ಕರಾವಳಿ

ಕೋಟದಲ್ಲಿ ಇತ್ತಂಡಗಳ ನಡುವೆ ಹೊಡೆದಾಟ? ದೂರು-ಪ್ರತಿದೂರು ದಾಖಲು

Pinterest LinkedIn Tumblr

ಕುಂದಾಪುರ: ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಲಾಗಿದೆ ಎಂದು ಕೋಟದಲ್ಲಿ ದೂರು, ಪ್ರತಿದೂರು ದಾಖಲಾಗಿದೆ.

ವಡ್ಡರ್ಸೆ ಎಂ.ಜಿ. ಕಾಲನಿ ನಿವಾಸಿ ಅಕ್ಷಯ ಅವರು ಚಿಕ್ಕಪ್ಪನ ಪುತ್ರ ಶರತ್‌ ಜತೆ ಕೋಟ ಅಮೃತೇಶ್ವರಿ ದೇವಸ್ಥಾನದಲ್ಲಿ ಯಕ್ಷಗಾನ ನೋಡಿ ಮನೆಗೆ ಹಿಂದಿರುಗುವಾಗ ಶ್ರೀಕಾಂತ, ಕಿರಣ ಬಾರಿಕೆರೆ ಹಾಗೂ ಸ್ಥಳೀಯ ದೇವಸ್ಥಾನದ ಕಮಿಟಿಯ ಸದಸ್ಯರೆಂದು ಹೇಳಿಕೊಂಡ ಐದಾರು ಮಂದಿ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಅಕ್ಷಯ ಹಾಗೂ ಶರತ್‌ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕೋಟ ಕದ್ರಿಕಟ್ಟು ನಿವಾಸಿ ಸಂದೀಪ್‌ (25) ತನ್ನ ಸ್ನೇಹಿತರಾದ ಜಗನ್ನಾಥ, ಸಂದೀಪ ಪೂಜಾರಿ, ಕಿರಣ, ಶೀಲರಾಜ್‌ ಕಾಂಚನ್‌, ಶ್ರೀಕಾಂತ್‌, ಸಂತೋಷ ಪೂಜಾರಿ ಮತ್ತು ಇತರರೊಂದಿಗೆ ಕೋಟ ವರ್ಣತೀರ್ಥ ಕೆರೆಯ ಸಮೀಪ ಡೆಕೊರೇಶನ್‌ ಕೆಲಸದಲ್ಲಿದ್ದಾತ ಎಂ.ಜಿ.ಕಾಲನಿಯ ಶರತ್‌ ಹಾಗೂ ಅಕ್ಷಯ್‌ ಪಡುಕೆರೆಯ ಕಡೆಯಿಂದ ಬೈಕ್‌ನಲ್ಲಿ ಬಂದು ಸಂದೀಪ್‌ಗೆ ಢಿಕ್ಕಿ ಹೊಡೆದಿದ್ದಾರೆ. ಸಹ ಸವಾರನಾದ ಅಕ್ಷಯ ಇಳಿದು ಸಂದೀಪ್‌ಗೆ ಹಲ್ಲೆ ನಡೆಸಿ, ಕುತ್ತಿಗೆಯಲ್ಲಿದ್ದ 2 ಪವನ್‌ ತೂಕದ ಚಿನ್ನದ ಸರವನ್ನು ಕಸಿದಿದ್ದಾನೆ. ಬೈಕ್‌ ಸವಾರ ಶರತ್‌ ಸ್ಥಳದಲ್ಲಿದ್ದ ಸ್ವಜನ್‌ ಕೋಟ್ಯಾನ್‌, ಪ್ರದೀಪ ಮತ್ತಿತರರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಕೋಟ ಠಾಣೆಯಲ್ಲಿ ಈ ಬಗ್ಗೆ ದೂರು ಪ್ರತಿ ದೂರು ದಾಖಲಾಗಿವೆ.

Comments are closed.