ಕರಾವಳಿ

ಬ್ಯುಸಿ ಸೆಡ್ಯೂಲ್ ಲೈಫ್​ನಲ್ಲಿ ಸಾಕು ಪ್ರಾಣಿಗಳ ಜೊತೆ ಕಾಲ ಕಳೆಯೋದ್ರಿಂದ ಅಗುವ ಪ್ರಯೋಜನ

Pinterest LinkedIn Tumblr

 ಸದಾ ನಮ್ಮನ್ನ ಖಿನ್ನತೆಗೆ ಹೋಗುವಂತೆ ಮಾಡುತ್ತವೆ. ಈ ಚಿಂತೆ.. ಆಲೋಚನೆಗಳು.. ಕೂತರೂ ಸಮಾಧಾನ ಇಲ್ಲ.. ನಿಂತರೂ ಸಮಾಧಾನ ಇಲ್ಲ.. ಮಲಗಿದ್ರೂ ನಿದ್ದೆ ಬರಲ್ಲ. ಜೀವನದಲ್ಲಿ ಸಂತೋಷವೇ ಇಲ್ಲ ಅಂತಾ ಕಂಪ್ಲೇಂಟ್​. ಒಂದು ಸಣ್ಣ ಚಿಂತೆ ಅದೆಷ್ಟೋ ಸಮಸ್ಯೆಗಳನ್ನ ಕ್ರಿಯೇಟ್ ಮಾಡಿಬಿಡುತ್ತೆ. ಎಷ್ಟೇ ದೊಡ್ಡ ಚಿಂತೆಗಳಿದ್ರೂ, ನೀವು ನಾಯಿ ಜೊತೆ ಸ್ವಲ್ಪ ಕಾಲಾವಕಾಶ ಕಳೆದ್ರೆ, ನಿಮಗೆ ಗೊತ್ತಿಲ್ಲದೇ ಹಣೆಯ ಮೇಲಿರುವ ಚಿಂತಾ ರೇಖೆಗಳು ಮಾಯಾವಾಗಿ, ತುಟಿಯ ಅಂಚಿನಲ್ಲಿ ಮುಗುಳ್ನಗೆ ರಾರಾಜಿಸಿರುತ್ತೆ. ಹೀಗಂತ ನಾವು ಹೇಳುತ್ತಿಲ್ಲ. ಪತ್ರಿಕೆ ವರದಿ ಒಂದನ್ನ ಪ್ರಕಟಿಸಿದೆ. ಈ ವರದಿ ಅಧ್ಯಯನದ ಪ್ರಕಾರ ನಮ್ಮ ಬ್ಯುಸಿ ಸೆಡ್ಯೂಲ್ ಲೇಫ್​ನಲ್ಲಿ ನಾಯಿಗಳ ಜೊತೆ ಸುಮಾರು ವಾರದಲ್ಲಿ 2.30 ಗಂಟೆ ಕಾಲ ಕಳೆಯೋದ್ರಿಂದ ಆರೋಗ್ಯ ಚೆನ್ನಾಗಿರಲಿದೆ ಅಂತಾ ಹೇಳಿದೆ.

ಹೃದಯದ ಆರೋಗ್ಯ
ನಾಯಿ ಜೊತೆ ಸ್ವಲ್ಪ ಕಾಲ ಸ್ಪೆಂಡ್​ ಮಾಡಿದ್ರೆ ಸಾಕು, ನಮ್ಮ ಮನಸ್ಸಿಗೆ ಮುದ ನೀಡೋದ್ರ ಜೊತೆ ಹೃದಯ ಆರೋಗ್ಯವೂ ಚೆನ್ನಾಗಿರಲಿದ್ಯಂತೆ. ನಾಯಿಗಳ ಜೊತೆ ಓಡುತ್ತ, ತಿರುಗಾಡುತ್ತ ಇರೋದ್ರಿಂದ ಹೃದಯದ ಆರೋಗ್ಯ ಚೆನ್ನಾಗಿರಲಿದೆ. ಕಂಪ್ಯಾನಿಯನ್ ತಳಿಯ ನಾಯಿ ಜೊತೆ ಆಟವಾಡೋದ್ರಿಂದ ಹೃದಯದ ಬಡಿತ, ರಕ್ತದ ಒತ್ತಡ, ಕೊಬ್ಬಿನ ಅಂಶವನ್ನು ನಿಯಂತ್ರಣದಲ್ಲಿರುತ್ತದೆ ಅಂತಾ ಅಧ್ಯಯನದ ಮೂಲಕ ತಿಳಿದು ಬಂದಿದೆ.

ಫಿಟ್​ ಮತ್ತು ಌಕ್ವಿವ್​
ಇತ್ತೀಚಿನ ದಿನಗಳಲ್ಲಿ ಟೆಕ್ನಾಲಜಿ ಮೂಲಕ ಕೆಲಸಗಳೇನು ಸುಲಭವಾಗಿದೆ. ಆದ್ರೆ ನಮ್ಮ ಫಿಟ್​ನೆಸ್​ ಕಾಪಾಡಲು ಸಮಯನೇ ಸಿಗೋದಿಲ್ಲ. ಹಾಗಾಗಿ ಸಿಗುವ ಅಲ್ಪಸ್ವಲ್ಪ ಟೈಮ್​ನಲ್ಲಿ ಸಂಜೆ ಹೊತ್ತು ನಾಯಿ ಜೊತೆ ಒಂದು ವಾಕ್​ ಮತ್ತು ಚಿಕ್ಕಪುಟ್ಟ ಆಟವನ್ನಾಡಿದ್ರೆ ಫಿಟ್​ನೆಸ್​ಗಾಗಿ ಯಾವುದೇ ಜಿಮ್​ ಮೊರೆ ಹೋಗುವ ಅಗತ್ಯವಿಲ್ಲ ಅಂತಿದ್ದಾರೆ Companion Animal Services ನ ನಿರ್ದೇಶಕ ಡಾ. ಕೆ.ಜಾಬರ್ಟ್​.

ವೇಟ್​ ಲಾಸ್​​
ನಂಗೆ ದೇಹದ ತೂಕ ಇಳಿಸಬೇಕು. ಎಷ್ಟೇ ಪ್ರಯತ್ನ ಪಟ್ರೂ ತೂಕ ಮಾತ್ರ ಕಡಿಮೆ ಆಗಲ್ಲ ಅನ್ನೋದು ಹಲವರ ಗೋಳು. ಆದ್ರೆ ನಾಯಿ ಜೊತೆ ಪ್ರತಿನಿತ್ಯ ವಾಕ್​ ಹೋಗೋದ್ರಿಂದ ದೇಹದ ತೂಕ ಕಡಿಮೆ ಮಾಡಬಹುದು. ಯಾಕೆಂದ್ರೆ ನಿಮ್ಮ ಇಚ್ಛೆ ಇಲ್ಲದೇ ಇದ್ರೂ ಶ್ವಾನಗಳು ಅವರ ಜೊತೆ ಓಡುವ ಹಾಗೇ ಮಾಡುತ್ತವೆ. ಈ ಮೂಲಕ ನಿಮ್ಮ ದೇಹಕ್ಕೆ ಬೇಕಾದ ಚಟುವಟಿಕೆಗಳು ಸಿಗುತ್ತವೆ.

ಸಾಮಾಜಿಕ ಜೀವನದಲ್ಲಿ ಬೆಳವಣಿಗೆ
ನಾವು ಟಿನೇಜ್​ನಲ್ಲಿರುವಾಗ ಫ್ರೆಂಡ್ಸ್​ ಮೀಟಿಂಗ್​, ಔಟಿಂಗ್​ ತುಂಬಾ ಜೋರಾಗಿರುತ್ತೆ. ಆದ್ರೆ ಅದೇ ವಯಸ್ಸಾದಂತೆ ಸಾಮಾಜಿಕ ಜೀವನದಿಂದ ಎಲ್ಲೂ ನಾವು ದೂರವಾಗಿ ಉಳಿತ್ತೀವಿ. ಹಾಗಿರುವಾಗ ಒಂಟಿತನವನ್ನು ಹೋಗಲಾಡಿಸಲು ಇರುವ ಬೆಸ್ಟ್​ ಫ್ರೆಂಡ್​ ಅಂದ್ರೆ ಶ್ವಾನಗಳು. ಶ್ವಾನಗಳು ನಮ್ಮ ಜೀವನದ ಭಾಗಗಳಾಗಿರಬಹುದು. ಆದ್ರೆ ನಾಯಿಗಳಿಗೆ ಮಾತ್ರ ನಾವೇ ಅವರ ಪ್ರಪಂಚವಾಗಿರುತ್ತೇವೆ.

ಒತ್ತಡ ಕಡಿಮೆ
ಶ್ವಾನಗಳು ತುಂಬಾ ಫ್ರೆಂಡ್ಲಿ ಹಾಗೂ ಌಕ್ಟೀವ್ ಆಗಿರುತ್ತವೆ. ಅದಲ್ಲದೇ ನಾಯಿಗಳು ಸುತ್ತಲು ಪಾಸಿಟಿವ್​ ಇನರ್ಜಿ ಇರುತ್ತದೆ. ಹೀಗಾಗಿ ನಾಯಿಗಳ ಜೊತೆ ಟೈಮ್​ ಸ್ಪೆಂಡ್​ ಮಾಡೋದ್ರಿಂದ ಒತ್ತಡ, ಚಿಂತೆಗಳು ನಮ್ಮ ಬಿಟ್ಟು ದೂರ ಓಡಲಿದೆ ಅಂತಾ ‘ಜೆರೊಂಟೊಲೊಜಿಸ್ಟ್’ ಅನ್ನೋ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ ಹೇಳಿದೆ.

ಕೃಪೆ: ನಂ ೧

Comments are closed.