ಕರಾವಳಿ

ಕೋಟೇಶ್ವರ ಕಡಲ ತೀರದಲ್ಲಿ ‘ಮಾತೃಪಿತೃ ವಂದನೆ’ ಮರಳುಶಿಲ್ಪ ಕಲಾಕೃತಿ ಪ್ರದರ್ಶನ

Pinterest LinkedIn Tumblr

ಕುಂದಾಪುರ: ಬಾಳೆಕುದ್ರು ಹಂಗಾರಕಟ್ಟೆಯ ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯವರ ಅನುಗ್ರಹದೊಂದಿಗೆ ಉಡುಪಿಯ ಸ್ಯಾಂಡ್ ಥಿಂ ತಂಡದವರಿಂದ ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಖ್ಯಾತ ಮರಳು ಶಿಲ್ಪ ಕಲಾವಿದ ಹರೀಶ್ ಸಾಗಾ ನೇತೃತ್ವದಲ್ಲಿ ಸುದ್ದಿಮನೆ ದಶಮ ಸಂಭ್ರಮದ ಅಂಗವಾಗಿ ಕೋಟೇಶ್ವರ ಬೀಚ್‌ನಲ್ಲಿ ಮರಳುಶಿಲ್ಪ ಕಲಾಕೃತಿ ಪ್ರದರ್ಶನ ಮತ್ತು ಮಾತೃಪಿತೃ ವಂದನೆ ಅಭಿಯಾನ ಜರುಗಿತು.

????????????????????????????????????

ಮಾತೃಪಿತೃ ಶಕ್ತಿ ಜಾಗ್ರತಗೊಂಡು ಸ್ವಾಭಿಮಾನ, ದೇಶಭಕ್ತ, ಧರ್ಮನಿಷ್ಠ ಸತ್ಪ್ರಜೆಗಳು ರೂಪುಗೊಳ್ಳಲಿ ಎನ್ನುವ ಸದಾಶಯದೊಂದಿಗೆ ನಡೆಯುತ್ತಿರುವ ಮಾತೃಪಿತೃ ವಂದನಾ ಅಭಿಯಾನವನ್ನುದ್ದೇಶಿಸಿ ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷರೂ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಶೇಡಿಮನೆ ಗೋಪಾಲ ಶೆಟ್ಟಿ ಮಾತನಾಡಿ ಬಾಲ್ಯದಲ್ಲಿಯೇ ಸುಸಂಸ್ಕೃತವಾದ ದಾರಿಯಲ್ಲಿ ಮಕ್ಕಳನ್ನು ರೂಪಿಸಲು ಇಂತಹ ಕಾರ್ಯಕ್ರಮಗಳು ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸಿದೆ. ನಮ್ಮ ಪರಂಪರಾಗತ ಶಿಕ್ಷಣದಲ್ಲಿ ಉತ್ತಮ ಅಂಶಗಳಿದ್ದು, ಅವುಗಳನ್ನು ಬದುಕಿನಲ್ಲಿ ಜೋಡಿಸಿಕೊಂಡಾಗ ಶಾಂತಿ, ನೆಮ್ಮದಿಯ ಜೀವನ ಹೊಂದಬಹುದು. ಈ ಅಭಿಯಾನ ಜನರಲ್ಲಿ ಜಾಗೃತಿ ಮೂಡಿಸುವಂತಾಗಲಿ ಎಂದರು.

ಆಕರ್ಷಕ ಮರಳು ಶಿಲ್ಪ: ಖ್ಯಾತ ಮರಳು ಶಿಲ್ಪ ಕಲಾವಿದ ಹರೀಶ್ ಸಾಗಾ ನೇತೃತ್ವದಲ್ಲಿ ಮೂಡಿಬಂದ ಮಕ್ಕಳು, ತಂದೆ ತಾಯಿಗಳ ಪಾದಕ್ಕೆ ಶಿರಬಾಗಿ ವಂದಿಸುತ್ತಿರುವ ಮರಳು ಶಿಲ್ಪ ಬಹುಜನರ ಆಕರ್ಷಣೆಯ ಕೇಂದ್ರವಾಗಿತ್ತು. ನೂರಾರು ಪ್ರವಾಸಿಗರು ಮರಳೂ ಶಿಲ್ಪದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾತೃಪಿತೃ ವಂದನೆ: ಇದೇ ಸಂದರ್ಭದಲ್ಲಿ ಮಾತೃಪಿತೃ ವಂದನೆ ಅಭಿಯಾನದ ಸಂಚಾಲಕ ಸಂತೋಷ್ ಕೋಣಿ ಅವರು ನೆರೆದ ತಂದೆ ತಾಯಿಯಂದಿರಿಗೆ ಅವರ ಮಕ್ಕಳಿಂದ ಪೂಜೆ ನೆರವೇರಿಸಿದರು. ಬಹಳ ಉತ್ಸಾಹದಿಂದ ಪಾಲ್ಗೊಂಡ ಮಕ್ಕಳು ತಂದೆ ತಾಯಿಗಳ ಪಾದಕ್ಕೆ ಪುಷ್ಪ ಅರ್ಪಿಸಿ, ಹಣ್ಣು ಹೂವುಗಳನ್ನು ನೀಡಿ ನಮಿಸಿರುವ ಜೊತೆಗೆ ಜೀವನದ ಕೊನೆಯವರಗೂ ನಿಮ್ಮನ್ನು ಜೋಪಾನವಾಗಿ ನೋಡಿಕೊಳ್ಳುವೆವು ಎಂಬುವುದಕ್ಕಾಗಿ ಮಕ್ಕಳು ಹೆತ್ತವರಿಗೆ ಭರವಸೆ ನೀಡಿದರು. ಪರಿಸರದಲ್ಲಿ ಭಾವುಕ ವಾತಾವರಣ ನಿರ್ಮಾಣವಾಗಿತ್ತು.

ಈ ಸಂದರ್ಭಧಲ್ಲಿ ರೋಟರಿ ಕ್ಲಬ್ ಕುಂದಾಪುರದ ಕಾರ್ಯದರ್ಶಿ ಪ್ರಕಾಶ್ಚಂದ್ರ ಶೆಟ್ಟಿ, ಕುಂದಾಪುರ ಆನ್ಸ್ ಕ್ಲಬ್‌ನ ರಜನಿ ಗೋಪಾಲ ಶೆಟ್ಟಿ, ಮರಳು ಶಿಲ್ಪ ಕಲಾವಿದ ಹರೀಶ್ ಸಾಗಾ, ಕುಂದಾಪುರ ಸೌಹಾರ್ದ ಕೋ ಆಪರೇಟಿವ್‌ನ ನಿರ್ದೇಶಕ ರಾಜೇಶ್ ದೈವಜ್ಞ, ಸಾಲಿಗ್ರಾಮದ ಶಿವಯೋಗ ಫೋರಂನ ಅಧ್ಯಕ್ಷ ಪ್ರಶಾಂತ್ ದೈವಜ್ಞ, ಕೋಣಿಯ ಮಾತಾ ಮೊಂಟೆಸ್ಸೋರಿ ಶಾಲೆ ಪ್ರಾಂಶುಪಾಲೆ ಭಾರತಿ ಪ್ರಕಾಶ್ಚಂದ್ರ ಶೆಟ್ಟಿ, ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ಆಡಳಿತಾಧಿಕಾರಿ ಜಯಂತ್ ಶೆಟ್ಟಿ, ರೋಟರಿ ಕ್ಲಬ್ ಕುಂದಾಪುರದ ಪೂರ್ವಾಧ್ಯಕ್ಷ ಗಣೇಶ್ ಐತಾಳ್, ಸದಸ್ಯರಾದ ಸಾಲಗದ್ದೆ ಶಶಿಧರ ಶೆಟ್ಟಿ, ಹೆಬ್ರಿ ಅಮೃತ ಭಾರತಿ ಪಿಯು ಕಾಲೇಜಿನ ಉಪನ್ಯಾಸಕಿ ಕೋಣಿ ಮಮತಾ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು. ಅಭಿಯಾನ ಸಂಚಾಲಕ ಸಂತೋಷ್ ಕೋಣಿ ಸ್ವಾಗತಿಸಿ, ವಂದಿಸಿದರು.

Comments are closed.