ಮಂಗಳೂರು, ಡಿಸೆಂಬರ್.06 : ಬಿಜೆಪಿ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ವಿ.ಧನಂಜಯ ಕುಮಾರ್ ಇದೀಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವಿ. ಧನಂಜಯ ಕುಮಾರ್ ಅವರನ್ನು ಕೆಲ ತಿಂಗಳುಗಳಿಂದ ನಗರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಆರೋಗ್ಯ ತೀರಾ ಬಿಗಡಾಯಿಸಿದ ಕಾರಣ ಮಾಜಿ ಸಚಿವರು ಕೋಮ ಸ್ಥಿತಿಯಲ್ಲಿದ್ದು ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. 67 ವರ್ಷದ ಧನಂಜಯ ಕುಮಾರ್ ಈಗ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು ಗುರುತು ಹಿಡಿಯಲಾರದಷ್ಟು ಅವರು ಕೃಶರಾಗಿದ್ದಾರೆ.
ಧನಂಜಯ್ ಕುಮಾರ್ ಹಿನ್ನೆಲೆ : ಕೇಂದ್ರದ ಹಣಕಾಸು ಖಾತೆ ರಾಜ್ಯ ಸಚಿವರಾಗಿದ್ದ ವಿ.ಧನಂಜಯ ಕುಮಾರ್, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗ. ಅಲ್ಪಸಂಖ್ಯಾತ ಜೈನ ಸಮುದಾಯದ ಧನಂಜಯ ಕುಮಾರ್, ಕೆಲ ವರ್ಷಗಳ ಹಿಂದೆ ಬಿಜೆಪಿ ಭೀಷ್ಮ ಅಡ್ವಾಣಿ ಅವಕೃಪೆಗೆ ಇಡಾಗಿ ರಾಜಕೀಯ ಅವನತಿಯತ್ತ ಮುಖ ಮಾಡಿದರು. ರಾಜಕೀಯ ಬದಲಾವಣೆಯಿಂದ ಕಾಂಗ್ರೆಸ್, ಜೆಡಿಎಸ್ ಗೂ ಎಡತಾಕಿದರಾದರೂ ಈ ಘಟನೆ ಬಳಿಕ ಮತ್ತೆ ರಾಜಕೀಯವಾಗಿ ಧನಂಜಕುಮಾರ್ ಮೇಲೇಳಲೇ ಇಲ್ಲ.
ಈಗ ಕಳೆದ ನಾಲ್ಕು ತಿಂಗಳಿಂದಲೂ ಧನಂಜಯ ಕುಮಾರ್ ಕೋಮಾ ಸ್ಥಿತಿಯಲ್ಲಿದ್ದಾರೆ. ಮಂಗಳೂರಿನ ಆಸ್ಪತ್ರೆ ಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ.
Comments are closed.