ಕರಾವಳಿ

ಈ ಹಣ್ಣಿನಲ್ಲಿ ವಿಟಮಿನ್‌ ಕೆ ಅಧಿಕವಾಗಿದ್ದು, ಕಣ್ಣಿನ ಸಮಸ್ಯೆ, ರಕ್ತದೊತ್ತಡ ತೊಂದರೆಗಳಿಗೆ ರಾಮಬಾಣ

Pinterest LinkedIn Tumblr

ಹೊಟ್ಟೆಯಲ್ಲಿ ಹುಣ್ಣು, ಅಲ್ಸರ್‌ ಮುಂತಾದ ಸಮಸ್ಯೆಗಳಿಗೆ ಬಾಳೆಹಣ್ಣಿನ ಸೇವನೆ ಬೆಸ್ಟ್‌. ಇದರಲ್ಲಿ ಹೊಟ್ಟೆಯ ಆರೋಗ್ಯ ವರ್ಧಿಸುವ ಹಲವಾರು ಅಂಶಗಳಿವೆ.

ರಕ್ತದೊತ್ತಡ ಹೆಚ್ಚಿದ್ದವರಿಗೆ, ಕಣ್ಣಿನ ಆರೋಗ್ಯಕ್ಕೂ ಈ ಹಣ್ಣು ಉತ್ತಮ. ಇದರಲ್ಲಿ ವಿಟಮಿನ್‌ ಕೆ ಅತ್ಯಧಿಕವಾಗಿದೆ. ಇದರ ಜೊತೆಗೆ ವಿಟಮಿನ್‌ ಎ, ಬಿ, ಬಿ-6, ಮತ್ತು ಸಿ ಸಹ ಇವೆ. ಬಾಳೆಹಣ್ಣು ಸೇವನೆಯ ಮೂಲಕ ಇವೆಲ್ಲಾ ಪೌಷ್ಟಿಕಾಂಶಗಳನ್ನು ನಮ್ಮದಾಗಿಸಿಕೊಳ್ಳಬಹುದು. ಬಾಳೆಹಣ್ಣು ಮೂತ್ರಪಿಂಡಕ್ಕೆ ಸಂಬಂಧಿಸಿದ ತೊಂದರೆಗಳಿಗೂ ರಾಮಬಾಣ. ಇನ್ನು ಬಾಳೆದಿಂಡಿನಲ್ಲಿ ಪೊಟಾಷಿಯಂ ಮತ್ತು ಐರನ್‌ ಇವೆ. ಅನಿಮಿಯಾ ತೊಂದರೆಗೆ ಇದರ ಸೇವನೆ ಒಳ್ಳೆಯದು.

ಬಾಳೆದಿಂಡಿನ ಸೇವನೆಯಿಂದ ಎದೆಯುರಿಯೂ ಕಡಿಮೆಯಾಗುತ್ತದೆ. ಇದನ್ನು ಅಡುಗೆಗೆ ಉಪಯೋಗಿಸುವುದರಿಂದ ಕಿಡ್ನಿ ಮತ್ತು ಅಲ್ಸರ್‌ ತೊಂದರೆಗಳಿಂದ ಮುಕ್ತರಾಗಬಹುದು.ಮಧುಮೇಹ, ದೇಹ ತೂಕ ಹೆಚ್ಚಿರುವವರಿಗೆ, ಕರುಳಿನ ಆರೋಗ್ಯಕ್ಕೂ ಇದು ಒಳ್ಳೆಯದು. ಬಾಳೆದಿಂಡು ಸಂಧಿವಾತ ಕಡಿಮೆ ಮಾಡುತ್ತದೆ. ಇದರಲ್ಲಿ ಫೈಬರ್‌ ಅಂಶ ಹೆಚ್ಚಾಗಿದ್ದು, ಕರುಳಿನಲ್ಲಿರುವ ಕ್ರಿಮಿಗಳನ್ನು ನಾಶ ಮಾಡುತ್ತದೆ.

ಬಾಳೆದಿಂಡಿನ ರಸವನ್ನು ಮಜ್ಜಿಗೆಗೆ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಕುಡಿದರೆ ತೂಕ ಕಡಿಮೆಯಾಗುತ್ತದೆ. ಇದರಲ್ಲಿರುವ ಪೊಟಾಷಿಯಂನಿಂದ ಹೊಟ್ಟೆ ನೋವು ಸಹ ಕಡಿಮೆಯಾಗುತ್ತದೆ.ಗರ್ಭಿಣಿಯರಿಗೆ, ಡಯಾಬಿಟೀಸ್‌ ಇರುವವರಿಗೆ ಬಾಳೆಕಾಯಿಯ ಸೇವನೆ ತುಂಬಾ ಒಳ್ಳೆಯದು.

Comments are closed.