ಕರಾವಳಿ

ಡೈರಿ ಪದಾರ್ಥಗಳು ಸೇವನೆಗೆ ಆರೋಗ್ಯಕರವೇ..?

Pinterest LinkedIn Tumblr

ಹೌದು ಕೆಲವೊಮ್ಮೆ ನಮ್ಮ ಆರೋಗ್ಯವನ್ನು ನಮ್ಮ ಬೇಜವಾಬ್ದಾರಿ ಮತ್ತು ಕೆಲ ಅಡ್ಡ ಪರಿಣಾಮಗಳಿಂದಲೇ ಕೆಡಿಸಿಕೊಳ್ಳುತ್ತೇವೆ ಇದಕ್ಕೆ ಕಾರಣ ಏನು ಮತ್ತು ಯಾಕೆ ಈ ಡೈರಿಯಲ್ಲಿನ ಪದಾರ್ಥಗಳು ನಿಮ್ಮ ಆರೋಗ್ಯವನ್ನು ಹಾಳುಮಾಡುತ್ತವೆ ಅನ್ನೋದು ಇಲ್ಲಿದೆ ನೋಡಿ.

ಆರೋಗ್ಯಕ್ಕೆ ಸಂಬಂಧಿಸಿದಂತೆ ಆಹಾರ ಪದಾರ್ಥಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಹಲವು ಬೇಕು, ಬೇಡಗಳು ಕೇಳಿ ಬರುತ್ತಲೇ ಇರುತ್ತವೆ. ಅದರಲ್ಲಿಯೂ ತುಪ್ಪದಂಥ ಪದಾರ್ಥಗಳನ್ನು ತಿನ್ನುವಾಗ ದೇಹದ ತೂಕ ಎಲ್ಲಿ ಹೆಚ್ಚಾಗುತ್ತೋ ಎಂಬ ಭಯದೊಂದಿಗೇ ಸೇವಿಸುತ್ತೇವೆ.

ಮನೆಯಲ್ಲಿ ಮಾಡಿರುವ ತುಪ್ಪ, ಮೊಸರಿಗಿಂತಲೂ ಹೊರಗಡೆಯದ್ದೇ ಸೇವಿಸುವುದು ಹೆಚ್ಚಾಗುತ್ತಿದೆ. ಮನೆಯಲ್ಲಿ ಅದೂ ದೇಸಿ ತಳಿ ದನದ ಹಾಲು, ಮೊಸರು, ಮಜ್ಜಿಗೆ, ತುಪ್ಪ, ಬೆಣ್ಣೆ ಯಾವುದೂ, ಯಾವತ್ತೂ ಆರೋಗ್ಯಕ್ಕೆ ಕೆಡುಕಲ್ಲ. ಆದರೆ, ಯಾವಾಗ ಅದೂ ಕಲುಷಿತಗೊಳ್ಳಲು ಶುರುವಾಯಿತೋ, ಆಗಿನಿಂದಲೇ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಆರಂಭವಾಯಿತು ಹಾಗಾಗಿಯೇ ಕೆಲವು ಡೈರಿ ಪದಾರ್ಥಗಳನ್ನು ಸೇವಿಸಬಾರದು ಎಂದು ಹೇಳಲಾಗುತ್ತದೆ.

ಆದರೆ ಹಾಲಿನಿಂದ ತಯಾರಾದ ಯೋಗರ್ಟ್, ಚಾಕೋಲೇಟ್, ಐಸ್‌ಕ್ರೀಂ ದೇಹಕ್ಕೆ ಅಷ್ಟು ಒಳ್ಳೆಯದಲ್ಲ. ಅದರಲ್ಲಿಯೂ ಸಕ್ಕರೆ ಮಿಶ್ರಿತ ಪದಾರ್ಥಗಳು ಕ್ಯಾನ್ಸರ್‌ನಂಥ ಮಾರಕ ರೋಗಗಳನ್ನೂ ಹರಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂಬುದನ್ನು ಸಂಶೋಧನೆಗಳು ಸಾಬೀತು ಪಡಿಸಿವೆ. ಇವನ್ನು ಬಳಸದಿದ್ದರೆ ಆರೋಗ್ಯಕ್ಕೆ ಹಿತ. ಹಾಗಂಥ ಹಾಲು ಉತ್ಪನ್ನಗಳನ್ನೇ ತ್ಯಜಿಸಿದರೆ ನಮ್ಮ ಎಲುಬು ಹಾಗೂ ತ್ವಚೆಯ ಆರೋಗ್ಯ ಹಾಳಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಹಾಗಾಗಿ ಆದೊಷ್ಟು ಮನೆಯಲ್ಲಿನ ಆಹಾರವನ್ನೇ ಸೇವೆನೆ ಮಾಡಿ.

Comments are closed.