ಕರಾವಳಿ

ದಂಪತಿಗಳು ಗರ್ಭಧಾರಣೆಗೆ ವಿಳಂಬ ಮಾಡುವುದು ಮಗುವಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ…ಯಾಕೆ?

Pinterest LinkedIn Tumblr

ಈ ಸಮಸ್ಯೆ ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಅನ್ವಯವಾಗುತ್ತದೆ, ಏಕೆಂದರೆ ಆರ್ಥಿಕವಾಗಿ ಒಂದು ಹಂತದವರೆಗೆ ತಲುಪುವವರೆಗೂ ಈಗಿನ ಗಂಡಾಗಲೀ ಅಥವಾ ಹೆಣ್ಣಾಗಲೀ ಮದುವೆಯಾಗಲು ಇಚ್ಚಿಸುವುದಿಲ್ಲ, ಹಾಗೂ ಸ್ವಾಭಿಮಾನಿಗಳಾಗಿ ಬದುಕಲು ಬಯಸುವವರೇ ಹೆಚ್ಚು, ಈ ಕಾರಣಗಳಿಂದಾಗಿಯೇ ಮದುವೆಯಾಗಲು ಬಹಳ ಸಮಯವನ್ನು ತೆಗೆದುಕೊಳ್ಳುತ್ತಾರೆ, ತಡವಾಗಿ ಮದುವೆಯಾಗಿ ತಡವಾಗಿ ಗರ್ಭ ಧರಿಸಿ ಅವಧಿಪೂರ್ವ ಮಗುವಿಗೆ ಜನ್ಮ ನೀಡಿದ ಬಗ್ಗೆ ನಡೆದಿರುವ ಅಧ್ಯಯನಗಳು ವರದಿಗಳ ಪ್ರಕಾರ ತಡವಾಗಿ ಅಂದರೆ ವಯಸ್ಸು ಹೆಚ್ಚಿದ ಮೇಲೆ ಗರ್ಭ ಧರಿಸುವ ಮಹಿಳೆಯರಿಗೆ ಅವರು ಪೂರ್ಣವೇ ಮಗುವಿಗೆ ಜನ್ಮ ನೀಡುತ್ತಾಳೆ.

ಹೀಗೆ ತಡವಾಗಿ ಗರ್ಭ ಧರಿಸಿ ಅವಧಿಪೂರ್ವ ಮಗು ಪಡೆಯುವುದರಿಂದ ಆಗುವ ಸಮಸ್ಯೆಗಳೆಂದರೆ ಜನನ ಸಂಬಂಧ ಸಮಸ್ಯೆಗಳು ಮತ್ತು ಸಂಕೀರ್ಣತೆಗಳು ಅಧಿಕವಾಗುತ್ತವೆ, ತಡವಾಗಿ ಮದುವೆಯಾಗುವುದರಿಂದ ಗರ್ಭ ಧರಿಸುವುದು ತಡವಾಗುತ್ತಿತ್ತು ಇದರಿಂದ ಅಕಾಲಿಕ ಅಂದರೆ ಅವಧಿಗೆ ಮುನ್ನವೇ ಮಕ್ಕಳು ಆಗುತ್ತದೆ ಇದರ ಜೊತೆಗೆ ತಡವಾಗಿ ಮದುವೆಯಾಗುವುದರಿಂದ ಗರ್ಭಧಾರಣೆ ಪ್ರಮಾಣ ಸಹ ಕಡಿಮೆಯಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಇತ್ತೀಚಿನ ದಿನಗಳಲ್ಲಿ ಮೊದಲ ಮಗುವನ್ನು ಪಡೆಯುವ ವಯಸ್ಸು ಅಧಿಕವಾಗಿರುತ್ತದೆ ಎಂತೆ ಇದು ಹಲವು ಅಪಾಯಗಳಿಗೆ ಮತ್ತು ಸಮಸ್ಯೆಗಳಿಗೆ ಕಾರಣವಾಗಬಹುದು ಅಂತೆ, ಇನ್ನೂ ಸರಾಸರಿ 35ನೇ ವಯಸ್ಸಿಗೆ ಮಗುವನ್ನು ಪಡೆಯುವ ಪ್ರತಿ ನಾಲ್ಕು ಮಹಿಳೆಯರಲ್ಲಿ ಒಬ್ಬರಲ್ಲಿ ಪ್ರಸವ ಸಂಬಂಧಿತ ಗಂಭೀರ ಸಮಸ್ಯೆಗಳು ಕಾಡುತ್ತವೆ ಎಂದು ಹೇಳುತ್ತಿದ್ದಾರೆ ವೈದ್ಯರು.

ಹಾಗಾಗಿ ಮದುವೆಯಾದ ದಂಪತಿಗಳು ಗರ್ಭಧಾರಣೆಗೆ ವಿಳಂಬ ಮಾಡುವುದು ಮಗುವಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ, ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ.

ಜೊತೆಯಲ್ಲಿ ಇದನ್ನು ಓದಿ ದಿನಕ್ಕೊಂದು ಕಿವಿ ಹಣ್ಣು ತಿಂದರೆ ಸಿಗುವ ಅರೋಗ್ಯ ಲಾಭಗಳು.

ಹುಳಿ ಸಿಹಿ ಎರಡೂ ರುಚಿಯನ್ನು ಹೊಂದಿರುವ ಈ ಹಣ್ಣು ಅನೇಕ ರೀತಿಯ ಪೌಷ್ಟಿಕಾಂಶವನ್ನು ಹೊಂದಿದೆ. ಅಮೆರಿಕಾದ ಕೃಷಿ ಇಲಾಖೆಯ ಪ್ರಕಾರ 100 ಗ್ರಾಂ ಕೀವಿ ಹಣ್ಣಿನಲ್ಲಿ 61 ಗ್ರಾಂ ಕ್ಯಾಲರಿ, 14.66 ಗ್ರಾಂ ಕಾರ್ಬೋಹೈಡ್ರೇಟ್​. 1.14 ಗ್ರಾಂ ಪ್ರೊಟೀನ್​, 0.52 ಗ್ರಾಂ ಫ್ಯಾಟ್​ ಮತ್ತು 3 ಗ್ರಾಂ ಫ್ಯಾಟ್​ ಅಂಶವಿದೆ.

ಉತ್ತಮ ಪ್ರಮಾಣದ ವಿಟಮಿನ್​ ಸಿ ಸಿಗುತ್ತದೆ : ಕಿತ್ತಳೆ, ನಿಂಬೆಹಣ್ಣಿಗೆ ಹೋಲಿಸಿದರೆ ಕೀವಿ ಹಣ್ಣಿನಲ್ಲಿ ವಿಟಮಿನ್​ ಸಿ ಅಂಶ ಹೆಚ್ಚಿದೆ. ಆದ್ದರಿಂದ ಈ ಹಣ್ಣು ಉತ್ತಮ ಆ್ಯಂಟಿ ಆಕ್ಸಿಡೆಂಟ್​. ಹಾಗೆ ಇದು ಫ್ರೀ ರಾಡಿಕಲ್ಸ್​ನ್ನು ತೆಗೆದುಹಾಕಿ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ನಿದ್ದೆ ಸಮಸ್ಯೆಗೆ ಪರಿಹಾರ ನೀಡುತ್ತದೆ : ಕೀವಿ ಹಣ್ಣಿನಲ್ಲಿರುವ ಆ್ಯಂಟಿ ಆಕ್ಸಿಡೆಂಟ್​ ಮತ್ತು ಸೆರೊಟೊನಿನ್​ ಅಂಶ ನಿದ್ದೆ ಸಮಸ್ಯೆಗೆ ಉತ್ತಮ ಪರಿಹಾರ ನೀಡುತ್ತದೆ. ಮಲಗುವ ಮುನ್ನ ಒಂದು ಕೀವಿ ಹಣ್ಣನ್ನು ಸೇವಿಸುವುದರಿಂದ ನಿದ್ದೆ ಚೆನ್ನಾಗಿ ಬರುತ್ತದೆ.

ಡಯೇಟ್ರಿ ಫೈಬರ್​ ಅಂಶ ಉತ್ತಮವಾಗಿ ಸಿಗುತ್ತದೆ: ಈ ರುಚಿಕರ ಹಣ್ಣಿನಲ್ಲಿರುವ ಡಯೇಟ್ರಿ ಫೈಬರ್ ಅಂಶ ಅನೇಕ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಫೈಬರ್​ ಅಧಿಕವಾಗಿರುವ ಈ ಹಣ್ಣು ಕೊಲೆಸ್ಟ್ರಾಲ್​ ಮಟ್ಟವನ್ನು ಹಾಗೂ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ : ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕೀವಿ ಹಣ್ಣು ಉತ್ತಮ. ಇದರಲ್ಲಿರುವ ಡಯೆಟ್ರಿ ಫೈಬರ್​ ಅಂಶ ಆಹಾರ ಸರಿಯಾದ ರೀತಿಯಲ್ಲಿ ಜೀರ್ಣವಾಗಲು ಸಹಾಯ ಮಾಡುತ್ತದೆ.

ತ್ವಚೆಯ ಕಾಂತಿಗೂ ಉತ್ತಮ : ಕೀವಿ ಹಣ್ಣು, ಜಂಕ್​ಫುಡ್ಸ್​ ಸೇವನೆಯಿಂದ ಉಂಟಾಗುವ ಆ್ಯಸಿಡಿಕ್ ಅಂಶವನ್ನು ತೆಗೆದುಹಾಕಿ ದೇಹದಲ್ಲಿ ಪಿಹೆಚ್​ ಮಟ್ಟವನ್ನು ನಿಯಂತ್ರಿಸುತ್ತದೆ. ಜೊತೆಗೆ ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್​ ಗುಣವಿರುವುದರಿಂದ ತ್ವಚೆಯ ಏಜಿಂಗ್​ನ್ನು ನಿಯಂತ್ರಿಸಿ, ಸುಕ್ಕುಗಟ್ಟುವುದು, ನೆರಿಗೆ, ಕಲೆಗಳನ್ನು ತಡೆಯುತ್ತದೆ.​

Comments are closed.