ಕರಾವಳಿ

ಗರ್ಭಿಣಿಯರನ್ನು ಕಾಡುವ ಮಾರ್ನಿಂಗ್ ಸಿ‌ಕ್‌ನೆಸ್ ಗೆ ಇದು ರಾಮಬಾಣ

Pinterest LinkedIn Tumblr

ಇದರಲ್ಲಿರುವ ಗುಣ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇವು ಬಿಳಿ ರಕ್ತ ಕಣಗಳನ್ನು ಹೆಚ್ಚಿಸುವುದರ ಜೊತೆಗೆ ಅಧಿಕ ರಕ್ತದೊತ್ತಡವನ್ನು ನಿವಾರಿಸುತ್ತವೆ.

ಲವಂಗಗಳಿಂದ ಸಿಗುವ 7 ಪ್ರಯೋಜನಗಳು ಇಲ್ಲಿವೆ.

1. ಸೈನಾಸೈಟೀಸ್​ ಕಡಿಮೆ ಮಾಡುತ್ತದೆ
ಮೂಗಿನ ಮೇಲ್ಭಾಗದ, ಹಣೆಯ ಒಳಗಿರುವ ಟೊಳ್ಳು ಭಾಗದಲ್ಲಿ ಸೋಂಕು ಉಂಟಾಗಿ ಮೂಗು ಕಟ್ಟಿಕೊಂಡು ವಿಪರೀತ ತಲೆನೋವು ಕಾಣಿಸಿಕೊಳ್ಳುತ್ತದೆ. ಈ ವೇಳೆ ಒಂದು ಕಪ್​ ಲವಂಗ ಪುಡಿ ಬೆರೆಸಿದ ಟೀ ಕುಡಿಯಿರಿ. ಇದರಿಂದ ಸೋಂಕು ಕಡಿಮೆಯಾಗುತ್ತದೆ. ಅಥವಾ ಬೆಚ್ಚಗಿನ ನೀರಿನಲ್ಲಿ 3 ರಿಂದ 4 ಟೀ ಸ್ಪೂನ್ ಲವಂಗ ಎಣ್ಣೆಯನ್ನು ಸೇರಿಸಿ ಇದನ್ನು ಪ್ರತಿದಿನ ಕುಡಿಯುವುದರಿಂದಲೂ ಸೋಂಕು ಕಡಿಮೆಯಾಗಿಸಬಹುದು.

2. ಮಾರ್ನಿಂಗ್​ ಸಿಕ್​ನೆಸ್​
ಲವಂಗ ಆ್ಯಂಟಿಸೆಪ್ಟಿಕ್​ ಮತ್ತು ಅನೆಸ್ತೆಟಿಕ್​ ಗುಣವನ್ನ ಹೊಂದಿದ್ದು, ಇದರಿಂದ ಜೀರ್ಣಕ್ರಿಯೆ ಉತ್ತಮವಾಗಿರಲು ಸಹಾಯ ಮಾಡುತ್ತದೆ. ಹಾಗೇ ವಾಕರಿಕೆ ಮತ್ತು ವಾಂತಿಗಳಿಂದ ರಕ್ಷಿಸುವಂತಹ ಗುಣಗಳನ್ನು ಹೊಂದಿದೆ. ಇದು ಗರ್ಭಿಣಿಯರಿಗೆ ಬಹಳ ಪ್ರಯೋಜನಕಾರಿ ಎಂದು ಸಾಬೀತಾಗಿದೆ.

3. ಮೊಡವೆಗಳನ್ನ ನಿವಾರಿಸುತ್ತದೆ.
ಲವಂಗ ಎಣ್ಣೆಯಲ್ಲಿ ಆ್ಯಂಟಿ ಮೈಕ್ರೋಬಿಯಲ್​ ಗುಣಲಕ್ಷಣಗಳಿವೆ. ಈ ಕಾರಣದಿಂದ, ಇದು ಮೊಡವೆಗಳು ಬಾರದಂತೆ ಮತ್ತು ಹರಡದಂತೆ ಚರ್ಮವನ್ನ ರಕ್ಷಿಸುತ್ತದೆ. ಅಲ್ಲದೇ ಲವಂಗವು ರಕ್ತ ಶುದ್ಧೀಕರಣ ಗುಣಗಳನ್ನು ಹೊಂದಿದೆ. ಇದು ಮೊಡವೆಗಳಿಂದ ಉಂಟಾಗುವ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದಕ್ಕಾಗಿ ಲವಂಗವನ್ನ ಫೇಸ್​ಪ್ಯಾಕ್ ಮತ್ತು ಕ್ರೀಮ್​ಗಳಲ್ಲಿ ಮಿಶ್ರಣ ಮಾಡಬಹುದು.

4. ರೋಗನಿರೋಧಕ ಶಕ್ತಿ​ ಹೆಚ್ಚಿಸುತ್ತದೆ.
ಲವಂಗವು ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸಲು ಸಹಾಯ ಮಾಡುತ್ತದೆ. ಸೋಂಕುಗಳು ಮತ್ತು ಜ್ವರದಿಂದ ದೇಹವನ್ನು ರಕ್ಷಿಸುತ್ತದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್​ ಗುಣಗಳು ಆರೋಗ್ಯಕರ ಚರ್ಮವನ್ನ ಹೊಂದಲು ಸಹಾಯ ಮಾಡುತ್ತದೆ.

5. ಹಲ್ಲು ನೋವು ನಿವಾರಿಸುತ್ತದೆ.
ನಾವು ಸಾಮಾನ್ಯವಾಗಿ ಲವಂಗವನ್ನು ಟೂತ್​ಫೇಸ್ಟ್​ನಲ್ಲಿ ಹೆಚ್ಚಾಗಿ ಬಳಸುವುದನ್ನ ನೋಡುತ್ತೇವೆ. ಕಾರಣ ಲವಂಗಗಳು ನೋವು ನಿವಾರಕ ಅಂಶವನ್ನ ಹೊಂದಿದ್ದು, ತಾತ್ಕಾಲಿಕವಾಗಿ ನೋವನ್ನು ಕಡಿಮೆಮಾಡುತ್ತದೆ. ಒಂದು ಹತ್ತಿ ಉಂಡೆಯಲ್ಲಿ ಸ್ವಲ್ಪ ಲವಂಗ ಎಣ್ಣೆ ತೆಗೆದುಕೊಂಡು ಹಲ್ಲಿನ ಮೇಲೆ ಇಟ್ಟುಕೊಳ್ಳಿ. ಇದರಿಂದ ನೀವು ಹಲ್ಲು ನೋವಿನಿಂದ ಶೀಘ್ರ ಮುಕ್ತಿ ಹೊಂದಬಹುದು.

6. ಜೀರ್ಣಕ್ರಿಯೆಯನ್ನ ಸುಧಾರಿಸುತ್ತದೆ.
ಜೇನುತುಪ್ಪದೊಂದಿಗೆ ಲವಂಗ ಸೇವಿಸುವುದರಿಂದ ಜೀರ್ಣರಸಗಳು ಹೆಚ್ಚು ಸ್ರವಿಸಲು ಪ್ರಚೋದನೆ ದೊರೆಯುತ್ತದೆ. ಲವಂಗ ವಾಯು ಪ್ರಕೋಪಗಳನ್ನ ಶಮನಗೊಳಿಸುತ್ತದೆ. ಇದರಿಂದ ಹೊಟ್ಟೆಯ ಉರಿ, ಅತಿಸಾರ, ವಾಕರಿಕೆ, ಮತ್ತು ವಾಂತಿಗಳಿಂದ ನಿಮಗೆ ರಿಲೀಫ್​ ನೀಡುತ್ತದೆ.

7. ಶುಗರ್​ ನಿಯಂತ್ರಿಸುತ್ತದೆ.
ಇದು ಮಧುಮೇಹಕ್ಕೆ ನೀಡಲಾಗುವ ಸಾಂಪ್ರದಾಯಿಕ ಮನೆಮದ್ದುಗಳಲ್ಲಿ ಒಂದಾಗಿದೆ. ಲವಂಗ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಇದರಲ್ಲಿರುವ ಕೆಲವು ಪೋಷಕಾಂಶಗಳು ಇನ್ಸುಲಿನ್​ನಂತೆಯೇ ಕಾರ್ಯ ನಿರ್ವಹಿಸುತ್ತದೆ. ಮಂಡಿಗಳು ಕೆಂಪಾಗಿ ಊತ, ನೋವಿದ್ದರೆ ಕೆಮ್ಮಣ್ಣಿಗೆ ಮೇಕೆ ಹಾಲನ್ನು ಕಲಸಿ ಪೇಸ್ಟ್‌ ಮಾಡಿ ಮಂಡಿಗಳ ಮೇಲೆ ಲೇಪಿಸಿದರೆ ಕೆಂಪು ಕಡಿಮೆಯಾಗಿ ಊತ, ನೋವು ಶಮನವಾಗುತ್ತದೆ.

Comments are closed.