ಕರಾವಳಿ

ಬ್ರೌನ್​ರೈಸ್​ ತಿನ್ನುವುದರಿಂದ ಬೇಡವಾದ ಕೊಲೆಸ್ಟ್ರಾಲ್​ ನಿಯಂತ್ರಣ ಸಾದ್ಯ

Pinterest LinkedIn Tumblr

ಬಾಸುಮತಿಯಿಂದ ಹಿಡಿದು ಬ್ಲಾಕ್ ರೈಸ್​ವರೆಗೆ ಮಾರ್ಕೆಟ್​​ನಲ್ಲಿ ಹಲವು ಬಗೆಯ ಅಕ್ಕಿಗಳು ದೊರೆಯುತ್ತವೆ. ಅವುಗಳಲ್ಲಿ ಅತ್ಯಂತ ಆರೋಗ್ಯಕರ ಅಕ್ಕಿ ಅಂದ್ರೆ ಬ್ರೌನ್ ರೈಸ್. ಇದೊಂದು ಸಂಸ್ಕರಿಸದ ಧಾನ್ಯ. ಇದರಲ್ಲಿ ಜೀವಾಂಕುರ ಪದರ, ಹೊಟ್ಟು ಮತ್ತು ಪಾರ್ಶ್ವ ಸಿಪ್ಪೆ ಹಾಗೇ ಇರುತ್ತದೆ. ಡಯೆಟ್​ ಮಾಡುವವರಿಗೆ ಅನ್ನ​ ಬಿಟ್ಟು ಬೇರೆ ಏನೇ ತಿಂದರೂ ಸಮಾಧಾನ ಇರುವುದಿಲ್ಲ. ಊಟದಲ್ಲಿ ಸ್ವಲ್ಪವಾದರೂ ಅನ್ನ​ ತಿನ್ನಬೇಕು ಎಂದು ಬಯಸುತ್ತಾರೆ. ಇಂತವರಿಗೆ ಬ್ರೌನ್​ ರೈಸ್​ ಹೇಳಿ ಮಾಡಿಸಿದಂತಿದೆ. ಯಾಕಂದ್ರೆ ಬ್ರೌನ್​ರೈಸ್​ ತಿನ್ನುವುದರಿಂದ ಬೇಡವಾದ ಕೊಲೆಸ್ಟ್ರಾಲ್​ ನಿಯಂತ್ರಿಸಬಹುದು.

ಬ್ರೌನ್​ ರೈಸ್​ನಲ್ಲಿರೋ ಫೈಬರ್ ಮತ್ತು ಆ್ಯಂಟಿ ಆಕ್ಸಿಡೆಂಟ್​ಗಳು ಸ್ತನ ಕ್ಯಾನ್ಸರ್, ಕೊಲೊನ್ ಕ್ಯಾನ್ಸರ್ ಮತ್ತು ಲುಕೇಮಿಯಾದಂತಹ ಕಾಯಿಲೆ ಬರದಂತೆ ತಡೆಗಟ್ಟುತ್ತವೆ. ಬ್ರೌನ್ ರೈಸ್​​​ನಲ್ಲಿ ಕಿಮೋಪ್ರಿವೆಂಟಿವ್ ಅಂಶಗಳಿದ್ದು, ಅವು ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಯನ್ನು ತಡೆಗಟ್ಟುತ್ತವೆ.

1. ಜೀರ್ಣಕ್ರಿಯೆ ಹೆಚ್ಚಿಸುತ್ತದೆ
ಹಲವು ಅಧ್ಯಯನಗಳ ಪ್ರಕಾರ ಬ್ರೌನ್​ ರೈಸ್​ನಲ್ಲಿ ಫೈಟಿಕ್ ಆಸಿಡ್, ಫೈಬರ್ ಮತ್ತು ಅಗತ್ಯ ಪಾಲಿಫಿನಾಲ್ಸ್​​ಗಳು ಸಮೃದ್ಧವಾಗಿವೆ. ಇದು ಕಾಂಪ್ಲೆಕ್ಸ್​​ ಕಾರ್ಬೋಹೈಡ್ರೇಟ್ ಆಗಿದ್ದು, ಸಕ್ಕರೆಯನ್ನು ನಿಧಾನವಾಗಿ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಹೀಗಾಗಿ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನ ನಿಯಂತ್ರಿಸುತ್ತದೆ. ಬೆಂಗಳೂರು ಮೂಲದ ಪೌಷ್ಟಿಕತಜ್ಞ ಡಾ.ಅಂಜು ಸೂದ್ ಅವರ ಪ್ರಕಾರ, “ಬ್ರೌನ್ ರೈಸ್ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಆಹಾರವಾಗಿದೆ. ಅಂದರೆ ಜೀರ್ಣಕ್ರಿಯೆಯ ನಂತರ ಬ್ರೌನ್​​ ರೈಸ್​​ನಿಂದ ರಕ್ತದೊಳಗೆ ಬಿಡುಗಡೆಯಾಗುವ ಸಕ್ಕರೆ ಪ್ರಮಾಣ ಹೆಚ್ಚಾಗಿರುವುದಿಲ್ಲ. ಸಕ್ಕರೆ ನಿಧಾನವಾಗಿ ಬಿಡುಗಡೆ ಮಾಡುವುದರಿಂದ ಬೇಗನೆ ಹೀರಿಕೊಂಡು ರಕ್ತದ ಸಕ್ಕರೆ ಮಟ್ಟ ಇದ್ದಕ್ಕಿದ್ದಂತೆ ಹೆಚ್ಚಾಗದಂತೆ ನಿಯಂತ್ರಿಸುತ್ತದೆ.

2. ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ
ಬ್ರೌನ್​ ರೈಸ್​ನಲ್ಲಿ ಮ್ಯಾಂಗನೀಸ್ ಮತ್ತು ಫಾಸ್ಪರಸ್​ನಂತಹ ಖನಿಜಾಂಶಗಳಿವೆ. ಇದು ನಮ್ಮ ದೇಹ ಕೊಬ್ಬನ್ನು ನಿಯಂತ್ರಿಸಿ, ಸ್ಥೂಲಕಾಯವನ್ನು ತಡೆಯುತ್ತದೆ. ಬ್ರೌನ್​ರೈಸ್‌ನಲ್ಲಿ ಫೈಬರ್ ಹೇರಳವಾಗಿ ಇರುತ್ತದೆ. ಇದರಿಂದ ಈ ಅನ್ನವನ್ನು ಸ್ವಲ್ಪ ತಿಂದರೂ ಹೊಟ್ಟೆ ತುಂಬಿದ ಭಾವನೆ ಉಂಟಾಗುತ್ತದೆ. ಅಷ್ಟು ಬೇಗ ಹಸಿವೂ ಆಗಲ್ಲ. ಇದಲ್ಲದೆ, ಬ್ರೌನ್​ ರೈಸ್​ನಲ್ಲಿರುವ ಫೈಬರ್​ ಅಂಶವು ಕರುಳಿನ ಕ್ರಿಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಆಮ್ಲವನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸುಲಭಗೊಳಿಸಿ, ತೂಕ ನಿರ್ವಹಣೆಯಲ್ಲಿ ಸಹಾಯವಾಗುತ್ತದೆ.

3. ಡಯಾಬಿಟೀಸ್​ ನಿಯಂತ್ರಿಸುತ್ತದೆ
ಮಧುಮೇಹ ಇರುವವರಿಗೆ ಬ್ರೌನ್ ರೈಸ್ ಒಳ್ಳೆಯ ಆಹಾರ ಎಂದು ಹೇಳಬಹುದು. ಯಾಕಂದ್ರೆ ವೈಟ್​ ರೈಸ್​ಗಿಂತಲೂ ಬ್ರೌನ್ ರೈಸ್​ನಲ್ಲಿ ಗ್ಲೆಸಿಮಿಕ್ ಇಂಡೆಕ್ಸ್ ತುಂಬಾ ಕಡಿಮೆ ಇರುತ್ತದೆ. ಅದಕ್ಕೆ ಕಾರಣ ಇದರಲ್ಲಿ ಇರುವ ಫೈಬರ್. ಇದರಿಂದ ಬ್ರೌನ್ ರೈಸ್ ತಿಂದಾಗ ಅದರಿಂದ ಉತ್ಪನ್ನವಾಗುವ ಗ್ಲೂಕೋಸ್ ನಮ್ಮ ರಕ್ತದಲ್ಲಿ ಅಷ್ಟು ಬೇಗ ಸೇರಲ್ಲ. ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗದಂತೆ ತಡೆಯುತ್ತದೆ. ಇದರಿಂದ ಡಯಾಬಿಟೀಸ್ ನಿಯಂತ್ರಣದಲ್ಲಿರುತ್ತದೆ. ಬ್ರೌನ್ ರೈಸ್​ನಲ್ಲಿರುವ ಕಾರ್ಬೋಹೈಡ್ರೇಟ್‌ಗಳು ನಿಧಾನವಾಗಿ ಕರಗುವುದರಿಂದ ಇದು ಶುಗರ್ ಅಂಶವನ್ನು ನಿಧಾನವಾಗಿ ಬಿಡುಗಡೆ ಮಾಡುತ್ತದೆ.

Comments are closed.