸ್ತಿ ಮಾಸ್ತಿಯಾದರು. ರಾಜ ರಜಕನ ಮೂಲಕ ಹಾಸ್ಯದ ಹೊನಲು ಹರಿಸಿದರು.

ಮಕ್ಕಳ ರಂಗದಲ್ಲಿ ತರುವ ಹಿನ್ನೆಲೆಯಲ್ಲಿ ಹಿಂದೆ ನಿಂತವರು ಹಲವಾರು ಹಾಗೂ ಆಸರೆ ಟ್ರಸ್ಟ್. ಮರವಂತೆ ಪರಿಸರದಲ್ಲಿ ಆನಾರೋಗ್ಯ ಪೀಡಿತರಿಗೆ ಆರ್ಥಿಕವಾಗಿ ಹಿಂದುಳದವರಿಗೆ ಆಸರೆ ಆಗುತ್ತಿದ್ದ ಆಸರೆ ಟ್ರಸ್ಟ್, ಯಕ್ಷಗಾನ ಪ್ರೇಮಿ ಲಂಡನ್‌ನಲ್ಲಿದ್ದರೂ ಯಕ್ಷಗಾನಕ್ಕೆ ಮಿಡಿಯುವ ಯೋಗೀಂದ್ರ ಮರವಂತೆ, ಕರುಣಾಕರ ಹಾಗೂ ಸಮಾಜದ ಇನ್ನಿತರ ಯಕ್ಷಗಾನ ಅಭಿಮಾನಿಗಳು ಬೆನ್ನಿಗೆ ನಿಂತರು. ಮಕ್ಕಳಿಂದ ನಯಾಪೈಸೆ ಪಡೆಯದೆ, ಉಚಿತ ಯಕ್ಷಗಾನದ ಹೆಜ್ಜೆ ಕಲಿಸಿ, ಅರ್ಥಹೇಳಿಕೊಟ್ಟು ತರಬೇತಿ ನೀಡಿದ ದೇವರಾಜ್ ದಾಸ್ ದೊಡ್ಡ ಕೊಡುಗೆ ನೀಡಿದ್ದಾರೆ. ಒಟ್ಟಾರೆ ಮರವಂತೆಯಲ್ಲಿ ಮಕ್ಕಳು ರಂಗದಲ್ಲಿ ಥಕಥೈ ಎನ್ನುವ ಮೂಲಕ ಭರವಸೆ ಮೂಡಿಸಿದ್ದು, ಇದೇ ಮಕ್ಕಳ ಮುಂದಿಟ್ಟುಕೊಡು ಸಮರ್ಥ ತಂಡ ಕಟ್ಟುವ ಬಗ್ಗೆ ಕೂಡಾ ಚಿಂತನೆ ಮಾಡುವಷ್ಟು ಪ್ರಬುದ್ಧವಾಗಿ ಮಕ್ಕಳು ಅಭಿನಯಿಸಿದ್ದಾರೆ.

ಸನ್ಮಾನ…
ನಿರಂತರ ಬಾಲ ಕಲಾವಿದರಿಗೆ ಯಕ್ಷಗಾನ ತರಬೇತಿ ನೀಡಿ ಯಶಸ್ವಿಯಾಗ ರಂಗಕ್ಕೆ ತಂದ ಯಕ್ಷಗಾನ ಮನೆತನದ ಕೊಂಡಿ ದೇವರಾಜ್ ದಾಸ್ ಅವರ ಸಾರ್ವಜನಿಕ ಸನ್ಮಾನ ಮರವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಆರ್.ಕೆ.ಅಧ್ಯಕ್ಷೆಯಲ್ಲಿ ನಡೆಯಿತು.ಯುವ ಭಾಗವತ ದೇವರಾಜ್ ಸನ್ಮಾನಿಸಿ ಮಾತನಾಡಿದ ಬೋಳಂಬಳ್ಳಿ ಶ್ರೀ ಪದ್ಮಾವತಿ ದೇವಸ್ಥಾನ ಧರ್ಮದರ್ಶಿ ಧರ್ಮರಾಜ್ ಜೈನ್ ಮಾತನಾಡಿ, ಮಕ್ಕಳ ಯಕ್ಷಗಾನ ನಿಜಕ್ಕೂ ಶ್ಲಾಘನೀಯ. ರಂಗದಲ್ಲಿ ಅದ್ಬುತ ಕೆಲಸ ಮಾಡಿದ್ದಾರೆ. ಇದರಹಿಂದಿರುವ ದೇವರಾಜ್ ಪರಿಶ್ರಮ ಸಾರ್ಥಕವಾಗಿದೆ. ಈ ಮಕ್ಕಳ ಟ್ರೂಪ್ ಮುಂದಿಟ್ಟುಕೊಂಡು ಮತ್ತಷ್ಟು ಯಕ್ಷಗಾನ ಪ್ರಸಂಗ ರಂಗದಲ್ಲಿ ತರಲಿ ಎಂದು ಹೇಳಿದರು.

ನಿವೃತ್ತ ಉಪನ್ಯಾಸ ಎಸ್.ಜನಾರ್ದನ್ ಮರವಂತೆ, ನಿವೃತ್ತ ಶಿಕ್ಷಕ ಮರವಂತೆ ಶಂಕರ ಬಿಲ್ಲವ, ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಧರ್ಮದರ್ಶಿ ತಿಪ್ಪ ದೇವಾಡಿಗ, ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ದಯಾನಂದ ಬಳೆಗಾರ್, ಆಸರೆ ಸಂಸ್ಥೆಯ ಸಂತೋಷ್ ಮರವಂತೆ, ರವಿ ಮಡಿವಾಳ, ರಾಜೇಶ್ ಆಚಾರ್ಯ ಇದ್ದರು.

Comments are closed.