ಕರಾವಳಿ

ಸುವರ್ಣ ನ್ಯೂಸ್ ನಿರೂಪಕನ ವಿರುದ್ದ ಪ್ರತಿಭಟನೆ.- ಪ್ರವಾದಿಯ ಅನುಯಾಯಿಗಳಾದ ಮುಸಲ್ಮಾನರ ತಾಳ್ಮೆಯನ್ನು ಪರೀಕ್ಷಿಸಬೇಡಿ : ಬಹು |ಅಸ್ಫಾಕ್ ಫೈಝಿ.

Pinterest LinkedIn Tumblr

ಮಂಗಳೂರು : ಜಾಗತಿಕ ಮುಸಲ್ಮಾನರ ಪ್ರವಾದಿಯಾದ ಹಝ್ರತ್ ಮುಹಮ್ಮದ್ ಪೈಗಂಬರ್ ರವರು ತಮ್ಮ ಅನುಯಾಯಿಗಳಿಗೆ ತಾಲ್ಮೆ ಹಾಗೂ ಸಹನೆ, ಸೌಹಾರ್ದತೆಯನ್ನು ಕಳಿಸಿಕೊಟ್ಟಿದ್ದಾರೆ, ಇಸ್ಲಾಂ ಧರ್ಮವನ್ನು ನೀನು ಹೇಗೆ ಅನುಸರಿಸುತ್ತಿಯೋ ಹಾಗೆಯೇ ಇತರ ಸಮುದಾಯವನ್ನೂ ನೀನು ಗೌರವಿಸಬೇಕೆಂಬುವುದನ್ನು ಪ್ರವಾದಿಯವರು ನಮಗೆ ಕಳಿಸಿಕೊಟ್ಟಿದ್ದಾರೆ.

ಪ್ರವಾದಿಯವರು ತನ್ನ ೨೪ನೇ ವಯಸ್ಸಿನಲ್ಲಿ ೪೦ ವರ್ಷದ ವಿಧವೆಯನ್ನು ವರಿಸುವ ಮುಖಾಂತರ ಮಾದರಿಯಾಗಿದ್ದಾರೆಯೇ ಹೊರತು ಅಜಿತ್ ಎನ್ನುವ ವ್ಯಕ್ತಿ ತಿಳಿಸಿದಂತೆ ಅಪ್ರಾಪ್ತ ಹುಡುಗಿಯನ್ನು ಮದುವೆಯಾದ ಉದಾಹರಣೆಗಳಿಲ್ಲ, ಶಾಂತಿ, ಸಹನೆ, ತಾಳ್ಮೆಯ ಪ್ರತಿಪಾದಕರಾದ ಜಾಗತಿಕ ಮುಸಲ್ಮಾನರ ತಾಳ್ಮೆಯನ್ನು ಪರೀಕ್ಷಿಸಲು ಇನ್ನು ನಿನ್ನಂತಹ ಸಾವಿರ ಅಜಿತ್ ಹಾಗೂ ಸಾವಿರ ಚಾನೆಲ್ ಗಳು ಹುಟ್ಟಿಬಂದರೂ ಸಾಧ್ಯವಿಲ್ಲ ಎಂಬುವುದಾಗಿ ಸಜೀಪನಡು ಕೇಂದ್ರ ಜುಮಾ ಮಸೀದಿಯ ಖತೀಬರಾದ ಬಹಮಾನ್ಯರಾದ ಅಸ್ಫಾಕ್ ಫೈಝಿಯವರು ಸಜೀಪನಡು ಕೇಂದ್ರ ಜುಮಾ ಮಸೀದಿಯ ವತಿಯಿಂದ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ದಿಕ್ಷೂಚಿ ಬಾಷಣದಲ್ಲಿ ನುಡಿದರು.

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಕೋಮುವಾದವನ್ನು ಬಿತ್ತರಿಸುವಂತಹ ಸುವರ್ಣ ಚಾನೆಲ್ ಹಾಗೂ ಅದರ ಸಮೂಹ ಸಂಸ್ಥೆಯ ಚಾನೆಲ್ ಗಳನ್ನು ಸರಕಾರವು ಕೂಡಲೇ ನಿಷೇಧಿಸಬೇಕೆಂದು ದ.ಕ ಜಿಲ್ಲಾ ವಕ್ಫ್ ಸಲಹಾ ಸಮೀತಿಯ ನಿಕಟಪೂರ್ವ ಉಪಾಧ್ಯಕ್ಷರಾದ ಎಸ್.ಅಬೂಬಕ್ಕರ್ ಸಜೀಪ ನುಡಿದರು.

ಪ್ರತಿಭಟಣಾ ಸಭೆಯ ಅಧ್ಯಕ್ಷತೆಯನ್ನು ಸಜೀಪನಡು ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ರಝಾಕ್ ಹಾಜಿ ವಹಿಸಿದ್ದರು,

ಸಭೆಯಲ್ಲಿ ಸಜೀಪನಡು ಕೇಂದ್ರ ಜುಮಾ ಮಸೀದಿಯ ಉಪಾಧ್ಯಕ್ಷರಾದ ಆಸಿಫ್ ಕುನ್ನಿಲ್, ಪ್ರಧಾನ ಕಾರ್ಯದರ್ಶಿಯಾದ ಎಸ್.ಕೆ. ಮೊಹಮ್ಮದ್, ನಾಸೀರ್ ಸಜೀಪ, ಅಬ್ದುಲ್ ಕಾದರ್ ಹಾಗೂ ಇನ್ನಿತರ ಉಲೇಮಾ ಹಾಗೂ ನಾಯಕರುಗಳು ಬಾಗವಹಿಸಿದರು.

ಪ್ರತಿಭಟನೆಯ ನಂತರ ಅಪಾದಿತನಾದ ಅಜಿತ್ ನನ್ನು ಬಂಧಿಸಿ ಸುವರ್ಣ ಚಾನೆಲ್ ಹಾಗೂ ಅದರ ಸಮೂಹ ಸಂಸ್ಥೆಯ ಚಾನೆಲ್ ಗಳನ್ನು ಕರ್ನಾಟಕ ರಾಜ್ಯದಲ್ಲಿ ನಿಷೇದಿಸಬೇಕೆಂದು ಸಜೀಪನಡು ಗ್ರಾಮಪಂಚಾಯತ್ ಅಭಿವೃದ್ದಿ ಅಧಿಕಾರಿಯಾದ ಎಸ್. ವೀರಪ್ಪ ಗೌಡ ರವರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳು, ಗ್ರಹ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

Comments are closed.