ಕರಾವಳಿ

ಓಂಕಾರ ಜಪಿಸುವುದರಿಂದಾಗುವ ಉಪಯೋಗಗಳು…!

Pinterest LinkedIn Tumblr

ಹಿಂದೂ ಧರ್ಮದಲ್ಲಿ, ಓಂ ಅತ್ಯಂತ ಪ್ರಮುಖವಾದ ಆಧ್ಯಾತ್ಮಿಕ ಸಂಕೇತಗಳಲ್ಲಿ ಒಂದಾಗಿದೆ. ಪ್ರಾಚೀನ ಮತ್ತು ಮಧ್ಯಕಾಲೀನ ಯುಗದ ಹಸ್ತಪ್ರತಿಗಳು, ದೇವಾಲಯಗಳು, ಧಾರ್ಮಿಕತೆಗಳು ಮತ್ತು ಹಿಂದೂ ಧರ್ಮ, ಬೌದ್ಧಧರ್ಮ ಮತ್ತು ಜೈನ ಧರ್ಮಗಳಲ್ಲಿ ಆಧ್ಯಾತ್ಮಿಕ ಹಿಮ್ಮೆಟ್ಟುವಿಕೆಯಲ್ಲಿ ಕಂಡುಬರುವ ಪ್ರತಿಮಾಶಾಸ್ತ್ರದ ಭಾಗ ಓಂ ಆಗಿದೆ. ಓಂ ಚಿಹ್ನೆಯು ಎಲ್ಲಾ ಭಾರತೀಯ ಧಾರ್ಮಾಗಳಲ್ಲಿ ಒಂದು ಆಧ್ಯಾತ್ಮಿಕ ಅರ್ಥವನ್ನು ಹೊಂದಿದೆ.

ಓಂ : ‘ಅ’ + ‘ಉ’ + ‘ಮ’ ಗಳಿಂದಾಗಿದೆ, ಇವು ಕ್ರಮವಾಗಿ ಭೌತಿಕ ಸೆಲೆ, ಮಾನಸಿಕ ಸೆಲೆ, ಜಾಗೃತ ಸೆಲೆಗಳನ್ನು ಪ್ರತಿಧ್ವನಿಸುತ್ತದೆ.

ಓಂಕಾರ ಜಪಿಸುವುದರಿಂದಾಗುವ ಉಪಯೋಗಗಳು:

ಹತ್ತು ಸಾರಿ ಓಂಕಾರವನ್ನು ಕ್ರಮಬದ್ಧವಾಗಿ ಜಪಿಸಿದರೆ ಪ್ರಜ್ಞೆ ಅರಳುತ್ತದೆ, ರಕ್ತದ ಒತ್ತಡ ಮತ್ತು ಹೃದಯ ಬಡಿತ ಕೆಳಗೆ ಬರುತ್ತದೆ.

ನಿದ್ರಾಭಂಗ ನಿವಾರಣೆಯಾಗುತ್ತದೆ : ಗಮನಾರ್ಹ ರೀತಿಯಲ್ಲಿ ಶರೀರದಲ್ಲಿನ ಶರ್ಕರಾಂಶ ಬಳಕೆ ಹೆಚ್ಚುತ್ತದೆ, ದೇಹದಲ್ಲಿನ ಆಮ್ಲಜನಕ ಸಂಚಾರ ಉನ್ನತ ಮಟ್ಟದಲ್ಲಿರುತ್ತದೆ, ಮನೋಖಿನ್ನತೆ, ನಕರಾತ್ಮಕ ಧೋರಣೆ, ಕುತೂಹಲದ ಉಪಟಳ ಇರುವುದಿಲ್ಲ.

ನಿರಾಶೆ ಕುಗ್ಗುತ್ತದೆ : ಮನೋಲ್ಲಾಸ, ಪ್ರಫುಲ್ಲತೆ, ಮನೋಶಾಂತಿ ವೃದ್ಧಿಸುತ್ತದೆ, ಮನೋದುಗುಡ, ಉದ್ರೇಕ, ಕಳವಳ ಶಮನಕಾರಿ, ಶರೀರದ ಅಂಗಕ್ರಿಯೆಗಳು ವೃದ್ಧಿಸುತ್ತವೆ.

ಏಕಾಗ್ರತೆ ಹೆಚ್ಚುತ್ತದೆ : ಗ್ರಹಣಶಕ್ತಿ ಹೆಚ್ಚುತ್ತದೆ, ಬೇಸರ ಹತ್ತಿರ ಸುಳಿಯುವುದಿಲ್ಲ, ಜನಾನುರಾಗ ಗುಣ ಉದ್ದೀಪನಗೊಳ್ಳುತ್ತದೆ, ವೃತ್ತಿ ತತ್ಪರತೆ ಹಾಗು ಕಾರ್ಯ ಕೌಶಲ್ಯ ಶ್ರೇಷ್ಠ ಮಟ್ಟದಲ್ಲಿರುತ್ತದೆ.

ನೋವಿನಿಂದ ನಿರಾಳತೆ ಲಭಿಸುತ್ತದೆ : ನೆನಪಿನ ಶಕ್ತಿ ವೃದ್ಧಿಸುತ್ತದೆ, ವೈದ್ಯ ವಿಜ್ಞಾನದ ಪ್ರಕಾರ ಓಂಕಾರ ಮಾನವನ ಸೃಷ್ಟ್ಯಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ. ಪ್ರೇರಕ ಶಕ್ತಿಯ ಸಂಚಾರ ನರಮಂಡಲವನ್ನು ಜಾಗೃತಗೊಳಿಸುತ್ತದೆ, ಇದರಿಂದ ಸ್ಮೃತಿ ವರ್ಧಿಸುತ್ತದೆ

Comments are closed.