ಕರಾವಳಿ

ಓಮಿನ ಕಾಳಿನ ನೀರಿನಿಂದ ದೇಹದ ತೂಕ ಇಳಿಕೆ ಸಾಧ್ಯ…?

Pinterest LinkedIn Tumblr

ದೇಹದ ತೂಕ ಇಳಿಸಲು ನೂರಾರು ವಿಧಾನಗಳಿವೆ. ಕೆಲವರಿಗೆ ಮೈ ಬಗ್ಗಿಸಿದರೆ ಮಾತ್ರ ದೇಹದ ತೂಕ ಇಳಿಯುತ್ತೆ. ಮತ್ತೆ ಕೆಲವರಿಗೆ ತಿನ್ನುವ ಆಹಾರದ ಪಥ್ಯವೂ ವರ್ಕ್ ಔಟ್ ಆಗುತ್ತೆ. ಬಾಯಿ ಕಟ್ಟುವುದು ಅಥವಾ ಮೈ ಬಗ್ಗಿಸುವುದು ಅಂದು ಕೊಂಡಷ್ಟು ಸುಲಭವಲ್ಲ. ಇವೆರಡು ಮಾಡಲು ದೃಢ ಮನಸ್ಸು ಬೇಕು. ಇವೆಲ್ಲವುಕ್ಕಿಂತಲೂ ಈಸಿ ಎಂದರೆ ಓಮಿನ ಕಾಳಿನ ನೀರು ಕುಡಿಯುವುದರಿಂದ ಎರಡು ವಾರದಲ್ಲಿ ಆರು ಕೆ.ಜಿ ಇಳಿಸಿಕೊಳ್ಳಬಹುದು ಗೊತ್ತಾ?

ಕೆಲವರು ನಿಂಬು-ಜೇನಿನ ರಸ, ಕೊತ್ತಂಬರಿ ಹಾಗೂ ಜೀರಾ ನೀರು ಕುಡಿದು ತೂಕ ಇಳಿಸಿಕೊಳ್ಳುತ್ತಾರೆ. ಆದರೆ, ಎಲ್ಲರಿಗೂ ಎಲ್ಲ ಪಥ್ಯ ಸೂಟ್ ಆಗೋಲ್ಲ. ಈ ಎಲ್ಲ ಕಸರತ್ತು ಮಾಡಿದರೂ ಏನೂ ಪ್ರಯೋಜನವಾಗಿಲ್ಲವೆಂದರೆ ಓಮಿನ ಕಾಳಿನ ನೀರು ಕುಡಿದು ಒಮ್ಮೆ ತೂಕ ಇಳಿಸಿಕೊಳ್ಳಲು ಟ್ರೈ ಮಾಡಿ. ಇದರಿಂದ ಅನೇಕರಿಗೆ ಕಿಬ್ಬೊಟ್ಟೆಯ ಕೊಬ್ಬೂ ಕರಗಿ ದೇಹ ಸುಂದರವಾಗಿರುವ ಉದಾಹರಣೆಗಳಿವೆ. ಊಟಕ್ಕೂ ಒಂದು ಗಂಟೆ ಮುಂಚೆ ಅಥವಾ ಖಾಲಿ ಹೊಟ್ಟೇಲಿ ಈ ನೀರನ್ನು ಕುಡಿದರೆ, ನೀಡೋ ಪರಿಣಾಮ ಅದ್ಭುತ ಎನ್ನುತ್ತಾರೆ, ಈ ಪಥ್ಯ ಮಾಡಿದವರು.

ನೀರನ್ನು ಹೇಗೆ ಕುಡೀಬೇಕು: ಒಂದು ಟೀ ಸ್ಪೂನ್ ಓಮಿನ ಕಾಳನ್ನು ರಾತ್ರಿ ಇಡೀ ನೀರಿನಲ್ಲಿ ನೆನಸಿಡಿ. ಬೆಳಗ್ಗೆ ಕಾಳಿನೊಂದಿಗೆ ನೀರನ್ನೂ ಕುದಿಸಿ. ಅದನ್ನು ಸೋಸಿ ನೀರನ್ನು ಕುಡಿದು, ಗಂಟೆ ನಂತರ ಏನಾದರೂ ತಿನ್ನಿ.

ಈ ಔಷಧಿ ಕೇವಲ ನಿಮ್ಮ ತೂಕವನ್ನು ಇಳಿಸಲು ಮಾತ್ರ ಸಹಕಾರಿಯಲ್ಲ, ಬದಲಾಗಿ ಪಚನ ಕ್ರಿಯೆಯನ್ನು ಉತ್ತಮಗೊಳಿಸಿ, ಸುಟ್ಟು ತೇಗು ಬರುವುದನ್ನು ನಿಯಂತ್ರಿಸುತ್ತದೆ. ನಿಮ್ಮ ಸೊಂಟದ ಸುತ್ತಲಿನ ಅನಗತ್ಯ ಬೊಜ್ಜನ್ನೂ ಕರಗಿಸಬಲ್ಲದು. ಮತ್ತೂ ಒಳ್ಳೆ ಫಲಿತಾಂಶ ಬರ ಬೇಕೆಂದರೆ ಈ ನೀರನ್ನು ದಿನಕ್ಕೆ ಮೂರ್ನಾಲ್ಕು ಬಾರಿ ಕುಡೀಬಹುದು.

Comments are closed.