ಕರಾವಳಿ

ವಿಷ ಹಾಗೂ ಕಲ್ಮಶವನ್ನು ಹೊರಹಾಕಿ ಜೀರ್ಣಕ್ರಿಯೆ ಉತ್ತಮವಾಗಿಸಲು ಈ ಜ್ಯೂಸ್ ಉತ್ತಮ

Pinterest LinkedIn Tumblr

ಹೌದು ಮೂಲಂಗಿ ಉತ್ತಮ ಆರೋಗ್ಯವನ್ನು ರೂಪಿಸುವಲ್ಲಿ ಸಹಕಾರಿಯಾಗಿದೆ, ಹಾಗು ಹಲವು ರೋಗಗಳನ್ನು ನಿವಾರಿಸುವ ಅಂಶವನ್ನು ಹೊಂದಿದೆ. ಜೀರ್ಣಕ್ರಿಯೆಗೆ ಸಹಕಾರಿ ಮೂಲಂಗಿಯಲ್ಲಿ ನಾರಿನಾಂಶವು ಹೆಚ್ಚಾಗಿರುವ ಕಾರಣದಿಂದ ಇದು ಕರುಳಿನಲ್ಲಿರುವ ವಿಷ ಹಾಗೂ ಕಲ್ಮಶವನ್ನು ಹೊರಹಾಕಿ ಜೀರ್ಣಕ್ರಿಯೆಗೆ ಸಹಕರಿಸುವುದು.

ಮೂಲಂಗಿ ಹಾಗೂ ನಿಂಬೆರಸದಲ್ಲಿ ಕ್ಯಾಲರಿ ತುಂಬಾ ಕಡಿಮೆ ಇರುವ ಕಾರಣದಿಂದ ಚಯಾಪಚಾಯ ಕ್ರಿಯೆ ಹೆಚ್ಚಿ ತೂಕ ಕಳೆದುಕೊಳ್ಳಲು ನೆರವಾಗುವುದು.

ಅಧಿಕ ರಕ್ತದೊತ್ತಡ ನಿವಾರಣೆಗೆ ಇದರಲ್ಲಿ ಪೊಟಾಶಿಯಂ ಅಂಶವು ಹೆಚ್ಚಾಗಿರುವ ಕಾರಣದಿಂದ ಇದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವುದು.ಇದು ರಕ್ತದ ಹರಿವನ್ನು ನಿಯಂತ್ರಿಸುವುದು ಮಾತ್ರವಲ್ಲದೆ, ಅದನ್ನು ನಿಧಾನಗೊಳಿಸಿ ಅಧಿಕ ರಕ್ತದೊತ್ತಡದಂತಹ ಸಮಸ್ಯೆಯನ್ನು ನಿವಾರಿಸುವುದು.

ಮೂಳೆಗಳು ಬಲಗೊಳ್ಳಲು ಮೂಲಂಗಿ ರಸ ಮತ್ತು ಲಿಂಬೆರಸದ ಮಿಶ್ರಣವು ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳುವ ಕ್ಷಮತೆಯನ್ನು ಹೆಚ್ಚಿಸಿ ಮೂಳೆಗಳ ಆರೋಗ್ಯವನ್ನು ಕಾಪಾಡುವುದು.ಇದು ಅಸ್ಥಿರಂಧ್ರತೆಯಂತಹ ಸಮಸ್ಯೆಯನ್ನು ಕಡಿಮೆ ಮಾಡುವುದು.

ಸಾಮಾನ್ಯ ಶೀತ, ಜ್ವರ ಮತ್ತು ಸೋಂಕನ್ನು ತಡೆಯುವುದು. ಶ್ವಾಸಕೋಶದ ರೋಗ ನಿವಾರಣೆ ಶ್ವಾಸಕೋಶದಲ್ಲಿರುವಂತಹ ಕಫವನ್ನು ಮೂಲಂಗಿ ರಸ ಮತ್ತು ಲಿಂಬೆರಸದ ಮಿಶ್ರಣವು ಹೊರಹಾಕುವುದರಿಂದ ಶ್ವಾಸಕೋಶದ ಸಮಸ್ಯೆಗಳಾದ ಕಫ, ಕೆಮ್ಮು ಮತ್ತು ಮೂಗುಕಟ್ಟುವುದು ಇತ್ಯಾದಿಯನ್ನು ಇದು ನಿವಾರಿಸುತ್ತದೆ.

Comments are closed.