ಕರಾವಳಿ

ಅತೀ ಎತ್ತರದ ತಲೆ ದಿಂಬು ಬಳಕೆಯಿಂದ ಕಾಡುತ್ತೆ ಈ ನೋವು…!

Pinterest LinkedIn Tumblr

ಹೌದು ಇತ್ತೀಚಿಗೆ ಹಲವಾರು ಮಂದಿ ಕತ್ತು ನೋವಿನ ಸಮಸ್ಯೆಯಿಂದ ಬಳಲುತ್ತಾರೆ ಯಾಕೆಂದರೆ ಕಚೇರಿಯಲ್ಲಿ ಕುಳಿತು ದಿನದಲ್ಲಿ 8 ರಿಂದ 10 ತನಕ ಕೆಲಸ ಮಾಡುತ್ತಿರುವವರಿಗೆ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಇದು ದೊಡ್ಡ ಸಮಸ್ಯೆಯಲ್ಲ ಆದರೂ ಇದನ್ನು ನಾವು ನಿರ್ಲಕ್ಷಿಸುವಂತಿಲ್ಲ ಇದು ಮುಂದೆ ನಮ್ಮನ್ನು ನಿರಂತರವಾಗಿ ಕಾಡಬಹುದು.

ಕತ್ತು ನೋವಿಗೆ ಹಲವಾರು ಕಾರಣಗಳಿವೆ. ನೀವು ಸರಿಯಾದ ಭಂಗಿಯಲ್ಲಿ ಮಲಗದಿದ್ದಲ್ಲಿ ಈ ನೋವು ಕಾಣಿಸಿಕೊಳ್ಳುತ್ತದೆ. ತಲೆ ದಿಂಬು ಸರಿಯಾಗಿಲ್ಲದಿದ್ದರೂ ಈ ನೋವು ಬರುತ್ತದೆ ಮತ್ತು ತಲೆ ದಿಂಬು ಹೆಚ್ಚು ಎತ್ತರವಾಗಿ ಇಟ್ಟುಕೊಂಡಲ್ಲಿ ಸಹ ಕಾಣಿಸಿಕೊಳ್ಳುತ್ತದೆ.

ಕಚೇರಿಯಲ್ಲಿ ನೀವು ಒಂದೇ ಕಡೆ ಕುಳಿತು ತಲೆ ಬಗ್ಗಿಸಿ ಕೆಲಸ ಮಾಡಿದರೂ ಈ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಮತ್ತು ಒತ್ತಡ ಹೆಚ್ಚಾದಾಗಲೂ ಈ ಸಮಸ್ಯೆ ಬರುತ್ತದೆ. ಕತ್ತಿನ ಮೇಲೆ ಭಾರ ಎತ್ತುವಾಗ ಸ್ನಾಯುಗಳಿಗೆ ಆಯಾಸವಾಗಿ ಅಥವಾ ಉಳುಕಿ ಕತ್ತು ನೋವು ಬರುವ ಸಾಧ್ಯತೆ ಉಂಟು.

ಇನ್ನು ಹಲವಾರು ರೀತಿಯ ಕಾರಣಗಳಿಂದ ನಿಮಗೆ ಕತ್ತು ನೋವು ಬರಬಹುದು ಆದ್ದರಿಂದ ಈ ರೀತಿಯಾಗಿ ಮಾಡುವುದರಿಂದ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ.

ಅತಿಯಾಗಿ ತಲೆ ದಿಂಬನ್ನು ಅಂದರೆ ಎತ್ತರದ ದಿಂಬು ಬಳಸಬೇಡಿ. ಕತ್ತು ನೋವಿಗೆ ನೀವು ಪ್ರತಿದಿನ ಬೆಳಗ್ಗೆ 5 ರಿಂದ 10 ನಿಮಿಷಗಳ ಕಾಲ ವ್ಯಾಯಾಮವನ್ನು ಮಾಡಿ ಅದರಿಂದ ನೋವು ನಿವಾರಿಸಿಕೊಳ್ಳಬಹುದು .

ಕತ್ತು ನೋವು ವಿಟಮಿನ್ ಡಿ ಕೊರತೆಯಿಂದ ಬರುವ ಸಾಧ್ಯತೆ ಇರುವುದರಿಂದ ಈ ವಿಟಮಿನ್ ಡಿ ಕೊರತೆಯಾಗದಂತೆ ನೋಡಿಕೊಳ್ಳಿ. ಹೀಗೆ ನಾವು ಮಾಡುವುದರಿಂದ ಕತ್ತು ನೋವಿಗೆ ಪದೇ ಪದೇ ವೈದ್ಯರ ಬಳಿ ಹೋಗಿ ಹಣ ಖರ್ಚು ಮಾಡುವ ಬದಲು ನಾವೇ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Comments are closed.