ಕರಾವಳಿ

ಈ ಹಣ್ಣನಲ್ಲಿದೆ ದೇಹಕ್ಕೆ ಅಗತ್ಯವಾದ ವಿಟಮಿನ್ಸ್​, ಮಿನರಲ್ಸ್​ ಮತ್ತು ನ್ಯೂಟ್ರಿಶನ್​ಗಳು

Pinterest LinkedIn Tumblr

ಮೇಲ್ನೋಟಕ್ಕೆ ಅಯ್ಯೋ ಕಿವಿ ಹಣ್ಣು ಯಾರು ತಿಂತಾರಪ್ಪ, ಹುಳಿ ಹುಳಿಯಾಗಿ ಇರುತ್ತೆ ಅಂತಾ ಹಲವರು ಅನ್ನೋದನ್ನ ಕೇಳೇ ಇರ್ತೀರಿ. ಹೀಗೆ ಅನ್ನೋರಿಗೂ ಒಮ್ಮೆ ಈ ಮಾಹಿತಿ ತೋರಿಸಿ. ನಾವು ಕಿವಿ ಫ್ರೂಟ್ ಯಾಕೆ ತಿನ್ನಬೇಕು ಅನ್ನೋದು ಅರ್ಥವಾಗುತ್ತೆ.

ಗ್ರೀನ್​ ಅಂಡ್​ ಬ್ಲಾಕ್​ ಕಾಂಬಿನೇಶನ್​ ಜೊತೆಯಲ್ಲಿ ಕಾಣೋ ಈ ಹಣ್ಣು ದೇಹಕ್ಕೆ ಬೇಕಾದ ಪೋಷಕಾಂಶಗಳನ್ನ ನೀಡುತ್ತೆ. ನ್ಯೂಜಿಲೆಂಡ್​ನ ನ್ಯಾಶನಲ್​ ಫ್ರೂಟ್​ ಆದ ಕಿವಿ ಹಣ್ಣು ಎಲ್ಲಾ ದೇಶದಲ್ಲೂ ತನ್ನದೇ ಅಸ್ಥಿತ್ವವನ್ನು ಹೊಂದಿದೆ. ಅಮೇರಿಕನ್ನರು ಮತ್ತು ಯುರೋಪಿಯನ್ನರು ಕಿವಿ ಹಣ್ಣು ಇಲ್ಲದೇ ನಮ್ಮ ಊಟ ಕಂಪ್ಲೀಟ್​ ಆಗೋದೇ ಇಲ್ಲ ಅಂತಾರೆ. ಈ ಹಣ್ಣು ದೇಹವನ್ನು ಆರೋಗ್ಯವನ್ನಾಗಿ ಇರಿಸುತ್ತದೆ.

ವಿಟಮಿನ್‍ಗಳ ಆಗರ
ಕಿವಿ ಹಣ್ಣು ವಿಟಮಿನ್‍ಗಳ ಆಗರ. ಇದರಲ್ಲಿ ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್ ಇ ಮತ್ತು ಪೊಟ್ಯಾಷಿಯಂ ಸಮೃದ್ಧವಾಗಿದೆ. ಉತ್ತಮ ಪ್ರಮಾಣದ ನಾರಿನಂಶ ಹೊಂದಿರುವ ಈ ಹಣ್ಣು ದೇಹಕ್ಕೆ ಚೈತನ್ಯವನ್ನು ನೀಡಿ, ಅನಾರೋಗ್ಯವನ್ನು ಸರಿಪಡಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಈ ಹಣ್ಣನ್ನು ಡೆಂಗ್ಯೂ ಆವರಿಸಿದ ಸಮಯದಲ್ಲಿ ಸೇವಿಸುವುದರಿಂದ ರಕ್ತ ಕಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡುಕೊಳ್ಳಬಹುದು.

ಕಿವಿ ಹಣ್ಣಲ್ಲಿ ನಿಮಗೆ ಸಿಗೋದೇನು?
ಯುನೈಟೆಡ್​ ಸ್ಟೇಟ್ಸ್ ಡಿಪಾರ್ಟ್​ಮೆಂಟ್​ ಆಫ್​ ಅಗ್ರಿಕಲ್ಚರ್​ ಪ್ರಕಾರ ಈ ಕಿವಿ ಹಣ್ಣಿನಲ್ಲಿ ನಮಗೆ ಏನೇಲ್ಲಾ ಸಿಗುತ್ತೆ ಗೊತ್ತಾ? 100 ಗ್ರಾಂ ಕಿವಿ ಹಣ್ಣಲ್ಲಿ ಇದೆಲ್ಲ ಇರುತ್ತೆ..!

61 ಕ್ಯಾಲರೀಸ್​
14.66 ಗ್ರಾಂ ಕಾರ್ಬೋಹೈಡ್ರೇಟ್ಸ್
1.14 ಗ್ರಾಮ್ಸ್​ ಪ್ರೋಟಿನ್​
0.52 ಗ್ರಾಂ ನಷ್ಟು ಫ್ಯಾಟ್​
3 ಗ್ರಾಂ ನಷ್ಟು ಫೈಬರ್​

ಕಿವಿ ಹಣ್ಣು ತಿನ್ನೋದ್ರ ಪ್ರಯೋಜನವೇನು ?
ಕಿವಿ ಹಣ್ಣು ತಿನ್ನೋದ್ರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ಸ್​, ಮಿನರಲ್ಸ್​ ಮತ್ತು ನ್ಯೂಟ್ರಿಶನ್​ಗಳು ದೊರೆಯುತ್ತದೆ. ಕಿವಿ ಹಣ್ಣಿನಿಂದ ಯಾವೆಲ್ಲಾ ಬೆನಿಫಿಟ್​ಗಳು ದೊರೆಯುತ್ತದೆ ಅನ್ನೋದ್ರ ಡೀಟೆಲ್ಸ್​ ಇಲ್ಲಿದೆ.

1. ವಿಟಮಿನ್​ ಸಿ
ವಿಟಮಿನ್​ ಸಿ ಅಂದಾಕ್ಷಣ ನಿಮಗೆ ಮೊದಲು ಕಣ್ಮುಂದೆ ಬರೋದು ನಿಂಬೆಹಣ್ಣು ಮತ್ತು ಕಿತ್ತಲೆ ಹಣ್ಣು. ಆದ್ರೆ ಕಿವಿ ಹಣ್ಣಿನಲ್ಲಿ ಈ ಎರಡೂ ಹಣ್ಣಿಗಿಂತ ದುಪ್ಪಟ್ಟು ವಿಟಮಿನ್​​ ಸಿ ದೊರೆಯುತ್ತದೆ.

2. ನಿದ್ರಾಹೀನತೆ
ಪ್ರತಿದಿನ ಕಷ್ಟ ಪಟ್ಟು ಫುಲ್​ ಸುಸ್ತಾಗಿ ಹೋಗಿ ನಿದ್ದೆ ಮಾಡೋಣ ಅಂದ್ಕೊಂಡ್ರೂ ನಿದ್ದೆ ಬರೋಲ್ಲ. ಹೀಗೊಂದು ಸಮಸ್ಯೆ ನಿಮಗೂ ಇದ್ರೆ ಕಿವಿ ಹಣ್ಣು ಬೆಸ್ಟ್​ ಸಲ್ಯೂಶನ್​ ಅನ್ನುತ್ತೆ ತೈಪಿ ಯುನಿವರ್ಸಿಟಿ ಸಂಶೋಧನೆ.

3. ವಿಟಮಿನ್ ಇ
ಸಾಮಾನ್ಯವಾಗಿ ವಿಟಮಿನ್ ಇ ಇರುವ ಆಹಾರದಲ್ಲಿ ಕೊಬ್ಬಿನಂಶವಿರುತ್ತದೆ. ಆದರೆ ಕಿವಿ ಹಣ್ಣಿನಲ್ಲಿ ಕೊಬ್ಬಿನಂಶ ತುಂಬಾ ಕಡಿಮೆ ಇದ್ದು ವಿಟಮಿನ್ ಇ ಇರುವುದರಿಂದ ತ್ವಚೆ ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು

4. ನಾರಿನಂಶ
ಇದರಲ್ಲಿ ನಾರಿನಂಶ ಅಧಿಕ ಇರುವುದರಿಂದ ಮಲಬದ್ಧತೆ, ಅಜೀರ್ಣತೆ ಸಮಸ್ಯೆ ನಿವಾರಣೆಯಾಗುತ್ತೆ. ಅಲ್ಲದೆ ಈ ನಾರಿನಂಶ ದೇಹದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.

Comments are closed.