ಕರಾವಳಿ

ಕುಂದಾಪುರ: ಹೊಸ ವರ್ಷದ ಹರುಷ ಹೆಚ್ಚಿಸಿದ ಕಂದಮ್ಮಗಳು!

Pinterest LinkedIn Tumblr

ಕುಂದಾಪುರ: ಎಲ್ಲೆಡೆ ಹೊಸ ವರ್ಷದ ಹರುಷ ಕಳೆಗಟ್ಟಿದೆ. 2019ನೇ ವರ್ಷವನ್ನು ಸ್ವಾಗತಿಸುವ ಉತ್ಸಾಹದ ನಡುವೆ ಆ ದಿನದಂದು ತಮ್ಮ ಮನೆಯ ಸಂತಸವನ್ನು ಇನ್ನಷ್ಟು ಹೆಚ್ಚಿಸಿದ್ದು 1-1-2019ರಂದು ಜನಿಸಿದ ಪುಟಾಣಿ ಕಂದಮ್ಮಗಳು. ಕುಂದಾಪುರದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಸೋಮವಾರ ಮಧ್ಯರಾತ್ರಿ ಬಳಿಕ ಹುಟ್ಟಿದ ಮಕ್ಕಳ ಮನೆಯಮಂದಿಯ ಸಂತಸ ಇಮ್ಮಡಿಯಾಗಿದೆ.

(ಕಂದಮ್ಮನೊಂದಿಗೆ ರಾಜೇಶ್-ಶಾರದಾ ದಂಪತಿ)

ಅಗಲಿದ ತಂದೆಯನ್ನು ಮಗನಲ್ಲಿ ಕಂಡರು!
ಭಟ್ಕಳ ಸೋಡಿಗದ್ದೆ ಬೆಳ್ಕೆ ಮೂಲದ ರಾಜೇಶ-ಶಾರದಾ ದಂಪತಿಗಳ ಮೊದಲ ಮಗು ಸೋಮವಾರ ತಡರಾತ್ರಿ 1.38ಕ್ಕೆ ಜನಿಸಿದೆ. ಸಾಮಾನ್ಯ ಹೆರಿಗೆಯಲ್ಲಿ ಜನಿಸಿದ ಗಂಡು ಮಗುವನ್ನು ಕಂಡು ಆ ಕುಟುಂಬದ ಸಂತಸ ಹೆಚ್ಚಿದ್ದು ಒಂದೆಡೆಯಾದರೆ ಕಳೆದ ತಿಂಗಳು ತನ್ನ ತಂದೆ ಮಂಜುನಾಥ ಅವರನ್ನು ಕಳೆದುಕೊಂಡಿದ್ದ ರಾಜೇಶ್ ತನ್ನ ತಂದೆಯನ್ನು ಈ ಕಂದಮ್ಮನಲ್ಲಿ ಕಂಡಿದ್ದಾರೆ. ಇದೇ ಡಿ.1 ರ ರಾತ್ರಿ 1 ಗಂಟೆ ಆಸುಪಾಸಿನಲ್ಲಿ ಮಂಜುನಾಥ್ ಹೃದಯ ಸಂಬಂಧಿ‌ ಸಮಸ್ಯೆಯಿಂದ ಮೃತರಾಗಿದ್ದರು. ಈ ಪುಟಾಣಿ ಕಂದ ಆ ನೋವನ್ನು ಮರೆಸಲಿ ಎನ್ನುವುದು ನಮ್ಮ ಹಾರೈಕೆ.

ಇನ್ನು ತಾಲೂಕಿನ ಬೇರೆಬೇರೆ ಪ್ರತಿಷ್ಟಿತ ಖಾಸಗಿ ಆಸ್ಪತ್ರೆಯಲ್ಲಿ ಜ.೧ರಂದು ಮಕ್ಕಳು ಜನಿಸಿದ್ದು ಅವರವರ ಕುಟುಂವದ ಹೊಸವರ್ಷದ ಸಂಭ್ರಮವನ್ನು ಹೆಚ್ಚಿಸಿದ್ದಾರೆ.

Comments are closed.